ಭಾರತ್‌ ಬಂದ್‌ಗೆ ನಮ್ಮ ಬೆಂಬಲ ಇಲ್ಲ. ಪಕ್ಷದ ವತಿಯಿಂದ ಆಕ್ರೋಶ್‌ ದಿವಸ್‌ : ಸಿಎಂ ಸಿದ್ದರಾಮಯ್ಯ

siddaramaiah_cmಬೆಂಗಳೂರು, ನ.26: ಸೋಮವಾರ ’ಭಾರತ್ ಬಂದ್‌’ಗೆ ಕರ್ನಾಟಕ ಸರಕಾರದ ಬೆಂಬಲ ಇಲ್ಲ. ಆದರೆ ಆ ದಿನ ಆಕ್ರೋಶ್‌ ದಿವಸವನ್ನು ಆಚರಿಸಲಾಗುವುದು. ಶಾಲೆಗೂ ರಜೆ ನೀಡಲಾಗುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐಎಸ್‌ಎಸ್‌ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವಿನ ಬಗ್ಗೆ ವಿಪಕ್ಷದವರು ಧರಣಿ ನಡೆಸಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು. ವಿಪಕ್ಷಗಳು ಈಗಲಾದರೂ ಅರ್ಥ ಮಾಡಿಕೊಳ್ಳಲಿ. ಯಾವುದೇ ಸಾವಿನಲ್ಲೂ ಕೂಡಾ ರಾಜಕೀಯ ಮಾಡಬಾರದು ಎಂದು ಹೇಳಿದರು.
. ಡಿ.ಕೆ. ರವಿ ಸಾವಿನಲ್ಲಿ ಜಾತಿ ರಾಜಕೀಯ ಮಾಡಲಾಗಿತ್ತು. ಅಂದು ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಾವು ಹೇಳಿದ್ದೆವು. ಆದರೆ  ಯಾರು ನಮ್ಮ ಮಾತನ್ನು ಕೇಳಲಿಲ್ಲ ಇದೀಗ .ಸಿಬಿಐ ವರದಿ ನೀಡಿದೆ. ಸಿಬಿಐ ವರದಿಲ್ಲಿ ರವಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಿಬಿಐ ವರದಿ ನೀಡಿದೆ.    ಎಂದು ಸಿದ್ದರಾಮಯ್ಯ ನುಡಿದರು.

Leave a Reply