ಮಹಾದಾಸೋಹಕ್ಕೆ ೭ಕ್ವೀಂಟಲ್ ೧೧ ಕೆಜಿ ಮೈಸೂರು ಪಾಕ ವಿತರಣೆ

koppal_realestate
ಕೊಪ್ಪಳ- ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ನಿಮಿತ್ಯ ಜರುಗುವ ಮಹಾದಾಸೋಹಕ್ಕೆ ಕೊಪ್ಪಳದ ರಿಯಲ್ ಎಸ್ಟೆಟ್ ಡೆವಡಲಪರ‍್ಸ ಮತ್ತು ಏಜೆಂಟ್ ಅಸೋಷಿಯೆಷನ್ ಇವರು ಇಂದು ದಿ ೨೨ ರಂದು ಏಳು ಕ್ವೀಂಟಲ್ ಹನ್ನೊಂದು ಕೆಜಿ ಮೈಸೂರ ಪಾಕನ್ನು ನೀಡಿದರು. ಈ ಅಸೋಷಿಯೆಷನ್‌ನವರು ಪ್ರತಿ ವರ್ಷವೂ ಮಹಾದಾಸೋಹಕ್ಕೆ ಸಿಹಿ ತಿನಿಸನ್ನು ವಿತರಣೆ ಮಾಡುತ್ತಾ ಬರುತ್ತಾರೆ. ಅದೇ ರೀತಿ ಈ ವರ್ಷವೂ ಕೂಡಾ ಮೈಸೂರ ಪಾಕ್‌ನ್ನು ವಿತರಿಸಿದ್ದಾರೆ.

 

koppal_jatre ಪ್ರಮುಖರಾದ ಕರಿಯಪ್ಪ ಮೇಟಿ, ಅರ್ಜುನಸಾ ಕಾಟವಾ, ವೈಜನಾಥ ದಿವಟರ್, ನಾಗರಾಜ ಬಳ್ಳಾರಿ, ಎಸ್.ಬಿ.ಮಾಲೀಪಾಟಿಲ್, ಸೈಯದ್ ಬಗನಾಳ, ವಿರೇಶ ಹಾಲಸಮುದ್ರ, ಸಂಗಪ್ಪ ಸಂಕ್ಲಾಪೂರ, ಶಬ್ಬಿರ ಸಿದ್ದಕಿ ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಎಂ.ಆg.ಡಬ್ಲೂ ಮತ್ತು ವಿ.ಆg.ಡಬ್ಲೂ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ವಿಕಲಚೇತನರ ಒಕ್ಕೂಟದ ನೂರಾ ಇಪ್ಪತ್ತು ಜನರು ಪ್ರಸಾದವನ್ನು ವಿತರಿಸುವ ಸೇವೆ ಮಾಡಿದರು. ದಾನಿಗಳಿಗೆ ಹಾಗೂ ಸೇವೆಗೈದವರಿಗೆ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶಿರ್ವದಿಸಿದರು.

Leave a Reply