ಜಿಲ್ಲೆಯ ಮಾರುಕಟ್ಟೆಯಲ್ಲಿ ಉಪ್ಪಿನ ಕೃತಕ ಅಭಾವ ಸೃಷ್ಟಿ ಮಾಡಲಾಗಿದ್ದು ಎರಡು ಪಟ್ಟು ರೇಟ್ ಗೆ ಉಪ್ಪನ್ನು ಮಾರಾಟ ಮಾಡಲಾಗುತ್ತಿದೆ. ಉಪ್ಪು ಸಿಗುವುದಿಲ್ಲವೆನ್ನುವ ವದಂತಿ ಹಾಗೂ ಕೆಜಿಗೆ 400 ಕೊಡಬೇಕಾಗುತ್ತೆ ಎನ್ನುವ ವದಂತಿಗಳಿಂದ ಅಂಗಡಿಗಳಿಗೆ ಮುಗಿಬಿದಿದ್ದಾರೆ. ಕೊಪ್ಪಳ ಜಿಲ್ಲೆಯ ನಾನಾ ಭಾಗಗಳಲ್ಲಿ ಕುಕನೂರು, ಗಂಗಾವತಿ, ಕೊಪ್ಪಳದಲ್ಲಿ ಉಪ್ಪು ದುಪ್ಪಟ್ಟು ಬೆಲೆಗೆ ಮಾರಲಾಗುತ್ತಿದೆ. ದುಡ್ಡಿನ ಬರ ಕಾಡುತ್ತಿರುವ ಈ ಸಂದರ್ಭದಲ್ಲಿ ಅಸಹಾಯಕರಾದ ಬಡಜನ ಸಂಕಟ ಪಡುವಂತಾಗಿದೆ. ಪಕ್ಕದ ಹಳ್ಳಿಗಳಿಂದಲೂ ಕೊಪ್ಪಳಕ್ಕೆ ಜನ ಬರುತ್ತಿದ್ದಾರೆ. ಮಾನವೀಯತೆ ಮರೆತಂತಿರುವ ಅಂಗಡಿಕಾರರು ಉರಿಯುವ ಮನೆಯಲ್ಲಿ ಗಳ ಹಿರಿಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Please follow and like us: