fbpx

ಮಹೇಶ ಬಳ್ಳಾರಿಗೆ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪುರಸ್ಕಾರ

sanadi_award mahesh_bellary

ಬೆಳಗಾವಿ, ೨೧ : ಬೆಳಗಾವಿಯ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಉದಯೋನ್ಮುಖ ಯುವ ಬರಹಗಾರರಿಗೆ ಪ್ರತಿವರ್ಷ ಕೊಡಮಾಡುವ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಈ ವರ್ಷ ಕೊಪ್ಪಳದ ಯುವಕವಿ ಮಹೇಶ ಬಳ್ಳಾರಿಯವರ ’ಎಡವಿ ಬಿದ್ದ ದೇವರು’ ಕವನ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು ಐದು ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದ್ದು, ದಿನಾಂಕ ೨೭-೧೧-೨೦೧೬, ರವಿವಾರದಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿರುವ ೬೧ ನೆಯ ಕರ್ನಾಟಕ ರಾಜ್ಯೋತ್ಸವ ಸಮಾರಂಭದಂದು ಖ್ಯಾತ ಸಾಹಿತಿ, ಕಲಾವಿದರಾದ ಚಂದ್ರಕಾಂತ ಕುಸನೂರು ಇವರು ಮಹೇಶ ಬಳ್ಳಾರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಾಹಿತಿ ಹಾಗೂ ಖ್ಯಾತ ಪರಿಸರವಾದಿಗಳಾದ ಡಾ. ವಿ. ಚಂದ್ರಶೇಖರ ನಂಗಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಜ್ಯೋತಿ ಹೊಸೂರ ವಹಿಸಿಕೊಳ್ಳಲಿದ್ದಾರೆ. ಡಾ. ಬಿ.ಎ. ಸನದಿ ಮತ್ತು ಡಾ. ರಾಮಕೃಷ್ಣ ಮರಾಠೆ ಇವರು ಉಪಸ್ಥಿತರಿರುತ್ತಾರೆ ಎಂದು ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ವಾಯ್. ಮೆಣಸಿನಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error

Leave a Reply

error: Content is protected !!