ಮೇ.೩೦ ರಂದು ಶ್ರೀ ಹುಲಿಗೆಮ್ಮ ದೇವಿ ಮಹಾ ರಥೋತ್ಸವ

ದಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿಯ ಮಹಾರಥೋತ್ಸವ ಮೇ.೩೦ ರಂದು ಸಂಜೆ ೫-೩೦ ಗಂಟೆಗೆ ನೆರವೇರಲಿದೆ.
ಹುಲಿಗೆಮ್ಮ ದೇವಿ ಜಾತ್ರೆ ಅಂಗವಾಗಿ ಮೇ.೨೨ ರಿಂದ ಜೂನ್.೦೨ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಮೇ.೨೨ ರಂದು ಕಂಕಣಧಾರಣೆ, ೨೯ ರಂದು ಸಂhuligemma-devi-templeಜೆ ೭.೦೦ ಗಂಟೆಗೆ ಉತ್ಸವ, ೩೦ ರಂದು ಅಕ್ಕಿಪಡಿ ಹಾಗೂ ಅಂದು ಸಂಜೆ ೫-೩೦ ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ಮೇ. ೩೧ ರಂದು ಬಾಳಿದಂಡಿಗೆ, ಸಂಜೆ ೮ ಗಂಟೆಗೆ ಕೊಂಡದ ಪೂಜಾ, ಬೆಳಗಿನ ಜಾವ ೩.೩೦ ಗಂಟೆಗೆ ಗಂಗಾದೇವಿ ಪೂಜಾ, ೪ ಗಂಟೆಗೆ ದೇವಿಗೆ ಪ್ರಸಾದ ಕಟ್ಟುವುದು, ಹಾಗೂ ೪.೩೦ ಕ್ಕೆ ಬಾಳಿದಂಡಿಗೆ ಆರೋಹಣ. ಜೂ.೧ ರಂದು ಪಾಯಸ ಅಗ್ನಿಕುಂಡ, ಸಂಜೆ ೮ ಗಂಟೆಗೆ ಕೊಂಡದ ಪೂಜಾ, ರಾ. ೯ ಗಂಟೆಗೆ ಹಿಡಿದಕ್ಷಿಣೆ ವಿತರಣೆ, ೯.೩೦ ಕ್ಕೆ ಪಡಗದ ಪೂಜಾ, ಬೆಳಗಿನ ಜಾವ ೪ ಗಂಟೆಗೆ ಗಂಗಾದೇವಿ ಪೂಜಾ, ೪.೩೦ ಕ್ಕೆ ದೇವಿಗೆ ಪ್ರಸಾದ ಕಟ್ಟುವುದು, ೫.೩೦ ಕ್ಕೆ ದೇವಿಗೆ ಪ್ರಸಾದ ನಿವೇದನೆ ಕಾರ್ಯಕ್ರಮ ಹಾಗೂ ಜೂ.೨ ರಂದು ಬೆಳಗ್ಗೆ ೬.೩೦ ಗಂಟೆಗೆ ಅಗ್ನಿಕುಂಡ ನಡೆಯಲಿವೆ. ಮೇಲಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
ಹುಲಿಗೆಮ್ಮ ದೇವಿಗೆ ಸಲ್ಲಿಸುವ ಬೆಳ್ಳಿ, ಬಂಗಾರ, ಕಾಣಿಕೆ ಹಾಗೂ ಮುಡುಪುಗಳನ್ನು ದೇವಸ್ಥಾನದ ಕಚೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು ಅಥವಾ ಹುಂಡಿಯಲ್ಲಿ ಹಾಕಬೇಕು. ರಶೀದಿ ಪಡೆಯದೇ ಕೊಡುವ ಕಾಣಿಕೆಗಳು ದೇವಿಯ ನಿಧಿಗೆ ಸೇರುವುದಿಲ್ಲ. ಉಚಿತ ಅನ್ನ ದಾಸೋಹಕ್ಕೆ ದವಸ ಧಾನ್ಯ ನೀಡಬಯಸುವ ಭಕ್ತಾದಿಗಳು ಗಣಕೀಕೃತ ಕೌಟರ್‌ನಲ್ಲಿ ನೀಡಿ ರಸೀದಿ ಪಡೆಯಬಹುದು.
ಜಾತ್ರೆಯ ಸಂದರ್ಭದಲ್ಲಿ ಯಾವುದೇ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ದಂಡ ವಿಧಿಸಲಾಗುವುದು. ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಮಹಾನಕ್ಷೆ ತಯಾರಿಸಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭಕ್ತಾದಿಗಳು ಉದಾರವಾಗಿ ತನುಮನದಿಂದ ದೇಣಿಗೆ ನೀಡಲು ಕೋರಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳು ಮುನಿರಾಬಾದ್ ರೇಲ್ವೆ ನಿಲ್ದಾಣದಲ್ಲಿ ಇಳಿಯಬೇಕು, ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ತಿಳಿಸಿದ್ದಾರೆ.

Leave a Reply