ಮಕ್ಕಳ ರಕ್ಷಣಾ ಘಟಕಕ್ಕೆ ಹೊಸದಾಗಿ ನೇಮಕಕ್ಕೆ ಆಗ್ರಹ.

ಕೊಪ್ಪಳ ಮೇ. ೩. ಕೊಪ್ಪಳ ಜಿಲ್ಲೆಯಲ್ಲಿ ೨೦೧೨ ರಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಅವಧಿ ಮೀರಿದರೂ ಮುಂದುವರೆದಿದ್ದು ಕೂಡಲೇ ಅವರನ್ನು ಬದಲಾಯಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ. ಈ ಕುರಿತು ಘಟಕದ ಜಿಲ್ಲಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಗಳು, ಒಂದು ವರ್ಷಕ್ಕೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುತ್ತಾರೆ, ಮುಂದೆ ಅವರನ್ನು ಹೊರಗುತ್ತಿಗೆ ಸಿಬ್ಬಂದಿ ಕಾಯ್ದೆ ೧೯೬೫ ರಡಿ ಮೂರು ವರ್ಷ ಮಾತ್ರ ಮುಂದುವರೆಸಬಹುದಾಗಿದ್ದು, ಈಗಾಗಲೇ ಈ ಸಿಬ್ಬಂದಿ ನಾಲ್ಕು ವರ್ಷ ಕೆಲಸ ಮಾಡಿದ್ದು, ಅವರ ಕೆಲಸದ ಬಗ್ಗೆ ಜನಸಾಮಾನ್ಯರಲ್ಲಿ ಅmanavi dc today(1)ತೃಪ್ತಿ ಇದ್ದು, ಅಧಿಕಾರಿಗಳ ಅಣತಿಯಂತೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಹೊಸ ಗುತ್ತಿಗೆದಾರರಿಗೆ ಮೊದಲೇ ತಾಕೀತು ಮಾಡಿ ಟೆಂಡರ್ ನೀಡುತ್ತಿರುವ ಬಗ್ಗೆ ಸುಳಿವಿದ್ದು, ಹಾಗಾಗದಂತೆ ಪಾರದರ್ಶಕವಾಗಿ ಹೊಸದಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು, ಅವರನ್ನೇ ಮುಂದುವರೆಸುವ ರೀತಿಯಲ್ಲಿ ನೇಮಕ ಪ್ರಕ್ರಿಯೆ ನಡೆಸದೇ ಹೊಸದಾಗಿ ಎಂಎಸ್‌ಡಬ್ಲ್ಯು ಆಗಿರುವ ಹೊಸಬರಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದು, ಜಿಲ್ಲಾಧಿಕಾರಿಗಳು ಸಹ ಉತ್ತಮ ಪ್ರತಿಕ್ರಿಯೆ ನೀಡಿದ್ದು ಕಾದು ನೋಡುವ ತಂತ್ರಕ್ಕೆ ಮನವಿದಾರರು ಹೋಗಿದ್ದು, ಹಾಗೆ ಮಾಡದಿದ್ದಲ್ಲಿ ಹೋರಾಟ ಮಾಡುವದಾಗಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮಹೇಶಕುಮಾರ, ಮಂಜುನಾಥ ಎಂ., ಜನವಿಕಾಸ ಶಿಕ್ಷಣ ಸಂಸ್ಥೆಯ ಸಂತೋಶಕುಮಾರ, ಸಣ್ಣರಾಜಪ್ಪ, ಲತಾ ವಿ. ಜೆ., ನಂದಿನಿ ವಾಯ್., ಉನ್ನತಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಧರ್ಮಣ್ಣ ಹಟ್ಟಿ, ಜ್ಯೋತಿ ಮಂಜುನಾಥ, ಹರ್ಷವರ್ಧನ ಮಾಲಗಿತ್ತಿ, ಬಸವರಾಜ, ಮಂಜುನಾಥ ಇತರರು ಇದ್ದರು.

Related posts

Leave a Comment