ಭವಿಷ್ಯದ ಪೀಳಿಗೆಗಾಗಿ ನೀರನ್ನು ಮಿತವಾಗಿ ಬಳಸಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

IMG-20160416-WA0003ಕೊಪ್ಪಳ-೧೬, ನಗರದ ೩ನೇ ವಾರ್ಡಿನ ಕುವೇಂಪು ನಗರದಲ್ಲಿ ಕೊಳವೆಭಾವಿ ಹಾಕಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಸತತವಾಗಿ ೨ ವರ್ಷಗಳಿಂದ ಸೃಷ್ಟಿಯ ಅವೆಕೃಪೆ ಒಳಗಾಗಿರುವ ನಾವು ಮಳೆಅಭಾವದಿಂದ ತೀರ್ವ ನೀರನಿ ಸಂಕಷ್ಟಕ್ಕೆ ಒಳಗಾಗಿದ್ದೆವೆ. ಬರುವ ದಿನಗಳಲ್ಲಿ ನೀರಿನ ಸದ್ಬಳಕೆಯಾಗದಿದ್ದರೆ ಬರುವ ಪೀಳಿಗೆಗೆ ನೀರು ಸಿಗುವುದು ಕಷ್ಟವಾಗುತ್ತದೆ. ನಗರದ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಗಿಡಗಳನ್ನು ಬೆಳೆಸಿ ಪರಿಸರ ಉಳಿಸಲು ಕಡ್ಡಾಯವಾಗಿ ಪ್ರಯತ್ನಮಾಡಬೇಕು. ಪರಿಸರ ನಾಶದಿಂದ ಮಳೆ ಅಭಾವ ಹೆಚ್ಚಾಗುತ್ತಿದ್ದು, ಜನರಿಗಷ್ಟೆ ಅಲ್ಲದೇ ಧನಕರಗಳಿಗೂ ನೀರಿನ ಭವಣೆ ಉಂಟಾಗುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರು ಮಳೆಯ ನೀರಿನ ಸಂಗ್ರಹಣೆ ತೊಟ್ಟೆಗಳನ್ನು ನಿರ್ಮಾಣ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳಿಗೆ ನಗರದಲ್ಲಿ ನೀರಿನ ಕೊರತೆ ಉಂಟಾಗದಂತೆ ನೋಡಿಕೊಂಡು ಅವಶ್ಯಕತೆ ಇದ್ದಲ್ಲಿ ಬೋರ್‌ವೆಲ್ ಕೊರೆಸಲು ಸೂಚಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಸುರೇಶ ಬೂಮರೆಡ್ಡಿ, ಭರಮಪ್ಪ ಹಟ್ಟಿ, ಕಾಟನ್‌ಪಾಷಾ, ನಗರಸಭೆ ಅಭಿಯಂತರರಾದ ಕೃಷ್ಣಪ್ಪ, ಬಂಡಿ ವಡ್ಡರ, ಮಲ್ಲಿಕಾರ್ಜುನ ಹಾಗೂ ವಾರ್ಡಿನ ಗುರು ಹಿರಿಯರು ಉಪಸ್ಥಿತರಿದ್ದರು.

Please follow and like us:
error