ಮಾಧ್ಯಮಗಳಲ್ಲಿಯ ಮತೀಯವಾದಿಗಳು ಬುರ್ಖಾ ವಿಚಾರವನ್ನು ಪ್ರಚೋದಿಸುತ್ತಿದ್ದಾರೆ- ರಾಯರಡ್ಡಿ

[dropcap][/dropcap] [dropcap][/dropcap]

l ಜನಾರ್ದನ ಪೂಜಾರಿ ಹೇಳಿದ ತಕ್ಷಣ ಸಿಎಂ ಬದಲಾವಣೆಯಾಗಲ್ಲ. ಸಿಎಂ ಪೋಸ್ಟ್ ಖಾಲಿಯಿಲ್ಲ. ಅವರು ತಮ್ಮ ಅಭಿಪ್ರಾಯಗಳನ್ನು ಪಕ್ಷದ ವೇದಿಕೆ ಯಲ್ಲಿ ವ್ಯಕ್ತಪಡಿಸಲಿ.. ಮುಂದೆಯೂ ನಮ್ಮ ಸರಕಾರ ಬರುತ್ತೆ ೧೫೦ ಸೀಟುಗಳಲ್ಲಿ ಗೆಲ್ಲುತ್ತೇವೆ.. ಉನ್ನತ ಶಿಕ್ಷಣ  ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ರಾಯರಡ್ಡಿ ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದಾರೆ

 

ಬುರ್ಖಾ ಕೇವಲ ಮುಸ್ಲಿಂರ ಡ್ರೆಸ್ ಅಲ್ಲ. ಇಸ್ಲಾಂ ಪೂರ್ವದಿಂದಲೂ ನಮ್ಮ ಹಿಂದೂ ಸಂಸ್ಕೃತಿಯಲ್ಲೂ ಆ ರೀತಿಯ ಪರ್ದಾ ಪದ್ದತಿ ಇತ್ತು. ಯಾರು ಯಾವ ಡ್ರೆಸ್ ಬೇಕಾದರೂ ಧರಿಸಲಿ. ಕೇಸರಿ,ಬಿಳಿ, ನೀಲಿ ಯಾವ ಬಣ್ಣದ ಬಟ್ಟೆಯಾದರೂ ಹಾಕಿಕೊಳ್ಳಲಿ ನನ್ನ ವಿರೋದ ಇಲ್ಲ. ಕಾನೂನು ಮತ್ತು ಸಂವಿಧಾನಾತ್ಮಕವಾಗಿ ಇರಲಬೇಕು.

 

ಮುಂಗಾರು ಬೆಳೆ ವಿಫಲವಾಗಿರುವದರಿಂದ ಅದ್ಯಯನಕ್ಕಾಗಿ ಕೇಂದ್ರ ತಂಡ ೩ ರಂದು ಬೇಟಿ ನೀಡಲಿದೆ.. ಕೊಪ್ಪಳ ಜಿಲ್ಲೆಯಲ್ಲಿ ೭೦% ಕ್ಕೂ ಅಧಿಕ ಬೆಳೆ ನಾಶವಾಗಿದೆ. ಅಂದಾಜು ೧೧೦ ಕೋಟಿ ನಷ್ಟವಾಗಿದೆ.. ಶೀಘ್ರ ಬರಪರಿಹಾರದ ಕೆಲಸಗಳನ್ನು ಆರಂಭಿಸಲಾಗುವದು.. ಕೊಪ್ಪಳದ ಪುರಾತನ ಕಮಾನುಗಳ ತೆರವು ಮಾಡಬಾರದು ಮತ್ತು ಅವುಗಳ ಪುನರ್ ನಿರ್ಮಾಣವಾಗಬೇಕು ಎಂದು ಸಚಿವರು ಹೇಳಿದರು..

Please follow and like us:
error