ಮದರಸಾಗಳ ಆಧುನೀಕರಣ ಹಾಗೂ ಗಣಕೀಕೃತ ಶಿಕ್ಷಣಕ್ಕಾಗಿ ಅನುದಾನ : ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಪ್ರಸಕ್ತ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ಮದರಸಾಗಳಿಗೆ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡಲು ಅನುದಾನ ಒದಗಿಸುವ ಯೋಜನೆಗಾಗಿ ಮುಸ್ಲಿಂ ಮದರಸಾಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿನ ಮದರಸಾಗಳ ಆಧುನೀಕರಣ, ಔಪಚಾರಿಕ ಮತ್ತು ಗಣಕೀಕೃತ ಶಿಕ್ಷಣ ನೀಡಲು ಅನುದಾನ ಒದಗಿಸುವ ಯೋಜನೆ ಜಾರಿಯಲ್ಲಿದೆ. ಅರ್ಹ ವಸತಿ ಸಹಿತ, ಮದರಸಾಗಳ ಆಡಳಿತ ಮಂಡಳಿಗಳು ರಾಜ್ಯದ ಯಾವುದೇ ನೋಂದಾಯಿತ ಕಾಯ್ದೆಯಡಿ ನೋಂದಾಯಿತವಾಗಿರಬೇಕು ಹಾಗೂ ಪ್ರಮುಖ ಮದರಸಾಗಳಲ್ಲಿ ಒಂದಾಗಿರಬೇಕು. ಅಥವಾ ರಾಷ್ಟ್ರೀಯ ಮಟ್ಟದ ಇತರೆ ಸಂಸ್ಥೆಗಳಲ್ಲಿ ಸದಸ್ಯತ್ವನ್ನು ಹೊಂದಿರಬೇಕು. ಇಂತಹ ಸಂಘ/ ಸಂಸ್ಥೆಗಳು ನೋಂದಾಯಿತಗೊಂಡು ಮೂರು ವರ್ಷಗಳ ಅವಧಿ ಪೂರೈಸಿರಬೇಕು. ಕನಿಷ್ಟ ೨೫ ವಿದ್ಯಾರ್ಥಿಗಳ ದಾಖಲಾತಿಗಳನ್ನು ಹೊಂದಿರಬೇಕು. ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಮತ್ತು ಎಸ್‌ಪಿಕ್ಯೂಇಎಂ ಮತ್ತು ಐಡಿಎಂಐ ನಿಂದ ಅನುದಾನ ಪಡೆಯದ ಮುಸ್ಲಿಂ ಮದರಸಾ ನಡೆಸುತ್ತಿರುವ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ವ್ಯವಸ್ಥಾಪಕ ಮಂಡಳಿಯವರು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರಿಂದ ಉಚಿತವಾಗಿ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಫೆ. ೨೦ ರೊಳಗಾಗಿ ಪ್ರಸ್ತಾವನೆ ಸಲ್ಲಿಸಬೇಕು. ಹೆಚ್ಚಿನ ವಿವರ ಹಾಗೂ ಮಾಹಿತಿಗೆ www.gokdom.kar.nic.in. ವೆಬ್‌ಸೈಟ್ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದೆ.

Leave a Reply