ಮೇವು ಸುಟ್ಟುಹಾಕದಿರಿ, ಶೇಖರಿಸಿಡಿ ಅಥವಾ ಮಾರಾಟ ಮಾಡಿ

????????????????????????????????????

ರೈತರಲ್ಲಿ ಪಶುಪಾಲನಾ ಇಲಾಖೆ ಮನವಿ
ಕೊಪ್ಪಳ, : ಜಿಲ್ಲೆಯಲ್ಲಿ ಸತತ ಬರದಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಯಿರುವುದರಿಂದ ರೈತರು ಭತ್ತ ಮತ್ತು ಇತರೆ ಬೆಳೆಗಳಿಂದ ಬರುವ ಮೇವನ್ನು ಸುಟ್ಟು ಹಾಕಬಾರದು. ದಾಸ್ತಾನು ಮಾಡಿ ಇಡಿ ಅಥವಾ ಸರ್ಕಾರಕ್ಕೆ ಮಾರಾಟ ಮಾಡಿ ಎಂದು ಪಶುಪಾಲನಾ ಇಲಾಖೆ ರೈತರಲ್ಲಿ ಮನವಿ ಮಾಡಿದೆ.
ಕೊಪ್ಪಳ ಜಿಲ್ಲೆಯ ೪ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು, ಭತ್ತ ಮತ್ತು ಇತರೆ ಬೆಳೆಗಳಿಂದ ಬರುವ ಮೇವನ್ನು ಸುಟ್ಟು ಹಾಕದೇ ಬಣವೆ ಹಾಕಿಕೊಂಡು ಶೇಖರಿಸಿಟ್ಟು ಅತವಾ ಸುರುಳಿ ಸುತ್ತಿ ಕಟ್ಟಿ ಹಾಕಿಕೊಳ್ಳಬೇಕು, ಅವಶ್ಯಕತೆ ಕಂಡು ಬರುವ ಸಂದರ್ಭದಲ್ಲಿ ರೈತರು ಸರ್ಕಾರಕ್ಕೆ ಮಾರಾಟ ಮಾಡಬಹುದು.
ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಮೇವು ಮಾರಾಟ ಅಥವಾ ಸಾಗಾಣಿಕೆಯನ್ನು ಜಿಲ್ಲಾಡಳಿತ ಈಗಾಗಲೆ ನಿರ್ಬಂಧಿಸಿದ್ದು, ರೈತರು ಜಿಲ್ಲಾ ಆಡಳಿತದೊಂದಿಗೆ ಸಹಕರಿಸಬೇಕು. ಮೇವು ಹೊಂದಿರುವ ರೈತರು ಆಯಾ ತಾಲೂಕಿನ ತಹಸೀಲ್ದಾರರು ಅಥವಾ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Please follow and like us:
error