You are here
Home > Koppal News-1 > ಮೋಹಿನಿ ಭಸ್ಮಾಸುರ ಪೌರಾಣಿಕ ನಾಟಕ ಪ್ರದರ್ಶನ

ಮೋಹಿನಿ ಭಸ್ಮಾಸುರ ಪೌರಾಣಿಕ ನಾಟಕ ಪ್ರದರ್ಶನ

hampi-utsav-2016-programmes

ಹಂಪಿ ಉತ್ಸವದ ಅಂಗವಾಗಿ ಹಂಪಿಯ ಶ್ರೀ ಕೃಷ್ಣ ವಿಜಯ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಳ್ಳಾರಿ ತಾಲೂಕಿನ ಹಂದ್ಯಾಳ್ ಗ್ರಾಮದ ಶ್ರೀ ಮಹದೇವ ತಾತಾ ಕಲಾ ಸಂಘದ ವತಿಯಿಂದ ಮೋಹಿನಿ ಭಸ್ಮಾಸುರ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ಪಂಚಗಲ್ ಬಸವರಾಜ ಅವರ ರಚಿಸಿದ ಈ ನಾಟಕವನ್ನು ಉಮಾರಾಣಿ ಇಳಕಲ್ ನಿರ್ದೇಶನದಲ್ಲಿ ಭಸ್ಮಾಸುರನಾಗಿ ಸಂಘದ ಅಧ್ಯಕ್ಷ ಪುರುಷೋತ್ತಮ್ ಹಂದ್ಯಾಳ್, ಪರಮೇಶ್ವರನ ಪಾತ್ರದಲ್ಲಿ ಹುಬ್ಬಳ್ಳಿಯ ಅನಿತಾ ಶೆಟ್ಟಿ, ಪಾರ್ವತಿಯಾಗಿ ಉಮಾರಾಣಿ ಇಳಕಲ್, ವಿಷ್ಣು ಪಾತ್ರದಲ್ಲಿ ಅಮರೇಶ್ ಬಳ್ಳಾರಿ, ಬ್ರಹ್ಮ ಪಾತ್ರದಲ್ಲಿ ಪಲ್ಲೇದ ನಾಗರಾಜ, ದೇವೇಂದ್ರ ಪಾತ್ರದಲ್ಲಿ ಬಳ್ಳಾರಿಯ ನಾಗಭೂಷಣ, ವೀರಭದ್ರ ಪಾತ್ರದಲ್ಲಿ ರಾಜೇಶ್, ಗಣಪತಿ ಪಾತ್ರದಲ್ಲಿ ಬಿ. ರಮಣಪ್ಪ, ಷಣ್ಮುಖನ ಪಾತ್ರದಲ್ಲಿ ರಕ್ಷಿತ್ ಅವರು ಅಭಿನಯಿಸಿದ ನಾಟಕ ಜನ ಮನ ಸೂರೆಗೊಂಡಿತು.
ಈ ನಾಟಕಕ್ಕೆ ತಿಪ್ಪೇಸ್ವಾಮಿ ಸೂಲದಹಳ್ಳಿ ಕ್ಯಾಷಿಯೋ, ವಿರುಪಾಕ್ಷರಾವ್ ಮೋರಿಗೆರೆ ತಬಲಾ, ನ್ಯತ್ಯ ಕುಮಾರಿ ಸಹನಾ ಹಿರೇಮಠ್, ಹಿನ್ನೆಲೆ ಗಾಯನ ಕುಮಾರಿ ಶೃತಿ ಹಂದ್ಯಾಳ್ ಅವರು ನೀಡಿದರು.

Leave a Reply

Top