ಮಂಗಳಮುಖಿಯೊಂದಿಗೆ ಕೊಪ್ಪಳ ಯುವಕನ ಪ್ರೇಮ ಪ್ರಕರಣ ಮತ್ತು ಮದುವೆ !!!

cross-gender-marraige-koppal-news

ಮಂಗಳಮುಖಿಯನ್ನು ಪ್ರೇಮಿಸಿ ಮದುವೆಯಾದ ಯುವಕ ಅವಳೇ ಬೇಕು ಎನ್ನುತ್ತಿದ್ಧಾನೆ. ವಿಡಿಯೋ ನೋಡಿ

ಮಂಗಳಮುಖಿಯೊಂದಿಗೆ ಮದುವೆಯಾಗಿದ್ದ ಯುವಕ,ಆ ಯುವಕನನ್ನು ಪೊಷಕರು ಹಿಗ್ಗಾ ಮುಗ್ಗಾ ಥಳಿಸಿ ಕರೆದುಕೊಂಡು ಹೋದ ಘಟನೆ ಕೊಪ್ಪಳದಲ್ಲಿ ನಡೆದಿದೆ.ಕೊಪ್ಪಳ ರೈಲ್ವೇ ನಿಲ್ದಾಣದ ಕ್ಯಾಂಟೀನ್ ನಲ್ಲಿ  ಕೆಲಸ ಮಾಡಿಕೊಂಡಿದ್ದ ಶಿವು ಎಂಬ 18 ವರ್ಷದ ಯುವಕನನ್ನು ಯಾರಿಗು ಗೊತ್ತಿಲ್ಲದ ರೀತಿಯಲ್ಲಿ ಮಂಗಳ ಮುಖಿಯೊಬ್ಬಳು ಮೂರು ದಿನಗಳ ಹಿಂದೇ ಮದುವೇ ಯಾಗಿದ್ದಳು.ನಂತರ  ತಮ್ಮೊಂದಿಗೆ ಇಟ್ಟುಕೊಂಡಿದ್ದರು.ಈ ವಿಷಯ ತಿಳಿದ ಶಿವು ಪೊಷಕರಾದ ತಾಯಿ,ಅಣ್ಣ,ಅಕ್ಕ ಏಕಾ ಏಕಿ ಮಂಗಳಮುಖಿಯ ಮನೆಗೆ ಲಗ್ಗೆಯಿಟ್ಟು,ಮದುವೇಯಾಗಿದ್ದ ಬಾಲಕ ಶಿವು ನನ್ನು ಹೊರಗೆಳೆದು ಹಿಗ್ಗಾ ಮುಗ್ಗಾ ಥಳಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ,ಏನು ಅರಿಯದ ನಮ್ಮ ಮಗನನ್ನು ಅಕ್ರಮವಾಗಿ ಮದುವೇ ಯಾಗಿದ್ದಲ್ಲದೇ,ನಮ್ಮೊಂದಿಗೆ ಸಂಪರ್ಕವೇ ಇಲ್ಲದಂತೆ ಮಾಡಿದ್ದಾರೆ ಎಂದು ಶಿವು ತಾಯಿ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.ಇನ್ನೂ ಕೊಪ್ಪಳದಲ್ಲಿ ಮಂಗಳಮುಖಿಯರ ಹಾವಳಿ ಹೆಚ್ಚಾಗಿದ್ದು,ಏನು ಅರಿಯದ ಬಾಲಕರನ್ನು ಹಣದ ಆಮೀಷವೊಡ್ಡಿ ತಮ್ಮ ಬುಟ್ಟಿಗೆ ಹಾಕಿಕೊಂಡು ಈ ರೀತಿ ಅಕ್ರಮವಾಗಿ ಮದುವೆಯಾಗಿ ಅನೈತಿಕ ಚಟುವಕಿಕೆ ನಡೆಸುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸುತ್ತಿದ್ದು,ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ.ಇನ್ನೂ ಶಿವು ನಾನು ಒಪ್ಪಿಕೊಂಡೆ ಮದುವೇ ಯಾಗಿದ್ದೇನೆ ನನಗೆ ಮಂಗಳಮುಖಿಯೇ  ಬೇಕು ಎಂದು ಹೇಳುತ್ತಿದ್ದಾನೆ. ವಂಶವಾದರೂ ಹೇಗೆ ಬೆಳೆಯಬೇಕು ಎನ್ನುವುದ ಪೋಷಕರ ವಾದವಾದರೆ, ನೀನು ಬೇಕಾದರೆ ಇನ್ನೊಂದು ಹೆಣ್ಣಿನೊಂದಿಗೆ ಮದುವೆಯಾಗು ಆದರೆ ನನ್ನೊಂದಿಗೆ ಇರಬೇಕು ಎನ್ನುತ್ತಿದ್ದಾಳೆ ರಾಧಿಕಾ ..

Leave a Reply