ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ.

ಕೊಪ್ಪಳ ಏ.೨೧ ಕೊಪ್ಪಳದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಜಿಲ್ಲೆಯ ಯುವಕರಿಗೆ ಮಲ್ಟಿ ಫೋನ್ ಸರ್ವಿಸಿಂಗ್(ಮೊಬೈಲ್ ರಿ2012-10-10~77_ns_0ಪೇರಿ) ಉಚಿತ ತರಬೇತಿಗಾಗಿ ಆಸಕ್ತ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಅವಧಿ ೩೦ ದಿನಗಳಾಗಿದ್ದು ಉಚಿತ ಊಟ ಮತ್ತು ವಸತಿ ವ್ಯವಸ್ತೆ ಇರುತ್ತದೆ, ಆಸಕ್ತರು ಅರ್ಜಿ ಸಲ್ಲಿಸಲು ಕನಿಷ್ಠ ೧೦ ನೇ ತರಗತಿ ಪಾಸಾಗಿರಬೇಕು, ವಯೋಮಿತಿ ೧೮ ರಿಂದ ೪೫ ವರ್ಷದೊಳಗಿರಬೇಕು, ಕೊಪ್ಪಳ ಜಿಲ್ಲೆಯವರಾಗಿರಬೇಕು, ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅರ್ಜಿ ಸ್ವಿಕರಿಸಲು ಏ.೨೯ ಕೊನೆಯ ದಿನ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಏ.೩೦ ರಂದು ಬೆಳಗ್ಗೆ ೧೦.೩೦ ಗಂಟೆಗೆ ಸಂದರ್ಶನ ಇರುತ್ತದೆ. ಮೇ.೨ ರಿಂದ ತರಬೇತಿ ಪ್ರಾರಂಭಗೊಳ್ಳಲಿದ್ದು, ಅರ್ಜಿಯನ್ನು ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ ಕೊಪ್ಪಳ ಇವರಿಂದ ಪಡೆದು, ಏ. ೨೯ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ:೦೮೫೩೯-೨೩೧೦೩೮ ಇಲ್ಲಿಗೆ ಸಂಪರ್ಕಿ ಸಂಪರ್ಕಿಸಬಹುದು ಎಂದು ತಿಳಿಸಿದೆ.

Related posts

Leave a Comment