ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಬಿಜೆಪಿ ಶಾಸಕ ಗಣೇಶ್ ಜೋಶಿ ಅವರು ನಡೆಸಿದ್ದ ಹಲ್ಲೆಯಿಂದಾಗಿ ಶಕ್ತಿಮಾನ್ ಹಿಂಬದಿಯ ಕಾಲಿಗೆ ಗಂಭೀರವಾದ ಗಾಯವಾಗಿತ್ತು. ಗಾಯ ಹೆಚ್ಚಾಗಿ ಅದು ಗ್ಯಾಂಗ್ರಿನ್ಗೆ ತಿರುಗಿದ್ದರಿಂದ ವೈದ್ಯರು ಶಕ್ತಿಮಾನ್ ಕಾಲು ಕತ್ತರಿಸಿದ್ದರು. ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಕೃತಕ ಕಾಲನ್ನೂ ಸಹ ಜೋಡಣೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಢಿದ್ದ ಶಕ್ತಿಮಾನ್ ಕೆಲವು ದಿನಗಳವರೆಗೆ ಆರೋಗ್ಯದಿಂದ ಇತ್ತು ಇಂದು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Please follow and like us: