ಮಹಿಳೆ ಹಾಗೂ ಮಕ್ಕಳ ಬಗ್ಗೆ ಪಾಲಕರು ಕಾಳಜಿ ವಹಿಸಿ-ಕವಿತಾ ಎಸ್ ಉಂಡೋಡಿ.

ಕೊಪ್ಪಳ ಏ.೨೨  ಐಶಾರಮಿ ಜಗತ್ತಿನಲ್ಲಿಂದು ಹೆಣ್ಣುಮಕ್ಕಳನ್ನು ಮದುವೆಯ ನೆಪದಲ್ಲಿ ದುರ್ಬಳಕೆ ಮಾಡಿಕೊಳ್ಳುವ ಆತಂಕವಿದ್ದು ಪಾಲಕರು ತುಂಬಾ ಎಚ್ಚರದಿಂದ ಇರಬೇಕಾದ ಅಗತ್ಯವಿದೆ ಎಂದು ಕೊಪ್ಪಳದ ಕಿರಿಯ ಸಿವಿಲ್ ನ್ಯಾಯಾಧೀಶರಾದ ಕವಿತಾ ಶಿವರಾಯ ಉಂಡೋಡಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ರಕ್ಷಣಾ ಯೋಜನೆ ಯುನಿಸೆಫ್, ದೇವದಾಸಿ ಪುನರ್ವಸತಿ ಯೋಜನೆ, ಹಾಗೂ DSC_0155ಕೌಟುಂಬಿಕ ಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕೋರ್ಟ್ ಆವರಣದ ಸಾಕ್ಷಿದಾರರ ಮೊಗಸಾಲೆಯಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಹಾಗೂ ಮಾಜಿ ದೇವದಾಸಿ ಮಹಿಳೆಯರಿಗಾಗಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾನೂನು ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮದುವೆ ಮಾಡಿಕೊಂಡು ದುಡ್ಡಿನ ಆಸೆಗೆ ಯುವತಿಯರನ್ನು ಹೊರ ದೇಶಗಳಿಗೆ ಸಾಗಿಸುವುದರ ಬಗ್ಗೆ ಮಾಧ್ಯಮಗಲ್ಲಿ ನೋಡುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಮದುವೆ ಮಾಡುವಾಗ ತುಂಬಾ ಜಾಗರೂಕತೆಯಿಂದ ಇರಬೇಕು ವಧು-ವರರ ಪೂರ್ವಾಪರ ತಿಳಿದುಕೊಂಡು ಮದುವೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಮನುಷ್ಯ ಇಂದು ದುಡ್ಡು ಮಾಡುವುದಕ್ಕೆ ಮಕ್ಕಳ ಕಳ್ಳಸಾಗಾಣೆಯಂತಹ ಕೀಳು ಮಟ್ಟಕ್ಕೆ ಇಳಿಯುತ್ತಿರುವುದು. ಚಾಕಲೇಟ್ ಕೊಡಿಸುವ ಆಸೆ ತೋರಿಸಿ ಮಕ್ಕಳನ್ನ ಕರೆದೊಯ್ದು ಲೈಂಗಿಕ ಶೋಷಣೆ ಎಸಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ನಿಮ್ಮ ಮನೆ ಹಾಗೂ ಓಣಿಗಳಲ್ಲಿ ಅಪರಿಚಿತ ವ್ಯಕ್ತಿಗಳನ್ನ ಕಂಡರೆ ಕೂಡಲೆ ಪೊಲೀಸ್‌ಗೆ ಮಾಹಿತಿ ನೀಡುವುದಲ್ಲದೆ, ನೆರೆಹೊರೆಯವರ ಸಹಾಯ ಪಡೆದು ವಿಚಾರಿಸಿ ಎಚ್ಚರದಿಂದಿರಬೇಕು. ದೇವದಾಸಿ ಮಹಿಳೆಯರಿಗಾಗಿ ಸರಕಾರ ಹಲವಾರು ಯೋಜನೆಗಳನ್ನ ತಂದಿದೆ ದೇವದಾಸಿ ಮಹಿಳೆಯರು ಅದರ ಸದುಪಯೋಗ ಪಡೆದುಕೊಂಡು ಸ್ವಾವಲಂಬನೆಯಿಂದ ಬದುಕನ್ನ ಸಾಗಿಸಬೇಕು ಎಂದು ಕಿರಿಯ ಸಿವಿಲ್ ನ್ಯಾಯಾಧೀಶರಾದ ಕವಿತಾ ಶಿವರಾಯ ಉಂಡೋಡಿ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ.ಪಾನಘಂಟಿ ಸಾಗಾಣಿಕೆಗೆ ಶೋಷಿತರಾದ ಮಹಿಳೆ ಮತ್ತು ಮಕ್ಕಳು ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಡುವುದನ್ನು ತಡೆಯುವ ಯೋಜನೆಯ ಬಗ್ಗೆ ಕಾನೂನು ಸಲಹೆಗಳನ್ನು ತಿಳಿದುಕೊಂಡು ತಮ್ಮ ಗ್ರಾಮಗಳಲ್ಲಿ ಎಲ್ಲರಿಗೂ ತಿಳಿಸಿ ಅವರಲ್ಲಿಯೂ ಜಾಗೃತಿ ಮೂಡಿಸಿ ಸಮಾಜದ ಪರಿವರ್ತನೆಗೆ ಕೈಜೋಡಿಸಬೇಕೆಂದರು. ನಂತರ ಮಹಿಳೆ ಮತ್ತು ಮಕ್ಕಳ ಮಾರಾಟ ಸಾಗಾಣಿಕೆ ತಡೆ ಕುರಿತು, ಹೆಣ್ಣು ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು, ದೇವದಾಸಿ ಪುನರ್ವಸತಿ ಸೌಕರ್ಯಗಳ ಕುರಿತು, ಮತ್ತು ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಕೌಟುಂಬಿಕ ಸಲಹೆ ಕುರಿತು ವಿಷೇಶ ಉಪನ್ಯಾನ ನೀಡಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸರ್ಕಾರಿ ವಕೀಲ ಆಸೀಫ್‌ಅಲೀ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಯು.ಎ.ಮಾಳೆಕೊಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಸುಧಾ.ಎಂ.ಚಿದ್ರಿ, ವಿ.ಎಂಭೂಸನೂರಮಠ, ಯುನಿಸೆಪ್‌ನ ಶಿವರಾಂ, ಸೋಮಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಲೈಂಗಿಕ ಕಾರ್ಯಕರ್ತೆಯರು ಹಾಗೂ ಮಾಜಿ ದೇವದಾಸಿ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Please follow and like us:
error