ಮೌಂಟ್ ಎವರೆಸ್ಟ್ ಏರಿದ ಕೊಪ್ಪಳದ ಐಎಫ್‌ಎಸ್ ಅಧಿಕಾರಿ ಪ್ರಭಾಕರನ್ ಅಭಿನಂದನೆ.

ಕೊಪ್ಪಳ-29- ಮೌಂಟ್ ಎವರೆಸ್ಟ್ ಶಿಖರವೇರಿದ ರಾಷ್ಟ್ರದ ಮೊದಲ ಐಎಫ್‌ಎಸ್ ಅಧಿಕಾರಿ ಎನ್ನುವ ಹೆಗ್ಗಳಿಗೆ ಪಾತ್ರವಾಗಿರುವ ಕೊಪ್ಪಳದ ಅರಣ್ಯ ಉಪಸಂರಕ್ಷಣಾಧಿಕಾರಿ ಎಸ್ ಪ್ರಭಾಕರನ್ ಅವರನ್ನು ನವದೆಹಲಿಯಲ್ಲಿರುವ ಕರ್ನಾಟಕ ಭವನದ ನಿವಾಸಿ ಆಯುಕ್ತ ಅತುಲ್ ಕುಮಾರ್ ತಿವಾರಿ ಅವರು ಅಭಿನಂದಿಸಿದರು.  ನಂತರ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಉಪ ಸಂಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಮಿಳುನಾಡಿನ ಪಿರುವಣ್ಣ ಮಲೈನ ೨೦೧೧ ರ ಬ್ಯಾಚಿನ ಐಎಫ್‌ಎಸ್ ಅಧಿಕಾರಿ ಎಸ್. ಪ್ರಭಾಕರನ್ ಅವರು ಮೌಂಟ್ ಎವರೆಸ್ಟ್ ಶಿಖರವನ್ನೇರುವ ಮೂಲಕ ರಾಜ್ಯ ಹಾಗು ರಾಷ್ಟ್ರಕ್ಕೆ ಕೀರ್ತಿ ತಂದು, ಯುವಕರಿಗೆ ಮಾದರಿಯಾಗಿದ್ದಾರೆ. ಅವರು ಮತ್ತಷ್ಟು ಹೆಚ್ಚಿನ ಸಾಧನೆ ಮಾಡಲೆಂದು ಹಾರೈಸಿದರು.  ಕಳೆದ ವರ್ಷ ಮೌಂಟ್ ಎವರೆಸ್ಟ್ ಏರಲು ಪ್ರಯತ್ನಿಸಲಾಗಿದ್ದು, ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಸಾಧಿಸFeliciated photoಲಾಗಲಿಲ್ಲ. ಕಳೆದ ಏಪ್ರಿಲ್ ೮ ರಂದು ಶಿಖರವನ್ನು ಚೀನಾ ಭಾಗದ ಉತ್ತರ ದಿಕ್ಕಿನ ಮೂಲಕ ಏರಲು ಪ್ರಾಂರಂಭಿಸಿ ಮೇ ೧೯ ರಂದು ಮಧ್ಯರಾತ್ರಿ ತಲುಪಲಾಯಿತು. ಮೇ ೨೦ ರಂದು ಬೆಳಿಗ್ಗೆ ೬.೩೦ ಕ್ಕೆ ದಾಖಲೆಯಲ್ಲಿ ನಮೂದಿಸಲಾಯಿತು. ಬುದ್ದಪೂರ್ಣಿಮೆಯ ಸಂದರ್ಭದಲ್ಲಿ ಸಾಧನೆಗೈದದ್ದು ಸಾರ್ಥಕವಾಯಿತು ಎಂದು ಪ್ರಭಾಕರನ್ ತಿಳಿಸಿದರು. ಮೌಂಟ್ ಎವರೆಸ್ಟ್‌ನ ಉತ್ತರ ಭಾಗ ಬಹಳ ಆಳವಿತ್ತು. ಅತೀ ಎತ್ತರ ಪ್ರದೇಶವಾಗಿದ್ದರಿಂದ ಆಮ್ಲಜನಕದ ತೊಂದರೆಯೂ ಆಗುತ್ತಿತ್ತು. ಮೊದಲ ಬೇಸ್ ಕ್ಯಾಂಪ್ ೫೪೦೦ ಅಡಿ ಎತ್ತರದಲ್ಲಿದ್ದು, ಇಲ್ಲಿಗೆ ತಲುಪಲು ಆಮ್ಲ ಜನಕದ ಕೊರತೆ ಎದುರಾಗುವುದಿಲ್ಲ. ನಂತರ ೬೪೦೦ ಮೀಟರ್ ಎತ್ತರದಲ್ಲಿರುವ ಅಡ್ವಾನ್ಸ್ ಕ್ಯಾಂಪ್, ಕೃತಕ ಆಮ್ಲ ಜನಕದ ಸಹಾಯದಿಂದ ತದನಂತರ ೭೧೦೦ ಮೀಟರ್ ಎತ್ತರದಲ್ಲಿರುವ ನಾರ್ಥ್ ಕೊಲ್ ಕ್ಯಾಂಪ್, ಕೊನೆಯದಾಗಿ ಮೂರನೇ ಹಂತವಾಗಿ ೮೩೦೦ ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಏರಿದ ನಂತರ ಕಡಿದಾಗಿರುವ ಶಿಖರದ ತುತ್ತ ತುದಿಯಾಗಿರುವ ೮೮೫೦ ಮೀಟರ್ ಎತ್ತರದ ಶಿಖರವನ್ನೇರಿ ದಾಖಲೆ ಮಾಡಲಾಯಿತು ಎಂದರು.  ಹೈದ್ರಾಬಾದ್ ಮೂಲದ ಟ್ರಾನ್ಸ್ ಅಡ್ವೆನ್ಚರ್ ಕಂಪನಿಯು ಪ್ರಾಯೋಜಕತ್ವವನ್ನು ಹೊಂದಿತ್ತು. ಕ್ಯಾಂಪ್ ನಲ್ಲಿ ಊಟವೂ ದೊರಕುತ್ತಿತ್ತು. ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಬೀಸಿದಾಗ ಅಪಾಯವೂ ಇರುತ್ತಿತ್ತು ಅಲ್ಲದೇ ಖಾಯಿಲೆಗೂ ಬೀಳುವ ಸಂಭಾವವೂ ಉಂಟಾಗುತ್ತಿತ್ತು. ಕಳೆದ ೨ ವರ್ಷದಿಂದ ಶಿಖರವನ್ನೇರಲು ಪ್ರಯತ್ನಿಸಲಾಗಿದ್ದು, ನಿರಂತರ ರಾಕಿಂಗ್ ಮೂಲಕ ಈ ಸಾಧನೆಗೈಯಲು ಅನುಕೂಲವಾಯಿತು. ಅದೃಷ್ಟವಶಾತ್ ಯಾವುದೇ ನ್ಯೂನತೆಯಾಗದಂತೆ ತಮ್ಮೊಂದಿಗೆ ತಂಡದಲ್ಲಿದ್ದ ಇಬ್ಬರು ಐಎಎಸ್ ಅಧಿಕಾರಿಗಳು ಹಾಗು ಇಬ್ಬರು ಐಪಿಎಸ್ ಅಧಿಕಾರಿಗಳು ಶಿಖರವನ್ನೇರಲು ಯಶಸ್ವಿಯಾದರು. ಆರಂಭದಲ್ಲಿ ಅಂಜಿಕೆ ಇತ್ತು, ಆದರೆ ಈಗ ಮತ್ತೊಮ್ಮೆ ಮೌಂಟ್ ಎವರೆಸ್ಟ್ ಅನ್ನು ದಕ್ಷಿಣ ಭಾಗದಿಂದ ಏರುವ ಬಯಕೆ ಇದ್ದು, ಅವಕಾಶ ಒದಗಿದರೆ ಮತ್ತೊಮ್ಮೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.  ಸಂದರ್ಭದಲ್ಲಿ ಕರ್ನಾಟಕ ಭವನದ ಉಪನಿವಾಸಿ ಆಯುಕ್ತರಾದ ಅನೀಸ್ ಕೆ ಜಾಯ್, ಶ್ರೀಕಾಂತ ರಾವ್, ಜಂಟಿ ನಿವಾಸಿ ಆಯುಕ್ತ ರಂಗಸ್ವಾಮಿ, ಸಹಾಯಕ ನಿವಾಸಿ ಆಯುಕ್ತ ಶೈಲೇಂದ್ರ ಸಿಂಗ್ , ನವದೆಹಲಿಯಲ್ಲಿರುವ ಕರ್ನಾಟಕ ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪಕಾ ಇಲಾಖೆ ವಾರ್ತಾಧಿಕಾರಿ ಹೆಚ್. ಶ್ರೀನಿವಾಸ ಉಪಸ್ಥಿತರಿದ್ದರು.

Please follow and like us:
error

Related posts

Leave a Comment