ಮೀಸಲಾತಿಯ ತಂಟೆಗೆ ಬಂದರೆ ಕೈಕಡಿಯುತ್ತೇವೆ -ಮಾಜಿ ಸಚಿವ ಶಿವರಾಜ್ ತಂಗಡಗಿ

shivaraj_tangadagiಮೀಸಲಾತಿಯ ತಂಟೆಗೆ ಬಂದರೆ ಕೈಕಡಿಯುತ್ತೇವೆ ಇದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರ್ ಎಸ್ ಎಸ್ ನವರಿಗೆ ಕೊಟ್ಟ ಎಚ್ಚರಿಕೆ. ಇಂದು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿ ಒಕ್ಕೂಟದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಮೀಸಲಾತಿ ನಮಗೆ ಅಂಬೇಡ್ಕರ್ ನೀಡಿದ ಆಸ್ತಿ ಅದನ್ನೂ ಯಾವ ರೀತಿಯಲ್ಲೂ ಕಸಿದುಕೊಳ್ಳಲು ಬಿಡುವುದಿಲ್ಲ. ಅಲ್ಲದೇ ಜೀವ ಇರುವ ತನಕ ಸದಾಶಿವ ಆಯೋಗದ ವರದಿ ಜಾರಿಯಾಗಲು ಬಿಡುವುದಿಲ್ಲ. ಸರಕಾರವೇನಾದರೂ ಜಾರಿ ಮಾಡಲು ಮುಂದಾದರೆ  ನಮ್ಮ ಕುಲಕಸುಬಿನ ಆಯುಧಗಳನ್ನು ಹಿಡಿದುಕೊಂಡು ರಸ್ತೆಗಿಳಿಯುತ್ತೇವೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗಳು ಹುಬ್ಬಳ್ಳಿಯ ಸಮಾವೇಶದಲ್ಲಿ ಪರಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ ಅಷ್ಟೇ. ವರದಿಯನ್ನು ಜಾರಿಯಾಗಲು ನಾವ್ಯಾರು ಬಿಡುವುದಿಲ್ಲ. ಪರಿಶಿಷ್ಟ ಜಾತಿಯ 100ಕ್ಕೂ ಹೆಚ್ಚು  ಜಾತಿಯವರು ಸೇರಿ ಒಟ್ಟಾಗಿ ಹೋರಾಡುತ್ತೇವೆ.ಮುಂದಿನ ತಿಂಗಳ ಕೊನೆಯ ವಾರದಲ್ಲಿ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಂಡಿದ್ಧೇವೆ ಎಂದು ಹೇಳಿದರುಜಿಲ್ಲಾಡಳಿತ ಭವನದ ಎದುರು ಸಮಾವೇಶದ ಕಾರ್ಯಕ್ರಮ ನಡೆಯುವುದಕ್ಕೂ ಮೊದಲು ನಗರದ ಅಶೋಕ ಸರ್ಕಲ್ ನಿಂದ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪ.ಜಾತಿಯ ಹಲವಾರು ಸಮುದಾಯದ ಜನ ತಮ್ಮ ತಮ್ಮ ಕುಲಕಸುಬಿನ ವಸ್ತುಗಳನ್ನು ಹಿಡಿದುಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದದ್ದರುಸಾವಿರಾರು ಸಂಖ್ಯೆಯಲ್ಲಿದ್ದ ಜನ ಸದಾಶಿವ ಆಯೋಗದ ವರದಿ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಮಾತನಾಡಿದ ನಿದ್ದೆಗಣ್ಣಿನ ಸಿದ್ದರಾಮಯ್ಯನವರು ನಿದ್ದೆಮಂಪರಿನಲ್ಲಿ ಆಂಜನೇಯನ ಮಾತಿಗೆ ಹೂಂ ಎಂದಿರಬೇಕು. ಈ ಆಂಜನೇಯ ಇಡೀ ಸರಕಾರಕ್ಕೆ ಬೆಂಕಿ ಇಡುತ್ತಾನೆ ಎಚ್ಚರ ಎಂದು ಎಚ್ಚರಿಸಿದರು. , ಮಾಜಿ ಜಿ.ಪಂ.ಅಧ್ಯಕ್ಷ ಮುಕುಂದರಾವ್ ಭವಾನಿಮಠ, ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಮತ್ತು ಶ್ರೀಗಳು ಪಾಲ್ಗೊಂಡಿದ್ದರು

Leave a Reply