ಭಾಗ್ಯನಗರ ಜಾತ್ರಾ ಮಹೋತ್ಸವ : ಸಿಡಿದೆದ್ದ ಸಹೋದರರು ನಾಟಕ ಪ್ರದರ್ಶನ

bhagyanagar-koppal ಅಂಗವಾಗಿ ಇಂದು ಮೂರ್ತಿ ಮೆರವಣಿಗೆ
ಕೊಪ್ಪಳ ೧೨: ಸಮೀಪದ ಭಾಗ್ಯನಗರದಲ್ಲಿ ಶ್ರಾವಣ ಮಾಸದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ವೀರಭದ್ರೇಶ್ವರ ೨೩ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಆ.೧೩ ರಂದು ಬೆಳಿಗ್ಗೆ ೮ ಗಂಟೆಗೆ ಗ್ರಾಮದ ರಾಜಬೀದಿಗಳಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿ ಮೆರವಣಿಗೆ ಮೂಲಕ ಶ್ರೀ ಗಂಗೆಗೆ ಹೋಗಿ ಬರುವುದು, ನಂತರ ಅಗ್ನಿ ಪ್ರವೇಶ ಕಾರ್ಯಕ್ರಮ ಜರುಗಲಿದೆ.
ಈಗಾಗಲೇ ಆ.೦೨ ರಿಂದ ಮಾಹಾರುದ್ರಾಭಿಷೇಕ ಆರಂಭಗೊಂಡಿದೆ. ಈ ಉತ್ಸವಕ್ಕೆ ಗ್ರಾಮದ ಶ್ರೀ ಗುರು ಬಸವೇಶ್ವರ ಯುವಕ ಮಂಡಳದವರಿಂದ ಸಮಾಳ ಮತ್ತು ನಂದಿಕೋಲು ಸೇವಾದೊಂದಿಗೆ ಪುರವಂತಿಕೆ ಕಾರ್ಯಕ್ರಮ ಜರುಗಲಿದೆ. ಕರಡಿ ಮಜಲು, ನಂದಿಕೋಲು ಕುಣಿತ, ಸಮಾಳ ಭಾಜಾ ಭಜಂತ್ರಿಯೊಂದಿಗೆ ಸೇವಾ ಕಾರ್ಯಕ್ರಮ, ಶ್ರೀ ಬಸವೇಶ್ವರ ಮಹಿಳಾ ಮಂಡಳದವರಿಂದ ಆರತಿ ಮತ್ತು ಇತರೆ ಸೇವೆ ಜರುಗಲಿದೆ. ನಂತರ ಶ್ರೀ ವೀರಭದ್ರೇಶ್ವರ ಗುಡಿ ಪ್ರವೇಶ ನಂತರ ಮಹಾಪ್ರಸಾದ ಜರುಗಲಿದೆ.
ವಂಶ ಪಾರಂಪರಿಕವಾಗಿ ಅಭಿಷೇಕ ಮಾಡಿಸುವ ಭಕ್ತಾಧಿಗಳು ಶ್ರಾವಣ ಮಾಸದಲ್ಲಿ ನಿರಂತರ ರುದ್ರಾಭಿಷೇಕ ಜರುಗುತ್ತದೆ. ಕಾರಣ ಅಪೇಕ್ಷೆಯುಳ್ಳ ಭಕ್ತಾಧಿಗಳು ೧೦೦೧ ರೂ. ಪಾವತಿಸಿ ಕಮೀಟಿಯವರಿಂದ ರಶೀದಿ ಪಡೆಯಲು ಕೋರಲಾಗಿದೆ. ಶ್ರೀ ವೀರಭದ್ರೇಶ್ವರನ ಜಾತ್ರಾ ಮಹೋತ್ಸವದ ಅಂಗವಾಗಿ ಆ.೧೩ ರಂದು ರಾತ್ರಿ ೧೦.೩೦ ಕ್ಕೆ ಶ್ರೀ ಗುರು ಬಸವೇಶ್ವರ ಯುವಕ ಮಂಡಳದವರಿಂದ ಸಿಡಿದೆದ್ದ ಸಹೋದರರು ಎಂಬ ನಾಟಕ ಪ್ರದರ್ಶನ ಜರುಗಲಿದೆ. ಕಾರ್ಯಕ್ರಮಕ್ಕೆ ಭಕ್ತಾಧಿಗಳೆಲ್ಲರೂ ತನು, ಮನ, ಧನದಿಂದ ಸೇವೆ ಸಲ್ಲಿಸಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಟ್ರಸ್ಟ್ ಕಮೀಟಿ ಪ್ರಕಟಣೆ ತಿಳಿಸಿದೆ.

Please follow and like us:
error