ಮೋದಿ ಅಕ್ಷರಶಃ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ : ತ್ರಿಪುರ ಸಿಎಂ ಮಾಣಿಕ್ ಸರ್ಕಾರ್

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ತ್ರಿಪುರ ಸಿಎಂ ಮಾಣಿಕ್ ಸರ್ಕಾರ್ :  manik_sarkar_tripuura_cm

ಹಲವಾರು ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಸಂಪೂರ್ಣ ವಿಫಲರಾಗಿದ್ದಾರೆ. ಬಡವರಿಗೆ ಸಾಲ ಕೊಟ್ಟರೆ ಮನೆಯನ್ನೇ ಜಪ್ತಿ ಮಾಡುವ ಬ್ಯಾಂಕುಗಳು ೧೧ ಲಕ್ಷ ಕೋಟಿಗೂ  ಹೆಚ್ಚು ಹಣವನ್ನು ಕಾರ್ಪೋರೇಟರ್ ಕಂಪನಿಗಳು ಸಾಲ ಪಡೆದಿದ್ದರೂ ವಸೂಲಿ ಮಾಡುವ ಬದಲಿಗೆ ಅವರ ೨ ಲಕ್ಷ ಕೋಟಿ ಹಣವನ್ನು ಮನ್ನಾ ಮಾಡಲಾಗಿದೆ ಎಂದರೆ ಇದು ಯಾರ ಸರಕಾರ ಎನ್ನುವುದು ಗೊತ್ತಾಗುತ್ತೆ

ನೋಟು ಅಮಾನ್ಯದ ಕುರಿತು ಸಂಸತ್ ನಲ್ಲಿ ಮಾತನಾಡದ ನರೇಂದ್ರ ಮೋದಿ, ಹೊರಗಡೆ ಮಾತನಾಡುತ್ತಿದ್ದಾರೆ ಇದು ಅಕ್ಷರಶಃ ಪ್ರಜಾಪ್ರಭುತ್ವ ವಿರೋಧಿ ನೀತಿ, ನೋಟು ಅಮಾನ್ಯದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆಇದರಿಂದ ದೇಶದಲ್ಲಿನ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ, ಶೇ 33 ರಷ್ಟು ಆರ್ಥಿಕ ವ್ಯವಸ್ಥೆ ಕುಸಿದಿದೆ, ಶೇ 60 ರಷ್ಟು ಉತ್ಪಾದನೆ‌ ಕಡಿಮೆಯಾಗಿದೆಶೇ 60 ರಷ್ಟು ಬ್ಯಾಂಕ್ ಅಕೌಂಟ್ ಇಲ್ಲದ ಜನರು ದೇಶದಲ್ಲಿದ್ದಾರೆ. ಇಂಥ ದೇಶದಲ್ಲಿ ಕ್ಯಾಶ್ ಲೆಸ್ ವಹಿವಾಟು ಮಾಡುತ್ತಿದ್ದಾರೆ.ಕೋಟ್ಯಂತರ ಜನರು ಅನಕ್ಷರಸ್ಥರಾಗಿರುವ ಈ ದೇಶದಲ್ಲಿ ನಗದು ರಹಿತ ವಹಿವಾಟು ಅಸಾಧ್ಯ. ಈ ಎಲ್ಲ ಸಮಸ್ಯೆ ಪರಿಹಾರಕ್ಕೆ ಜನರು ಒಗ್ಗೂಡಿ ಹೋರಟ ಮಾಡಬೇಕಿದೆ. ಹೋರಾಟದ ಹೊರತಾಗಿ ಬೇರೆ ಮಾರ್ಗವಿಲ್ಲ

Leave a Reply