ಕೊಪ್ಪಳ : ಮಕ್ಕಳು ಕೇವಲ ಓದು ಬರಹಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ, ಅದ್ಭುತ ಸಾಧನೆ ಮಾಡಿದ ಮಹಾನ್ ನಾಯಕರ ಜೀವನ ಮಕ್ಕಳಿಗೆ ಸ್ಪೂರ್ತಿಯಾಗಬೇಕು ಎಂದು ಕಾಂಗ್ರೆಸ್ ಮುಖಂಡ, ವಾಣಿಜ್ಯೋಧ್ಯಮಿ ಕೆ.ಎಂ.ಸಯ್ಯದ್ ಹೇಳಿದರು.
ಅವರಿಂದು ಕಿನ್ನಾಳ ಗ್ರಾಮದ ಸೇವಾ ವಿದ್ಯಾಲಯದಲ್ಲಿ ಮಾಜಿ ಪ್ರದಾನಿ ದಿ.ಜವಾಹರಲಾಲ್ ನೆಹರೂರವರ ಜನ್ಮದಿನಾಚರಣೆ ನಿಮಿತ್ಯ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಜವಾಹರಲಾಲ ನೆಹರೂರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಎಂ.ಸಯ್ಯದ್ ಇಡೀ ಭಾರತದ ಮಕ್ಕಳಿಗೆ ಚಾಚಾ ನೆಹರೂ ಎಂದೇ ಖ್ಯಾತರಾಗಿರುವ ಜವಾಹರಲಾಲ ನೆಹರೂರವರ ಬದುಕು ಮತ್ತು ಬರಹಗಳು ಎಲ್ಲರಿಗೂ ಸ್ಪೂರ್ತಿ ನೀಡುವಂತದ್ದು. ಮಕ್ಕಳ ಅಂತಹ iಹಾನ್ ನಾಯಕರ ಜೀವನ ಚರಿತ್ರೆಗಳನ್ನು ಓದಬೇಕು. ಅದರಿಂದ ಸ್ಪೂರ್ತಿ ಪಡೆಯಬೇಕು ಹಾಗಾದಾಗ ಅವರ ಜನ್ಮದಿನಾಚರಣೆ ಮಾಡುವುದು ಸಾರ್ಥಕ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಅಲ್ಲದೇ ಶಿಕ್ಷಕರಿಗೂ ಸಹ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಹೆಚ್.ವಿ.ರಾಜಾಬಕ್ಷಿ, ಮುಲ್ಲಾ , ಮುಖ್ಯೋಪಾಧ್ಯಯ ದಾವಲಸಾಬ ಬೆಟಗೇರಿ ವೇದಿಕೆಯ ಮೇಲಿದ್ದರು. ಕಾರ್ಯಕ್ರಮಕ್ಕೆ ಸ್ವಾಗತವನ್ನು ಶಿಕ್ಷಕ ಪರಶುರಾಮ ಮಾಡಿದರು. ನಿರೂಪಣೆಯನ್ನು ರವಿ ಮಾಡಿದರೆ ವಂದನಾರ್ಪಣೆಯನ್ನು ಶಿಕ್ಷಕ ರಫಿ ಮಾಡಿದರು. ಮಕ್ಕಳಿಗೆ ಸಿಹಿತಿ ವಿತರಿಸುವ ಮೂಲಕ ಸಂಭ್ರಮದಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳು ರಾಷ್ಟ್ರೀಯ ನಾಯಕರ ಜೀವನದಿಂದ ಸ್ಪೂರ್ತಿ ಪಡೆಯಬೇಕು -ಕೆ.ಎಂ.ಸಯ್ಯದ್
Please follow and like us: