ಭಾಗ್ಯನಗರ ಪ.ಪಂ. : ಗೊಂಡಬಾಳ ನಾಮಪತ್ರ

koppal-bhagyanagar-election
ಕೊಪ್ಪಳ ಜೂ. ೨೯. ಭಾಗ್ಯನಗರ ಪಟ್ಟಣ ಪಂಚಾಯತ ವಾರ್ಡ್ ನಂ. ೧೧ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಜುನಾಥ ಜಿ. ಗೊಂಡಬಾಳ ಇಂದು ನಾಮಪತ್ರ ಸಲ್ಲಿಸಿದರು.
ಅಪಾರ ಯುವಕರ ತಂಡದೊಂದಿಗೆ ಮೊದಲು ಬನಶಂಕರಿದೇವಿ ಹಾಗೂ ಆಚಿಜನೇಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಊರಮ್ಮನ ಗುಡಿಯಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ, ಜಿ. ಪಂ. ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ, ಮುಖಂಡರಾದ ಶ್ರೀನಿವಾಸ ಗುಪ್ತಾ, ಸುರೇಶ ಭೂಮರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ ಖಾದ್ರಿ, ತುಕಾರಾಮಪ್ಪ ಗಡಾದ, ಹೊನ್ನೂರಸಾಬ, ಕೃಷ್ಣಾ ಇಟ್ಟಂಗಿ, ಮಾಜಿ ತಾ. ಪಂ. ಸದಸ್ಯ ದಾನಪ್ಪ ಕವಲೂರ, ನವೋದಯ ವಿರುಪಾಕ್ಷಪ್ಪ ಇತರರ ನೇತೃತ್ವದಲ್ಲಿ ಭಾಗ್ಯನಗರದ ಪ್ರಮುಖ ಸ್ಥಳಗಳಲ್ಲಿ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

Please follow and like us:
error