ಮನುಕುಲದ ಏಳಿಗೆಗಾಗಿ ವಿಜ್ಞಾನ’

ಮನುಕುಲದ ಏಳಿಗೆಗಾಗಿ ವಿಜ್ಞಾನ’ ಎಂಬ ಘೋಷಣೆಯೊಂದಿಗೆ ತುಂಬಾ ಯಶಸ್ವಿಯಾಗಿ ಬ್ರೇಕ್ ಥ್ರೂ  ಸೈನ್ಸ್ ಸೋಸೈಟಿ ಆಯೋಜಿಸಿದ ಇಂಡಿಯಾ ಮಾರ್ಚ್  ಫಾರ್ ಸೈನ್ಸ್ ಕಾರ್ಯಕ್ರಮವು ನಡೆಯಿತು.

 ನಂತರ ಸರ್ಕಾರಿ ಪ್ರಥಮ ಕಾಲೇಜಿನ ಸಭಾಂಗಣದಲ್ಲಿ ಆಯೋಜನೆ ಗೊಂಡ ಕಾರ್ಯಕ್ರಮವನ್ನು ಉದ್ದೇಶಿಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ಸಿ ಬಿ  ಚಿಲ್ಕರಾಗಿ ಮಾತನಾಡಿ ‘ ಸಾಮಾಜಿಕ ಜಾಲತಾಣಗಳಲ್ಲಿ ಟಿವಿಗಳಲ್ಲಿ ಅವೈಜ್ಞಾನಿಕ ವಿಚಾರಗಳನ್ನು ವ್ಯಾಪಕವಾಗಿ ಹರಡುತ್ತಿದ್ದಾರೆ. ವೈಚಾರಿಕವಾಗಿ ಮುಂದುವರಿಯಬೇಕಾದ ನಮ್ಮ ದೇಶ ಹಿಂದಕ್ಕೆ ಹೆಜ್ಜೆ ಇಡುತ್ತಿರುವುದು ವಿಷಾದನೀಯ ಎಂದು ಆತಂಕ ವ್ಯಕ್ತಪಡಿಸಿದರು. ಸಂವಿಧಾನದ 51ಎ ಪರಿಚ್ಛೇದವು  ಮೌಢ್ಯತೆಯನ್ನು ವಿರೋಧಿಸುವ ಪರಿಚ್ಛೇದವಾಗಿದೆ ಆದರೆ ಈ ಪರಿಚಯದ ನಮ್ಮ ದೇಶದಲ್ಲಿ ಸರಿಯಾದ ಕಾರ್ಯಚರಣೆ ಮಾಡುತ್ತಿಲ್ಲ ಎಂದು ಮಾತನಾಡಿದರು.
 ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಜಿಲ್ಲಾ ಸಂಚಾಲಕರಾದ ಶರಣು ಪಾಟೀಲ ಮಾತನಾಡಿ. ಸಂಶೋಧನಾ ಕಾರ್ಯಗಳಲ್ಲಿ ಅಮೋಘ ಸಾಧನೆ ಮಾಡಿರುವ ದೇಶಗಳಲ್ಲಿ ಶಿಕ್ಷಣಕ್ಕೆ ವಿಫುಲವಾದ ಅಂದರೆ ರಾಷ್ಟ್ರೀಯ ಸಮಗ್ರ ಉತ್ಪನ್ನದ (GDP)
6% ಮತ್ತು ವಿಜ್ಞಾನಕ್ಕೆ3% ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ಆದರೆ ಭಾರತದಲ್ಲಿ ಕ್ರಮವಾಗಿ 3% ಮತ್ತು 1% ಕಿಂತ ಕಡಿಮೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೈಜ್ಞಾನಿಕ ಪುರಾವೆಗೆ ಪೂರಕವಲ್ಲದ ಅಥವಾ ವಿರುದ್ಧವಾದ ವಿಚಾರಗಳನ್ನು ಶಿಕ್ಷಣದಲ್ಲಿ ಸೇರಿಸಬಾರದು ಎಂದು ಅವರು ಮಾತನಾಡಿದರು.
 ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಪ್ರಾಣಿಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ  ಪ್ರಶಾಂತ ರವರು ಮಾತನಾಡಿ ‘ ವಿಜ್ಞಾನಿಗಳಾದ ಸರ್ ಸಿವಿ ರಾಮನ್, ಮೇರಿ ಕ್ಯೂರಿ, ಅಲೆಗ್ಸಾಂಡರ್ ಫ್ಲೇಮಿಂಗ್ ಇಂತಹ ಮಹಾನ್ ವಿಜ್ಞಾನಿಗಳ ಸಾಧನೆಗಳ ಹಿಂದೆ ಇರುವ ಶ್ರಮ ಮತ್ತು ಮಾನವೀಯ ಮೌಲ್ಯಗಳನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
 ಕಾರ್ಯಕ್ರಮದಲ್ಲಿ ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ಮೇಡಂ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಬಿಎಸ್ಸಿ ವಿದ್ಯಾರ್ಥಿಗಳಾದ ಮಾರುತಿ ನಿರೂಪಣೆ ಮಾಡಿದರು. ಮತ್ತು ಸೇವಕರಾಗಿ ಶ್ರೀನಿವಾಸ್, ಪ್ರಶಾಂತ್,  ಮಲ್ಲಿಕಾರ್ಜುನ್,  ಜ್ಯೋತಿ, ಚೈತ್ರ, ಅನಿತಾ,  ನಾಗರತ್ನ,  ಶೃತಿ ನೇತೃತ್ವವಹಿಸಿದ್ದರು.
ಸರಸ್ವತಿ ವಿದ್ಯಾಮಂದಿರ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
Please follow and like us:
error