ಮೋದಿಯವರ ಜನಪರ ಯೋಜನೆಗಳು ಸಾಮಾನ್ಯ ಜನರ ಮನೆ ಮನೆಗೆ ಮುಟ್ಟಿಸಲು-ಅಕ್ಕಾಪಕ್ಕಿ ಕರೆ

koppal-bjp
ಕೊಪ್ಪಳ. ಸೆ. ೨೪: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಜನತೆಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ಮಾಡಿದ್ದು, ಈ ಎಲ್ಲಾ ಯೋಜನೆಗಳನ್ನು ದೇಶದ ಕಟ್ಟಕಡೆಯ ಕುಟುಂಬಕ್ಕೂ ಸಹ ಮುಟ್ಟಬೇಕಾದರೆ ಬಿಜೆಪಿ ಪಕ್ಷದ ನಾವೆಲ್ಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೋದಿಯವರ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಮನವರಿಕೆ ಮಾಡಿದಾಗ ಮಾತ್ರ ಮೋದಿಯವರ ನೀಡಿರುವ ಯೋಜನೆಗಳು ಸಾರ್ಥಕವಾಗುತ್ತವೆ ಎಂದು ಬಿಜೆಪಿ ನಗರ ಮಂಡಳದ ಅಧ್ಯಕ್ಷರಾದ ಶಿವಕುಮಾರ ಅಕ್ಕಾಪಕ್ಕಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ನಗರದ ಕಾತರಕಿ ರಸ್ತೆಯ ಮಾಣಿಕ್ಯ ರೆಸಿಡೆನ್ಸಿ ಹಾಲ್‌ನಲ್ಲಿ ಬಿಜೆಪಿ ನಗರ ಮಂಡಲದ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಹಾಗೂ ನಗರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಹಾಗೂ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಗ್ರಾ.ಪಂ.ಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಭೂತ, ವಾರ್ಡ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಸಂಘಟನೆ ಬಲಿಷ್ಟಗೊಳಿಸುವಂತೆ ಕರೆ ನೀಡಿದ ಅವರು, ಇತ್ತೀಚಿಗೆ ಜರುಗಿದ ನಿತೀನ್ ಗಡ್ಕರಿಯವರ ಕಾರ್ಯಕ್ರಮವು ನಗರ ಮಂಡಳದ ಕಾರ್ಯಕರ್ತರು ಯಶಸ್ವಿಯಾಗಿ ಜರುಗಲು ಕಾರಣಿಭೂತರಾಗಿದ್ದು, ಅದು ನನ್ನ ಹಸಿವಿನ ಕೆಲಸವಾಗಿತ್ತು ಎಂದು ಶಿವಕುಮಾರ ಅಕ್ಕಾಪಕ್ಕಿ ಹೇಳಿದರು.
ನಂತರ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡರೆ ಮಾತ್ರ ಪಕ್ಷ ಸಂಘಟನೆ ಸಾಧ್ಯವಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪರ ಯೋಜನೆಗಳಾದ ಜನಧನ, ರೈತರಿಗೆ ವಿಮಾ ಯೋಜನೆ, ಗ್ಯಾಸ್ ಸಿಲಿಂಡರ್ ಕೊಡಿಸುವ ಬಗ್ಗೆ ಸೇರಿದಂತೆ ಹಲವಾರು ಯೋಜನೆಗಳನ್ನು ನರೇಂದ್ರ ಮೋದಿಯವರ ಪ್ಲಾಟ್ ಫಾರಂ ಭೂತ ಮಟ್ಟಕ್ಕೆ ಪಕ್ಷ ಮುಖಿಯಾಗಿ ಕೆಲಸ ಮಾಡಿದಾಗ ಮಾತ್ರ ಪಕ್ಷ ಸಂಘಟನೆಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ಮುಖಂಡರಾದ ರಾಘವೇಂದ್ರ ಪಾನಗಂಟಿ ವಕೀಲರು, ಜಿಲ್ಲಾ ಕೋಶಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನಾಸಿರ್ ಹುಸೇನ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಧುರಾ ಕರಣಂ, ಎಸ್.ಸಿ. ಮೋರ್ಚಾದ ನಗರ ಮಂಡಲದ ಅಧ್ಯಕ್ಷ ಚನ್ನಬಸಪ್ಪ ಹೆಚ್.ಹೂಳೆಪ್ಪನವರ, ಪ್ರಧಾನ ಕಾರ್ಯದರ್ಶಿಗಳಾದ ಮಾರ್ಕಂಡೆಪ್ಪ ಡಿ.ಹಲಗಿ, ಮಂಜುನಾಥ ಕೆ., ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ರುದ್ರಪ್ಪ ಹಲಗೇರಿ, ಕೋಶಾಧ್ಯಕ್ಷ ಅಜ್ಜಪ್ಪ ಚಕ್ಕಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಉಮೇಶ ಕೊರಡೆಕರ್, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕಳಕಪ್ಪ ಜಾಧವ್, ನಗರಸಭೆ ಸದಸ್ಯರುಗಳಾದ ಪ್ರಾಣೇಶ ಮಹೇಂದ್ರಕರ, ಸುವರ್ಣ ಬಸವರಾಜ ನಿರಲಗಿ, ನಾಮದೇವ ಜಕ್ಕಲಿ, ಯುವ ಘಟಕದ ಅಧ್ಯಕ್ಷ ಗವಿಸಿದ್ದಯ್ಯ ವಿರುಪಾಕ್ಷಯ್ಯ ಗದುಗಿನಮಠ, ಹಾಲೇಶ ಕಂದಾರಿ ಸೇರಿದಂತೆ ಪಕ್ಷದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರು ಹಾಗೂ ಮಹಿಳಾ ಘಟಕದ ಸದಸ್ಯರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಪಕ್ಷದ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ದೇವರಾಜ ಹಾಲಸಮುದ್ರ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Please follow and like us:
error