ಮುತ್ತು ಕನ್ನಡಿಗರ ಸ್ವತ್ತು

ಅಂದು ಮುಂದು
ಅಂದು ಇಂದು ಮುಂದೆಂದೂ
ಕನ್ನಡಿಗರಿಗೆಲ್ಲಾ ಅಣ್ಣಾವ್ರೇ ಮುಂದು
dr-rajkumar-birthday

ಪಾತ್ರಗಳಿಗೆ ಜೀವ ತುಂಬುತ್ತಲೇ
ಕನ್ನಡಿಗರ ಮನೆ-ಮನ ಸೇರಿದ ರಾಜಣ್ಣ
ಚಲನಚಿತ್ರಗಳಷ್ಟೇ ಅಲ್ಲದೆ ಕನ್ನಡಿಗರ ಕೂಗು
ಹೋರಾಟಕ್ಕೆ ದ್ವನಿಯಾದರು ಕನ್ನಡಿಗರ ಮುತ್ತು ರಾಜಣ್ಣ

ಇಂದಿನ ನಟರೆಲ್ಲಾ ಮಾಡುತ್ತಿದ್ದಾರೆ
ಮಾಸ್ತಿಯನ್ನು ಮಸ್ತಿಯಾಗಿ
ಮದಕರಿಯನ್ನು ಈ ಶತಮಾನದವನನ್ನಾಗಿ
ಶರಣರ ಕೈಯಲ್ಲಿ ಬಂದೂಕು ನೀಡಿ ಪಡೆಯುತ್ತಿದ್ದಾರೆ ಪ್ರಚಾರ

ಸುಳ್ಳೇ ಸುಳ್ಳು ಈ ಭೂಮಿಮ್ಯಾಲೆ ಎಲ್ಲಾ ಸುಳ್ಳು
ಸುಳ್ಳನ್ನು ಸತ್ಯವಾಗಿಸಿ ಸತ್ಯವನ್ನು ಸುಳ್ಳೆಂದು ತೋರಿಸುತ್ತಿದ್ದಾರೆ
ಯಾರಾದ್ರು ಹಾಳಾಗ್ ಹೋಗ್ಲಿ ನಾವ್ ನೆಟ್ಗಿದ್ರೆ ಸಾಕು ಎನ್ನುತ್ತ
ಯುವ ಸಮೂಹ ಕುಡಿತ ಸಿಗರೇಟ್ ದಾಸರಾಗುವಂತಿದೆ

ಅದಕ್ಕಲ್ಲವೇ ಕನ್ನಡಿಗರು ಅವರನ್ನು
ವರನಟ ಕನ್ನಡಿಗರ ಕಣ್ಮಣಿ ನಟ ಸಾರ್ವಭೌಮ
ಭಾಗ್ಯವಂತ ದೇವತಾಮನುಷ್ಯ ಯೋಗಿ
ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು

ಅವರಾದರು ಅಭಿಮಾನಿಗಳೇ ದೇವರೆಂದ
ಬಂಗಾರದ ಮನುಷ್ಯ
ಅದಕ್ಕೆ ಅಂದು ಇಂದು ಮುಂದೆಂದೂ
ಕನ್ನಡಿಗರಿಗೆಲ್ಲಾ ಅಣ್ಣಾವ್ರೇ ಮುಂದು

-ನಾಗರಾಜನಾಯಕ ಡಿ ಡೊಳ್ಳಿನ
ಕೊಪ್ಪಳ

Leave a Reply