ಭಾಗ್ಯನಗರ ಪ.ಪಂ. ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳು

koppal-bhagyanagar-election
ಕೊಪ್ಪಳ ಜು. : ಭಾಗ್ಯನಗರ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ೧೯ ವಾರ್ಡ್‌ಗಳಿಗೆ ಕಾಂಗ್ರೆಸ್-೧೯, ಬಿಜೆಪಿ-೧೯, ಜೆಡಿಎಸ್-೦೩ ಹಾಗೂ ಪಕ್ಷೇತರ-೦೫ ಸೇರಿದಂತೆ ಒಟ್ಟು ೪೬ ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಿದ್ದು, ಜುಲೈ ೧೦ ರಂದು ನಡೆಯಲಿರುವ ಚುನಾವಣೆಯಲ್ಲಿ ೧೪೯೧೫ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಪ್ರತಿ ವಾರ್ಡ್‌ವಾರು ಕಣದಲ್ಲಿರುವ ಅಭ್ಯರ್ಥಿಗಳ ವಿವರ ಹಾಗೂ ಮತದಾರರ ಸಂಖ್ಯೆ ವಿವರ ಇಂತಿದೆ. ವಾರ್ಡ್ ಸಂಖ್ಯೆ-೧ : ಚನ್ನಪ್ಪ ಗುರಪ್ಪ ತಟ್ಟಿ- ಕಾಂಗ್ರೆಸ್, ನೀಲಕಂಠ ಪಂಪಣ್ಣ ಮೈಲಿ-ಬಿಜೆಪಿ, ಮತದಾರರು ಒಟ್ಟು- ೮೬೭. ವಾರ್ಡ್ ಸಂಖ್ಯೆ-೨ : ಮಂಜವ್ವ ಕೃಷ್ಣ ಮೇಗಳಮನಿ-ಬಿಜೆಪಿ, ಇಟ್ಟಂಗಿ ಸರಸ್ವತಿ ಕೃಷ್ಣ-ಕಾಂಗ್ರೆಸ್, ಮತದಾರರು- ೭೭೩. ವಾರ್ಡ್ ಸಂಖ್ಯೆ- ೩ ಲಕ್ಷ್ಮೀಬಾಯಿ ನಾಗೋಸ ಮೇಘರಾಜ- ಬಿಜೆಪಿ, ಭಾವಿಕಟ್ಟಿ ಲಕ್ಷ್ಮೀಬಾಯಿ- ಕಾಂಗ್ರೆಸ್, ಕರಿಯಮ್ಮ ಬಸವರಾಜ ಮುಂಡರಗಿ- ಪಕ್ಷೇತರ, ಮತದಾರರು- ೫೧೮. ವಾರ್ಡ್ ಸಂಖ್ಯೆ-೪ : ಇಟ್ಟಂಗಿ ಚಂದ್ರಕಾಂತ ಮರಿಯಪ್ಪ-ಕಾಂಗ್ರೆಸ್, ಪಾಟೀಲ ವಿಜಯಕುಮಾರ ಲಿಂಗನಗೌಡ- ಬಿಜೆಪಿ, ಮತದಾರರ- ೧೦೦೭. ವಾರ್ಡ್ ಸಂಖ್ಯೆ- ೫ : ಕವಿತಾ ಲಕ್ಷ್ಮಣ ಚಳಮರದ- ಬಿಜೆಪಿ, ಜಯಶ್ರೀ ರಾಮಚಂದ್ರ ಚಳಮರದ- ಜೆಡಿಎಸ್, ಶೋಭಾ ಹನುಮಂತಪ್ಪ ಹ್ಯಾಟಿ- ಕಾಂಗ್ರೆಸ್, ಮತದಾರರು- ೫೮೨. ವಾರ್ಡ್ ಸಂಖ್ಯೆ- ೬ : ಮಹಾಲಕ್ಷ್ಮಿ ರಮೇಶಸಾ ಪವಾರ್- ಬಿಜೆಪಿ, ಗೋರಂಟ್ಲಿ ಸವಿತಾ ಅಶೋಕ- ಕಾಂಗ್ರೆಸ್, ಮತದಾರರು- ೫೦೫. ವಾರ್ಡ್ ಸಂಖ್ಯೆ- ೭ : ಗಿರಿಜಮ್ಮ ಮಹದೇವಪ್ಪ ಎರಿ- ಕಾಂಗ್ರೆಸ್, ರತ್ನ ಮಲ್ಲೇಶ ತಂಬ್ರಳ್ಳಿ- ಬಿಜೆಪಿ, ತಾರಾಬಾಯಿ ಪಾಂಡುರಂಗಸಾ ಹಬೀಬ- ಪಕ್ಷೇತರ, ಮತದಾರರು- ೧೦೦೮. ವಾರ್ಡ್ ಸಂಖ್ಯೆ- ೮ : ಉಂಕಿ ಚಂದ್ರಪ್ಪ- ಬಿಜೆಪಿ, ರಮೇಶ ಲಕ್ಷ್ಮಪ್ಪ ಹ್ಯಾಟಿ- ಕಾಂಗ್ರೆಸ್, ಮತದಾರರು- ೬೮೭. ವಾರ್ಡ್ ಸಂಖ್ಯೆ- ೯ : ಅಮರೇಶ ಪಿ. ಶ್ಯಾವಿ- ಕಾಂಗ್ರೆಸ್, ಬಿದರೂರು ನೇಮಣ್ಣ ಬನ್ನಿಕಲ್ಲಪ್ಪ- ಬಿಜೆಪಿ, ಮತದಾರರು- ೮೪೮. ವಾರ್ಡ್ ಸಂಖ್ಯೆ- ೧೦ : ತುಕಾರಾಮಪ್ಪ ಚಂದ್ರಪ್ಪ ಗಡಾದ- ಕಾಂಗ್ರೆಸ್, ಡಾಣಿ ಸುರೇಶ- ಬಿಜೆಪಿ, ಮತದಾರರು- ೬೨೩. ವಾರ್ಡ್ ಸಂಖ್ಯೆ- ೧೧ : ಮಂಜುನಾಥ ಗವಿಸಿದ್ದಪ್ಪ ಗೊಂಡಬಾಳ- ಕಾಂಗ್ರೆಸ್, ರುಕ್ಮಣ್ಣ ಕೆಂಚಪ್ಪ ಶ್ಯಾವಿ- ಬಿಜೆಪಿ, ಮತದಾರರು- ೯೪೫. ವಾರ್ಡ್ ಸಂಖ್ಯೆ- ೧೨ : ಮರಡಿ ಯಶೋಧ ಶಿವಶಂಕರಪ್ಪ- ಕಾಂಗ್ರೆಸ್, ಅಡ್ಡೇದಾರ ಲಕ್ಷ್ಮೀದೇವಿ ರಾಮಚಂದ್ರಪ್ಪ- ಬಿಜೆಪಿ, ಡಂಬ್ರಳ್ಳಿ ಲಕ್ಷ್ಮವ್ವ ವೀರಭದ್ರಪ್ಪ- ಪಕ್ಷೇತರ, ವಿದ್ಯಾ ಪರಶುರಾಮ ದಲಬಂಜನ್- ಪಕ್ಷೇತರ, ಮತದಾರರು- ೬೮೪. ವಾರ್ಡ್ ಸಂಖ್ಯೆ- ೧೩ : ಗಂಗಾಧರ ಗೇನಪ್ಪ ಕಬ್ಬೇರ- ಕಾಂಗ್ರೆಸ್, ಪರಶುರಾಮ ಹಾದಿಮನಿ- ಬಿಜೆಪಿ, ಮಂಜುನಾಥ ಯಲ್ಲಪ್ಪ ಕಿನ್ನಾಳ- ಜೆಡಿಎಸ್, ಮತದಾರರು- ೭೪೦. ವಾರ್ಡ್ ಸಂಖ್ಯೆ- ೧೪ : ಚಿದಾನಂದ ಹಂಚಿನಮನಿ- ಕಾಂಗ್ರೆಸ್, ದರದಗಕಟ್ಟೆ ಸುರೇಶ- ಬಿಜೆಪಿ, ಮತದಾರರು- ೭೭೬. ವಾರ್ಡ್ ಸಂಖ್ಯೆ-೧೫ : ಕವಲೂರು ಪಾಲಾಕ್ಷಮ್ಮ ದಾನಪ್ಪ- ಕಾಂಗ್ರೆಸ್, ಶೇಖಮ್ಮ ಸೋಮಣ್ಣ ದೇವರಮನಿ- ಬಿಜೆಪಿ, ಮತದಾರರು- ೧೧೬೫. ವಾರ್ಡ್ ಸಂಖ್ಯೆ- ೧೬ : ದೇವಮ್ಮ ಎಲ್ ಮಾಲಗಿತ್ತಿ- ಬಿಜೆಪಿ, ಹನುಮಂತಪ್ಪ ಆಟೋ- ಕಾಂಗ್ರೆಸ್, ಮತದಾರರು- ೧೩೨೭. ವಾರ್ಡ್ ಸಂಖ್ಯೆ- ೧೭ : ಪದ್ಮ ಶಿವರಾಜ ನುಗಡೋಣಿ- ಬಿಜೆಪಿ. ಬೇಗಮ್ ಮಹಿಮುದಾ- ಜೆಡಿಎಸ್, ಹುಲಿಗೆಮ್ಮ ಮಹಾಂತಪ್ಪ ತಟ್ಟಿ- ಕಾಂಗ್ರೆಸ್, ಮತದಾರರು- ೫೭೦. ವಾರ್ಡ್ ಸಂಖ್ಯೆ- ೧೮ : ಬ. ಮಂಜುನಾಥ ಸಾಲಿಮಠ- ಕಾಂಗ್ರೆಸ್, ರವಿ ಶಿವಪುತ್ರಪ್ಪ ದಿವಟರ್- ಬಿಜೆಪಿ, ದಾನನಗೌಡ ಮರಿಬಸಪ್ಪ ಹಾಸಗಲ್-ಪಕ್ಷೇತರ, ಮತದಾರರು- ೬೬೭. ವಾರ್ಡ್ ಸಂಖ್ಯೆ- ೧೯ : ಮಂಜುನಾಥ ದೊಡ್ಡಬಸಪ್ಪ ಡಂಬಳ- ಬಿಜೆಪಿ, ಹೊನ್ನೂರಸಾಬ ಮಹ್ಮದಸಾಬ ಭೈರಾಪುರ- ಕಾಂಗ್ರೆಸ್, ಒಟ್ಟು ಮತದಾರರು- ೬೨೩.
ಮತದಾನ ಪ್ರಕ್ರಿಯೆ ಜುಲೈ ೧೦ ರಂದು ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Please follow and like us:
error