ಮಾದಿಗರ ಮಹಾ ಸಮಾವೇಶದ ಪೂರ್ವಭಾವಿ ಸಭೆ

halesh_kandariಡಿಸೆಂಬರ್ ೧೧ ರಂದು ಹುಬ್ಬಳ್ಳಿ ಆಯೋಜಿಸಿರುವ ಮಾದಿಗರ ಮಹಾ ಸಮಾವೇಶದಲ್ಲಿ ೨ ಲಕ್ಷ ಜನರನ್ನು ಸೇರಿಸುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿಲಾಗಿದ್ದು, ಅದರ ಪೂರ್ವಭಾವಿ ಸಭೆಯು ದಿನಾಂಕಃ-೦೬-೧೧-೨೦೧೬ ರಂದು ಕೊಪ್ಪಳ ಸರ್ಕ್ಯೂಟ್ ಹೌಸ್ (ಐಬಿ)ಯಲ್ಲಿ ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಸಭೆಗೆ ಮಾಜಿ ಮಂತ್ರಿಗಳು ವಿಧಾನ ಪರಿಷತ್ ಸದಸ್ಯರಾದ ಆರ್.ವಿ ತಿಮ್ಮಾಪೂರ, ಮಾಜಿ ಮಂತ್ರಿಗಳಾದ ಹಾಲಕೋಡ ಹನುಮಂತಪ್ಪ, ಶಾಸಕರಾದ ದುರ್ಯೋಧನ ಐಹೊಳೆ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲರವಿ ಮತ್ತು ಮೋಹನ ಹಿರೇಮನಿ ಆಗಮಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ಮಾದಿಗ ಸಮಾಜದ ಜಿಲ್ಲಾ ಪಂಚಾಯತ ಸದಸ್ಯರಾದ ಗೂಳಪ್ಪ ಹಲಗೇರಿ, ಮಾಜಿ ಜಿ.ಪಂ.ಸದಸ್ಯರಾದ ಈರಪ್ಪ ಕುಡಗುಂಟಿ, ವಿನಯಕುಮಾರ ಮೇಲಿನಮನಿ, ಹಿರಿಯರಾದ ನಗರಸಭೆ ಮಾಜಿ ಅಧ್ಯಕ್ಷರಾದ ಗವಿಸಿದ್ದಪ್ಪ ಕಂದಾರಿ, ಮಾರುತ್ತೇಪ್ಪ ಹಲಗೇರಿ, ಶುಕ್ರರಾಜ ಕುಷ್ಟಗಿ, ದೇವಪ್ಪ ಕಾಮದೊಡ್ಡಿ, ಸಿದ್ದೇಶ ಪೂಜಾರ, ಕೃಷ್ಣ ಮೇಗಳಮನಿ, ಗಾಳೆಪ್ಪ ಪೂಜಾರ, ಚನ್ನಬಸಪ್ಪ ಹೊಳೆಪ್ಪನವರ, ಮಾರೇಶ ಮುಷ್ಟೂರು, ಶಿವಪುತ್ರಪ್ಪ ಇನ್ನೂ ಮುಂತಾದವರು ಭಾಗವಹಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕಿನ ಸಮಾಜ ಹಿರಿಯರು ಯುವಕರು ಜನಪ್ರತಿನಿದಿಗಳು ಸಭೆಯಲ್ಲಿ ಭಾಗವಹಿಸಬೇಕೆಂದು ಮಾದಿಗ ಸಮಾಜ ಯುವ ಮುಖಂಡರಾದ ಹಾಲೇಶ ಕಂದಾರಿ ತಿಳಿಸಿದ್ದಾರೆ.

Please follow and like us:
error