ಮೇ೦೮ ರಂದು ವೀರಅಭಿಮನ್ಯು ಕಾಳಗ ಬಯಲಾಟ (ದೊಡ್ಡಾಟ) ಪ್ರದರ್ಶನ

ಗಂಗಾವತಿ: ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ರಥೋತ್ಸವದ ಅಂಗವಾಗಿ ಬಸವಜಯಂತಿಯ ಮುನ್ನಾ ದಿನ ಮೇ- ೦೮ರಂದು ಭಾನುವಾರ ರಾತ್ರಿ ೮-೩೦ಕ್ಕೆ ಶ್ರೀನೀಲಕಂಠೇಶ್ವರ ವೃತ್ತದಲ್ಲಿರುವ ಬಾಲಕಿಯರ ಶಾಲಾ ರಂಗಸಜ್ಜಿಕೆಯಲ್ಲಿ ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ವೇದಿಕೆಯ ಕಲಾವಿದರಿಂದ ’ವೀರಅಭಿಮನ್ಯು ಕಾಳಗ ಬಯಲಾಟ (ದೊಡ್ಡಾಟ) ಪ್ರದರ್ಶನಗೊಳ್ಳಲಿದೆ.
ಕೈಮಗ್ಗ ನಿಗಮ ಮಂಡಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ ನಾಗಪ್ಪ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ ಪ್ರದರ್ಶನವನ್ನು ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ, ಶಾಸಕ ಅನ್ಸಾರಿ ಜ್ಯೋತಿ ಬೆಳಗಿಸಲಿದ್ದು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉದ್ಯಮಿಗಳಾದ ಎಂ.ರವೀಂದ್ರನಾಥ್ ನಾಗಪ್ಪ, ಸಿಂಗನಾಳ್ ವಿರುಪಾಕ್ಷಪ್ಪ, ಕಾಂಗ್ರೆಸ್ ಮುಖಂಡರಾದ ನರಸಪ್ಪ ಅಮರಜ್ಯೋತಿ, ಪತ್ರಿಕೋದ್ಯಮಿ ಎಂ.ಎ.ವಲಿಸಾಹೇಬ್ (ಹಕೀಂಸಾಬ್), ನಗರಸಭೆ ಅಧ್ಯಕ್ಷರಾದ ಹುಲಿಗೆಮ್ಮ ಕಾಮದೊಡ್ಡಿ ದೇವಪ್ಪ, ಸಿಂಗನಾಳ್ ಸುರೇಶ್, ರಂಗಕರ್ಮಿ ಹಾಲ್ಕುರ್ಕಿ ಶಿವಶಂಕರ್, ತಾಲೂಕಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಯಮನೂರಪ್ಪ ಹುಳ್ಳೂರಿ, ಸೇರಿದಂತೆ ಇತರರು ಪಾಲ್ಗೊಳ್ಳುವರು. ಐಲಿ ಮಾರುತಿ (ಶ್ರೀಕೃಷ್ಣ), ಮೈಲಾರಪ್ಪ ಶಾವಿ (ಭೀಮ), ಪತ್ರಕರ್ತ ನಾಗರಾಜ್ ಇಂಗಳಗಿ (ಅಭಿಮನ್ಯು), ವಿರುಪಾಕ್ಷಪ್ಪ ಶಿರವಾರ (ದ್ರೋಣ), ಐಲಿ ರವಿ (ಸೈಂಧವ), ಚಿದಾನಂದಪ್ಪ ವೀರಗಂಟಿ (ದುರ್ಯೋಧನ) ಮತ್ತಿತರ ನುರಿತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಪ್ಪ ಶಿರವಾರ ತಿಳಿಸಿದ್ದಾರೆ.

Photo courtesy : Prajavani

Please follow and like us:
error

Related posts

Leave a Comment