ಬ್ರುಸ್‌ಲೀಯವರ ೭೬ನೇ ಹುಟ್ಟು ಹಬ್ಬ ಆಚರಣೆ

bruce-lee-birthday
ಕೊಪ್ಪಳ ನ.೨೭: ಭೂಮಿ ಫೌಂಡೇಶನ್ ಕೊಪ್ಪಳ ವತಿಯಿಂದ ಕರಾಟೆ ಪೀತಾಮಹ ಬ್ರುಸ್‌ಲೀಯವರ ೭೬ನೇ ಹುಟ್ಟು ಹಬ್ಬವನ್ನು ನಗರದ ನಿವೇದಿತಾ ಶಾಲೆಯ ಆವರಣದಲ್ಲಿ ರವಿವಾರದಂದು ಕೆಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಭೂಮಿ ಫೌಂಡೇಶನ್ ಅಧ್ಯಕ್ಷ ಮೌನೇಶ ವಡ್ಡಟ್ಟಿಯವರು, ಕರಾಟೆ ಕ್ಷೇತ್ರಕ್ಕೆ ಭಾರತದ ಪೀತಾಮಹ ಬ್ರೂಸ್‌ಲೀಯವರ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಯುವಕರು/ಯುವತಿಯರು ಕರಾಟೆ ಕಲಿಯಬೇಕು. ಕರಾಟೆ ಕಲಿಯುವುದರಿಂದ ಆತ್ಮರಕ್ಷಣೆಯ ಜೊತೆಗೆ ಶಾರೀರಿಕ ಸದೃಢತೆ ಮತ್ತು ರೋಗಮುಕ್ತರಾಗಿ ಬದುಕಬಹುದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಗಮನಿಸಿದರೆ ಮಹಿಳೆಯರಿಗೆ ಕರಾಟೆ ಅತ್ಯವಶ್ಯಕವಾಗಿದೆ. ಪುರುಷರು ಸಹ ಆಪತ್ಕಾಲದಲ್ಲಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಕರಾಟೆ ಕಲಿಯಬೇಕೆಂದರು.
ಕಾರ್ಯಕ್ರಮದಲ್ಲಿ ಹಿರಿಯ ತರಬೇತಿದಾರರಾದ ಅಶೋಕ ನರಗುಂದ, ದೇವಪ್ಪ ಕಲ್ಲನ್ನವರ, ಸೋಮಲಿಂಗ ಕವಲೂರು, ಶಾಂತವೀರಯ್ಯ ಎಂ., ವಿಠಲ್ ಹೆಚ್, ರಾಕೇಶ ಕುಂಬಾರ, ಶ್ರೀಕಾಂತ ಕೊಂಡಲಿಂಗಯ್ಯ, ಸುನೀಲ್ ಗಂಗೂರ್, ಸಂತೋಷ ಹೊಂಬಾಳಿಮಠ, ಕರಾಟೆ ಪಟುಗಳಾದ ಮಂಜುನಾಥ ಆರ್.ಕೆ., ತಿರುಮತೀಶ ಡಿ.ಕೆ., ಮಾರುತಿ ಎಲ್.ಕೆ., ರಾಮಕೃಷ್ಣ ಹನ್ಸಿ, ಯಲ್ಲಪ್ಪ ಬಡಿಗೇರ, ಚಿರಂಜೀವಿ ಹಾದಿಮನಿ, ನಾಗರಾಜ ಕಲಾಲ್, ಪರಶುರಾಮ್ ಭಾವಿಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Please follow and like us:
error