ಮಕ್ಕಳ ಮಾನಸಿಕ ಬೆಳವಣಿಗೆಯಷ್ಟೇ ದೈಹಿಕ ಬೆಳವಣಿಗೆಯೂ ಅಷ್ಟೇ ಮುಖ್ಯ – ಡಾ| ಗಿರೀಶ್ ನವಲಿಹಿರೇಮಠ

educare_school_koppalಕೊಪ್ಪಳ, ೧೬- ಚಿಕ್ಕಮಕ್ಕಳ ಮಾನಸಿಕ ಬೆಳವಣಿಗೆಯಷ್ಟೇ ಮುಖ್ಯವಲ್ಲ, ಅದರೊಂದಿಗೆ ಮಕ್ಕಳು ಕ್ರೀಡೆ, ಇನ್ನಿತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಪಾಲಕರು ಮಕ್ಕಳನ್ನು ಪ್ರೇರೆಪಿಸಬೇಕು ಈ ಮೂಲಕ ದೈಹಿಕ ಬೆಳವಣಿಗೆಯೂ ಆಗುವದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ ಎಂದು ಕೊಪ್ಪಳದ ಸರಕಾರಿ ಆಸ್ಪತ್ರೆಯ ಚಿಕ್ಕಮಕ್ಕಳ ತಜ್ಞವೈದ್ಯ ಡಾ| ಗಿರೀಶ್ ನವಲಿಹಿರೇಮಠ ಹೇಳಿದರು.
ಅವರು ನಗರದ ಕಿನ್ನಾಳ ರಸ್ತೆಯಲ್ಲಿರುವ ಎಜ್ಯುಕೇರ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಕ್ಕಳು ಆಟ ಆಡಿದ ಮೇಲೆ ನೋವು ಸಾಮಾನ್ಯ ಅದಕ್ಕೆ ಯಾರೂ ಹೆದರುವ ಅವಶ್ಯಕತೆ ಇಲ್ಲ, ಏಕೆಂದರೆ ಮಕ್ಕಳಲ್ಲಿ ದೈಹಿಕ ಬೆಳವಣಿಗೆಯಲ್ಲಿ ಇದು ಸಾಮಾನ್ಯ. ಅಲ್ಲದೇ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವದರಿಂದ ಅತಿ ಹೆಚ್ಚು ಹಸಿರು ತರಕಾರಿಯನ್ನು ನೀಡಿ, ಇದರಿಂದ ಮಕ್ಕಳು ಆರೋಗ್ಯಕರವಾಗಿ ಬೆಳೆಯುತ್ತಾರೆ. ಅಲ್ಲದೇ ಈ ಪ್ರದೇಶ ಒಣ ಪ್ರದೇಶವಾಗಿರುವದರಿಂದ ಧೂಳಿನಿಂದ ಮಕ್ಕಳನ್ನು ರಕ್ಷಿಸಿ ಅವರ ಆರೋಗ್ಯದ ಕಡೆ ಗಮನ ನೀಡುವಂತೆ ಪಾಲಕರಿಗೆ ತಿಳಿಸಿದರು.
ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಶ್ರೀಮತಿ ಲಲಿತಾ ಅಂಗಡಿ ಮಾತನಾಡುತ್ತ, ಜವಾಹರ ಲಾಲ ನೆಹರು ಅವರು ಚಿಕ್ಕಮಕ್ಕಳನ್ನು ಹೂವಿಗೆ ಹೋಲಿಸುತ್ತಿದ್ದರು. ನೀವೂ ಕೂಡ ಈ ಶಾಲೆಯ ಹೂವುಗಳಿದ್ದಂತೆ ಎಂದು ಮಕ್ಕಳನ್ನು ಬಣ್ಣಿಸಿದರು. ಶ್ರೀ ಗವಿಸಿದ್ದೇಶ್ವರ ಪಿ.ಯು. ಕಾಲೇಜು ಅತಿಥಿ ಉಪನ್ಯಾಸಕ ಶಿವಕುಮಾರ ಕುಕನೂರ ಪಾಲ್ಗೊಂಡು ಜವಾಹರಲಾಲ್ ನೆಹರು ಅವರ ಮಕ್ಕಳ ಪ್ರೀತಿಯ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲೆಯ ೧ ನೇ ತರಗತಿ ವಿದ್ಯಾರ್ಥಿ ಶಶಾಂಕ ವಹಿಸಿ ಜವಾಹರ ಲಾಲ ನೆಹರು ಕುರಿತು ಮಾತನಾಡಿದರು.
ಅಲ್ಲದೇ ವಿವಿಧ ಛದ್ಮವೇಷ ಭೂಷಣಗಳಲ್ಲಿ ಮಿಂಚುವ ಮೂಲಕ ನಾಡಿನ ವಿವಿಧ ದೇಶಭಕ್ತರ, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಟ್ಟರು. ನಂತರ ಶಾಲೆಯ ಮಕ್ಕಳು ಜವಾಹರ ಲಾಲ್ ನೆಹರು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಅಂಗಡಿ, ಡಾ| ಕವಿತಾ ಶ್ರೀನಿವಾಸ ಹ್ಯಾಟಿ, ಗುರುರಾಜ ಗುಡಿ, ರಮೇಶ ತುಪ್ಪದ, ಕಾರ್ಯದರ್ಶಿ ರಾಜೇಶ ಯಾವಗಲ್, ಸೌಮ್ಯ ಗುಡಿ, ಬಸವರಾಜ ಶಿರಗುಂಪಿಶೆಟ್ಟರ್ ಇತರರಿದ್ದರು. ಛದ್ಮ ವೇಷಭೂಷಣ ಕಾಂiiಕ್ರಮವನ್ನು ಶಾಲೆಯ ಶಿಕ್ಷಕಿ ಶ್ರೀಮತಿ ಸವಿತಾ ನೆರವೇರಿಸಿದರೆ, ಕು. ಜ್ಯೋತಿ ಮತ್ತು ಕು. ರಶ್ಮಿ ನಿರೂಪಿಸಿದರು. ಕೊನೆಯಲ್ಲಿ ಶ್ರೀಮತಿ ಕವಿತಾ ಅಳವಂಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲಕರು, ಪೋಷಕರು ಪಾಲ್ಗೊಂಡಿದ್ದರು.

Please follow and like us:
error