You are here
Home > Koppal News-1 > koppal news > ಮೌಂಟ್ ಎವರೆಸ್ಟ್ ಪರ್ವತ ಏರಿದ ಕೊಪ್ಪಳದ ಅಧಿಕಾರಿ

ಮೌಂಟ್ ಎವರೆಸ್ಟ್ ಪರ್ವತ ಏರಿದ ಕೊಪ್ಪಳದ ಅಧಿಕಾರಿ

s-prabhakaran-first-ifs-officer-to-climb-mount-everest-dfo-koppal

ಕೊಪ್ಪಳದಲ್ಲಿ ಅರಣ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಎಸ್.ಪ್ರಭಾಕರನ್ ಮೌಂಟ್ ಎವರೆಸ್ಟ್ ಪರ್ವತ ಏರುವಲ್ಲಿ ಸಫಲರಾಗಿದ್ದಾರೆ.  2011 ರ ಬ್ಯಾಚ್ ಐಎಫ್ಎಸ್ ಅಧಿಕಾರಿ ಪ್ರಭಾಕರನ್ ಅವರು ಮೌಂಟ್ ಎವರೆಸ್ಟ್ ಪರ್ವತ ಆರೋಹಣ ಕಾರ್ಯಕ್ಕೆ ಕಳೆದ ವರ್ಷವೇ ತೆರಳಿದ್ದರು, ಆದರೆ, ಕಳೆದ ವರ್ಷ ನೇಪಾಳ ಮತ್ತು ಹಿಮಾಲಯದಲ್ಲಿ ಸಂಭವಿಸಿದ ಭೂಕಂಪದ ಕಾರಣಕ್ಕೆ ಅವರ ಪ್ರಯತ್ನ ಕೈಗೂಡಿರಲಿಲ್ಲ‌ ಹೀಗಾಗಿ ಹಿಂದಿರುಗಿದ್ದರು ಪ್ರಧಾನಿಗಳ ಆಶಯದಂತೆ ಸ್ವಚ್ಛ ಭಾರತ ಅಭಿಯಾನ ಬ್ಯಾನರ್ ಅನ್ನು ಮೌಂಟ್ ಎವರೆಸ್ಟ್ ಶಿಖರ ದಲ್ಲಿ ತಲುಪಿಸುವದಕ್ಕೆ ಪ್ರಯತ್ನಿಸಿದ್ದರು. ಆದರೆ ವಿಫಲರಾಗಿದ್ದರು. ಇವರೊಂದಿಗೆ  ಇಬ್ಬರು ಐಎಸ್ ಎಸ್ ಅಧಿಕಾರಿಗಳು ರವಿಂದ್ರ ಕುಮಾರ್,ವಿಕ್ರಮ್ ಜಿಂದಾಲ್,  ಐಪಿಎಸ್ ಅಧಿಕಾರಿಗಳಾದ ಸರೋಜ್ ಕುಮಾರಿ, ಸುಹೇಲ್ ಶರ್ಮಾ ಸಹ ತಂಡದಲ್ಲಿದ್ದರು. ಎರಡು ವರ್ಷಗಳ ನಂತರ  ಇದೀಗ ಅವರ ಪ್ರಯತ್ನ ಸಫಲವಾಗಿದ್ದು ಗುರಿ ತಲುಪಿದ್ದಾರೆ.  ಮೌಂಟ್ ಎವರೆಸ್ಟ್ ಶಿಖರ ಏರಿದ ಪ್ರಥಮ ಐ ಎಫ್ ಎಸ್ ಅಧಿಕಾರಿ ಎಂಬ ಕೀರ್ತಿಗೆ ಎಸ್.ಪ್ರಭಾಕರನ್ ಪಾತ್ರರಾಗಿದ್ದಾರೆ.

Leave a Reply

Top