ಮೂಲ ಜನಪದ ಕಲೆಯ ಅನಾವರಣವೇ ಕಜಾಪ ಗುರಿ

ಕುಕನೂರ. ಮೇ. ೯. ಮೂಲ ಜನಪದ ಕಲೆ ಮತ್ತು ಕಲಾವಿದರ ರಕ್ಷಣೆ, ಕಲೆಯ ಅನಾವರಣವೇ ಕನ್ನಡ ಜಾನಪದ ಪರಿಷತ್ ಗುರಿ ಎಂದು ಕೊಪ್ಪಳ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ಪಟ್ಟಣದ ಡಾ|| ಬಿ. ಆರ್. ಅಂಬೇಡ್ಕರ ವೃತ್ತದ ಬಳಿ ಇರುವ ಖಾದಿ ಭಂಡಾರ ಕಛೇರಿಯಲ್ಲಿ ಯಲಬುರ್ಗಾ ತಾಲೂಕ ಘಟಕ ಮತ್ತು ಕುಕನೂರ ಹೋಬಳಿ ಘಟಕಗಳ ರಚನೆ ಸಂಭಂದ ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದೇ ವೇಳೆ ಮಹಾ ಮಾನವತಾವಾದಿ ಬಸವಣ್ಣನವರ ಜಯಂತಿಯನ್ನು ಬಸವ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು.
ಪ್ರತಿ ಹಳ್ಳಿಯಲ್ಲಿನ ಕಲಾವಿದರ ದಾಖಲೀಕರಣ, ಸರಕಾರದ ಸೌಲಭ್ಯಗಳನ್ನು ಒದಗಿಸುವದು, ಅವರ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಡಿಜಿಟಲ್ ರೆಕಾರ್ಡಿಂಗ್ ಕೆಲಸ ಮಾಡಬೇಕಿದೆ, ಸರಕಾರವೂ ಸಹ ಜನಪದ ಕಲಾವಿದರ ರಕ್ಷಣೆಗೆ ಮುಂದಾಗಬೇಕು, ಕಲಾವಿದರ ಸಮೀಕ್ಷೆ ಆಗಬೇಕು ಎಂದು ಇದೇ ವೇಳೆ ಒತ್ತಾಯಿಸಿದರು. ಹನುಮಂತಪ್ಪ ಝಳಕಿ ನಿರೂಪಿಸಿದರು, ಮಹಾಂತೇಶ ನೆಲಾಗಣಿ ವಂದಿಸಿದರು.
ಯಲಬುರ್ಗಾ ತಾಲೂಕ ಪದಾಧಿಕಾರಿಗಳು : ಹನುಂತಕುಮಾರ ಮುಧೋಳ (ಗೌರವ ಅಧ್ಯಕ್ಷರು), ಹನುಮಂತಪ್ಪ ಝಳಕಿ (ಅಧ್ಯಕ್ಷ), ಮಹಾಂತೇಶ ನೆಲಾಗಣಿ (ಪ್ರಧಾನ ಕಾರ್ಯದರ್ಶಿ), ಉಮೇಶ ಕಂಬಳಿ (ಖಜಾಂಚಿ), ಶಶಿಕಲಾ ನಿಂಗಾಪೂರ (ಜಂಟಿ ಕಾರ್ಯದರ್ಶಿ), ಯಲ್ಲಮ್ಮ ಮಾಸ್ತಿ (ಸಹ ಕಾರ್ಯದರ್ಶಿ), ಶರಣಪ್ಪ ಛಲವಾದಿ (ಪತ್ರಿಕಾ ಕಾರ್ಯದರ್ಶಿ) ಹಾಗೂ ದೇವೇಂದ್ರಗೌಡ ಪೂಜಾರ, ರುದ್ರಪ್ಪ ಭಂಡಾರಿ, ಕಳಕಪ್ಪ ತಳವಾರ, ಶಿವರಾಜ ದೊಡ್ಡಮನಿ, ಶಾಂತಮ್ಮ ಪೂಜಾರ, ಮುದಕಮ್ಮ ತರಲಕಟ್ಟಿ (ಕಾರ್ಯಕಾರಿ ಸಮಿತಿ ಸದಸ್ಯರು). ಕುಕನೂರ ಹೋಬಳಿ ಪದಾಧಿಕಾರಿಗಳು : ಮಂಜುನಾಥ ನಾಡಗೌಡ್ರ (ಗೌರವ ಅಧ್ಯಕ್ಷರು), ಶರಣಯ್ಯ ಇಟಗಿ (ಅಧ್ಯಕ್ಷ), ರಮೇಶ ಗಜಕೋಶ ವಕೀಲರು (ಪ್ರಧಾನ ಕಾರ್ಯದರ್ಶಿ), ಸುಮಂಗಲ ಮುಳಗುಂದಮಠ (ಖಜಾಂಚಿ), ಪಾರಮ್ಮ ಲಮಾಣಿ (ಜಂಟಿ ಕಾರ್ಯದರ್ಶಿ), ಮಂಜುನಾಥ ಬಡಿಗೇರ (ಸಹ ಕಾರ್ಯದರ್ಶಿ), ಮುರಾರಿ ಶಿ. ಭಜಂತ್ರಿ (ಪತ್ರಿಕಾ ಕಾರ್ಯದರ್ಶಿ) ಹಾಗೂ ಯಮನೂರಪ್ಪ ಭಜಂತ್ರಿ, ಇಮಾಮಸಾಬ ಕಲಾಲಬಂಡಿ, ಶಿವಪ್ಪ ಕ್ಯಾದಗುಂಪಿ, ಹುಲಿಗೆಮ್ಮ ವಜ್ರಬಂಡಿ, ಲಕ್ಷ್ಮಮ್ಮ ಛಲವಾದಿ, ಬಸವರಾಜ ದಿವಟರ್ (ಕಾರ್ಯಕಾರಿ ಸಮಿತಿ ಸದಸ್ಯರು)ಆಯ್ಕೆ ಮಾಡಲಾಗಿದ್ದು ತಾಲೂಕಿನಿಂದ ಜಿಲ್ಲಾ ಘಟಕಕ್ಕೆ ಪೀರಸಾಬ್ ದಫೇದಾರ, ಶರಣಗೌಡ ಮಾಲಿಪಾಟೀಲ ಮತ್ತು ಶರಣಬಸಪ್ಪ ದಾನಕೈರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Related posts

Leave a Comment