ಯುವಕ ಕಾಣೆ ಪತ್ತೆಗೆ ಸಹಕರಿಸಲು ಸೂಚನೆ.

ಕೊಪ್ಪಳ ಏ. ೨೦ ಕೊಪ್ಪಳ ತಾಲೂಕಿನ ಮುನಿರಾಬಾದ ಗ್ರಾಮದ ಅಲ್ತಾಫ್ ಹುಸೇನ್(೨೩) ಎಂಬ ಯುವಕ ಕಾಣೆಯಾಗಿದ್ದು, ಯುವಕನ ಪತ್ತೆಗೆ ಸಹಕರಿಸುವಂತೆ ಮುನಿರಾಬಾದ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜಯಪ್ರಕಾಶ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ತಾಫ್ ಹುಸೇನ ಎಂಬ ಯುವಕ ಕಳೆದ ಮಾ.೮ ರಂದು ಹುಬ್ಬಳ್ಳಿಯಲ್ಲಿನ ಕಂಪನಿ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾನೆ. ಕಂಪನಿಯವರು ಯಾವುದೇ ಕೆಲಸಕ್ಕೆ ಕಳುಹಿಸಿರುವುದಿಲ್ಲ ಎಂದು ಹೇಳಿದ್ದು, ಈ ಯುವಕನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು ಎಲ್ಲಿಯೋ ಕಾಣೆಯಾಗಿರುತ್ತಾನೆ. ಕಾಣೆಯಾದ ಯುವಕನ ಚಹರೆ ವಿವರ ಇಂತಿದೆ: ಹೆಸರು ಅಲ್ತಾಫ್ ಹುಸೇನ್(೨೩), ಜಾತಿ-ಮುಸ್ಲಿಂ, ಎತ್ತರ ೫.೮ ಅಡಿ, ದುಂಡು ಮುಖ, ಸಾಧಾರಣ ಮೈಕಟ್ಟು, ಸಾದಾಗೆಂಪು ಮೈಬಣ್ಣ, ಬಿಳಿ ಅಂಗಿ ನೀಲಿ ಜೀನ್ಸ್ ಪ್ಯಾಂಟು ಧರಿಸಿದ್ದು, ALTAF HUSENಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಈ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಪ್ಪಳ-೦೮೫೩೯-೨೩೦೧೧೧, ಡಿಎಸ್‌ಪಿ, ಕೊಪ್ಪಳ-೦೮೫೩೯-೨೨೨೪೩೩, ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತರವರ ಕಛೇರಿ -೦೮೫೩೯-೨೨೧೩೩೩ ಅಥವಾ ಮುನಿರಾಬಾದ ಪೊಲೀಸ್ ಠಾಣೆ ೦೮೫೩೯-೨೭೦೩೩೩ ಗೆ ಸಂಪರ್ಕಿಸುವಂತೆ ತಿಳಿಸಿದೆ.

Please follow and like us:
error