ಭಾಗ್ಯನಗರದಲ್ಲಿ ಸಂಭ್ರಮದ ಈದ್ ಆಚರಣೆ ಮತ್ತು ಸನ್ಮಾನ

bnagar-idgha-1 bnagar-idgha-2
ಕೊಪ್ಪಳ : ಭಾಗ್ಯನಗರದಲ್ಲಿ ಸಂಭ್ರbnagar-idgha-3ಮದಿಂದ ರಮಜಾನ್ ಹಬ್ಬವನ್ನು ಆಚರಿಸಲಾಯಿತು. ರಮಜಾನ್ ಹಬ್ಬದ ಪ್ರಯುಕ್ತ ಓಜನಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದ ಭಾಂಧವರು ಸಡಗರ, ಸಂಭ್ರಮ ಹಾಗೂ ಭಕ್ತಿಯಿಂದ ರಮಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು ಇದೇ ಸಂದರ್ಭದಲ್ಲಿ ಭಾಗ್ಯನಗರದ ಜಾಮಿಯಾ ಮಜೀದ್ ಪಂಚ್ ಕಮೀಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ ಬಿಸರಳ್ಳಿ ಹಾಗೂ ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಹೊನ್ನೂರಸಾಬ ಬೈರಾಪೂರ ಇವರಿಗೆ ಸಮಾಜ ಬಾಂಧವರು ಸನ್ಮಾನಿಸಿದರು. ಹಲವಾರು ವರ್ಷಗಳಿಂದ ನಿರಂತರವಾಗಿ ಭಾಗ್ಯನಗರದ ಮುಸ್ಲಿಂ ಸಮುದಾಯದ ಏಳ್ಗೆಗಾಗಿ ಶ್ರಮಿಸುತ್ತಿರುವ ಇವರಿಗೆ ಭಾಗ್ಯನಗರದ ಸಕಲ ಮುಸ್ಲಿಂ ಬಾಂಧವರ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಾಜಿ ಕುತ್ಬುದ್ದಿನ್ ಸಾಬ, ಮಹೆಬೂಬಸಾಬ ಬಳಿಗಾರ,ಮೌಲಾಹುಸೇನ ಹಣಗಿ,ಮರ್ದಾನಸಾಬ ಹಿರೇಮಸೂತಿ, ಎಸ್,ಎ.ನೂರಬಾಷಾ ಸೇರಿದಂತೆ ಸಮಾಜ ಬಾಂಧವರು ಮತ್ತು ಹಿರಿಯರು ಉಪಸ್ಥಿತರಿದ್ದರು.

Please follow and like us:
error