ಮಾಧ್ಯಮಗಳು ಸಾಮಾಜಿಕ ಬದ್ಧತೆಯನ್ನ ಉಳಿಸಿಕೊಳ್ಳಲಿ: ಬಿ.ಪೀರಬಾಷ

karnatakanewsportal-news
ಗಂಗಾವತಿ೦೧: ನಗರದ ಕನ್ನಡ ಜಾಗೃತಿ ಭವನದಲ್ಲಿ ಕರ್ನಾಟಕ ನ್ಯೂಸ್ ಪೋರ್ಟಲ್.ಕಾಂ. ಕನ್ನಡ ಆನ್‌ಲೈನ್ ಪತ್ರಿಕೆಯ ಬಿಡುಗಡೆ ಸಂದರ್ಭದಲ್ಲಿ ಸಾಹಿತಿಗಳಾದ ಬಿ. ಪೀರ್‌ಬಾಷಾರವರು ಮಾಧ್ಯಮಗಳು ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಳ್ಳಲಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಕೆ ಕೂಡ ಮಾಧ್ಯಮದ್ದಾಗಿರುತ್ತದೆ ಎಂದರು.
ಕರ್ನಾಟಕ ನ್ಯೂಸ್ ಪೋರ್ಟಲ್ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ ಎಂದು ಗಂಗಾವತಿಯ ಹಿರಿಯ ಪತ್ರಕರ್ತರಾದ ಧನರಾಜ್ ಜೈನ್ ರವರು ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಣ್ಣಪುಟ್ಟ ನಗರಗಳಿಂದ ಹಿಡಿದು ನಮ್ಮ ಹಳ್ಳಿಗಳ ಯುವ ಸಮುದಾಯವನ್ನು ಇಂದು ಆನ್‌ಲೈನ್ ಜಗತ್ತು ಆಳುತ್ತಿದೆ. ಆದರೆ ನಮ್ಮನ್ನ ಆನ್‌ಲೈನ್ ಆಳಬಾರದು; ಬದಲಿಗೆ ನಾವುಗಳು ಆನ್‌ಲೈನ್ ಜಗತ್ತನ್ನಾಳುವಂತಾಗಬೇಕು. ಇಂತಹದ್ದೆ ಪರಿಕಲ್ಪನೆಯನ್ನಿಟ್ಟುಕೊಂಡು ಇಂದು ಪ್ರಾರಂಭಗೊಂಡ ಕರ್ನಾಟಕ ನ್ಯೂಸ್ ಪೋರ್ಟಲ್ ಸಮಾಜದ ಕಟ್ಟಕಡೆಯ ಮನುಷ್ಯನನ್ನೂ ಕೂಡ ತಲುಪುವಂತಾಗಲಿ ಎಂದು ಹಾರೈಸಿದರು.
ಪತ್ರಿಕೆಯ ಸಂಪಾದಕರಾದ ರಾಘವೇಂದ್ರ ತೂನ ಮಾತನಾಡಿ ಕರ್ನಾಟಕ ನ್ಯೂಸ್ ಪೋರ್ಟಲ್‌ನ ಕೊಪ್ಪಳ ಜಿಲ್ಲಾ ಆವ್ಲತ್ತಿಯ ವಿಶೇಷತೆಗಳು, ಗುರಿ, ಉದ್ದೇಶ ಹಾಗೂ ಪೋರ್ಟಲ್‌ನ ಸ್ವರೂಪ ಮತ್ತು ಬಳಕೆಯ ಬಗ್ಗೆ ತಿಳಿಸಿದರು. ಅಲ್ಲದೇ ವರ್ಷಾಂತ್ಯಕ್ಕೆ ರಾಜ್ಯವ್ಯಾಪಿ ಪೋರ್ಟಲ್ ಮತ್ತು ಮೊಬೈಲ್ ಆಪ್ ಬಿಡುಗಡೆಗೊಳಿಸಲು ಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸಂಪಾದಕರಾದ ಲಾವಣ್ಯ ಹಾಗೂ ಪೋರ್ಟಲ್ ಬಳಗದ ಹನುಮೇಶ ಲಂಕಿ, ಮಲ್ಲಯ್ಯ ಮಾಟ್ರಂಗಿ, ಜಂಬಣ್ಣ ಮೆಟ್ರಿ, ಸಾಹಿತಿಗಳಾದ ರಮೇಶ ಗಬ್ಬೂರು ಮತ್ತು ವೇದಿಕೆಯ ಮೇಲೆ ಹಿರಿಯ ವಕೀಲರಾದ ಬಿ.ಹೆಚ್. ಗುತ್ತಿ ಮತ್ತು ಸೈಯ್ಯದ್ ಹಾಷುಮುದ್ದೀನ್‌ರವರು ಉಪಸ್ಥಿತರಿದ್ದರು. ನಿರೂಪಣೆಯನ್ನು ಪತ್ರಿಕೋದ್ಯಮ ವಿದ್ಯಾರ್ಥಿಯಾದ ಕರಿಯಪ್ಪ ನಿರ್ಹಹಿಸಿದರು.

Leave a Reply