ಬೇಸಿಗೆ ರಜೆಯಲ್ಲಿಯೂ ಶಾಲಾ ಮಕ್ಕಳಿಗೆ ಬಿಸಿಯೂಟ- ಆರ್. ರಾಮಚಂದ್ರನ್.

ಕೊಪ್ಪಳ ಏ. ೨೧ ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ೧ ರಿಂದ ೦೮ ನೇ ತರಗತಿಯ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲಿಯೂ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮವನ್ನು ಏ. ೧೧ ರಿಂದ ಪ್ರಾರಂಭಿಸಲಾಗಿದ್ದು, ಮೇ. ೨೮ ರವರೆಗೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ. ಜಿಲ್ಲೆಯ ಮಕ್ಕಳಿಗೆ ಬೇಸಿಗೆ ರಜೆ ಅವಧಿಯಲ್ಲಿಯೂ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮವನ್ನು ಏ. ೧೧ ರಿಂದಲೇ ಜಾರಿಗೆ ತರಲಾಗಿದೆ. ಬೇಸಿಗೆ ರಜಾ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನಿಷ್ಠಾನಗೊಳಿಸುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
೯೮೬ ಶಾಲೆಗಳ ೧,೦೫,೮೮೭ ಮಕ್ಕಳಿಗೆ ಪ್ರಯೋpsmec08MidDay4ಜನ : ಬರ ಪೀಡಿತ ಪ್ರದೇಶದಲ್ಲಿನ ಒಟ್ಟು ೯೮೬ ಶಾಲೆಗಳನ್ನು ರಜಾ ಅವಧಿಯಲ್ಲಿ ಮಧ್ಯಾಹ್ನದ ಉಪಹಾರ ನೀಡುವ ಕಾರ್ಯಕ್ರಮಕ್ಕೆ ಗುರುತಿಸಲಾಗಿದೆ. ಒಂದು ಗ್ರಾಮದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ, ಹೆಚ್ಚಿನ ಮಕ್ಕಳ ಸಂಖ್ಯೆ ಹೊಂದಿರುವ ಶಾಲೆಯನ್ನು ಬಿಸಿಯೂಟ ನೀಡುವ ಶಾಲೆ ಕೇಂದ್ರವನ್ನಾಗಿಸಿ, ಉಳಿದ ಶಾಲೆಗಳನ್ನು ಬಿಸಿಯೂಟ ಶಾಲಾ ಕೇಂದ್ರಕ್ಕೆ ಹೊಂದಿಸಲಾಗುವುದು. ಇದರನ್ವಯ ಜಿಲ್ಲೆಯಲ್ಲಿ ಒಟ್ಟು ೮೪೦ ಶಾಲೆಗಳನ್ನು ಬಿಸಿಯೂಟ ನೀಡುವ ಶಾಲಾ ಕೇಂದ್ರವನ್ನಾಗಿ ಗುರುತಿಸಲಾಗಿದ್ದು, ಉಳಿದ ೧೪೬ ಶಾಲೆಗಳನ್ನು ಕೇಂದ್ರ ಶಾಲೆಯೊಂದಿಗೆ ಸೇರ್ಪಡೆಗೊಳಿಸಿ, ಆ ಶಾಲೆಯ ಮಕ್ಕಳಿಗೆ ಕೇಂದ್ರ ಶಾಲೆಯಲ್ಲಿಯೇ ಬಿಸಿಯೂಟ ವಿತರಿಸಲಾಗುವುದು. ಗಂಗಾವತಿ ತಾಲೂಕಿನಲ್ಲಿ ೩೭೧೬೩ ಮಕ್ಕಳು ಕೊಪ್ಪಳ-೧೯೦೯೬, ಕುಷ್ಟಗಿ-೩೩೬೧೦ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೧೬೦೧೮ ಮಕ್ಕಳು ಸೇರಿದಂತೆ ಒಟ್ಟು ೧,೦೫,೮೮೭ ಮಕ್ಕಳು ಈ ಸೌಲಭ್ಯದ ಪ್ರಯೋಜನ ಪಡೆಯಲಿದ್ದಾರೆ.
ಆಹಾರ ವ್ಯರ್ಥವಾಗದಂತೆ ಕ್ರಮ : ಬೇಸಿಗೆ ರಜಾ ಅವಧಿಯಲ್ಲಿ ಎಲ್ಲಾ ಅರ್ಹ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಪಡೆಯಲು ಅವಕಾಶವಿದೆ. ಆದರೆ ಸಿದ್ದಪಡಿಸಿದ ಆಹಾರವು ವ್ಯರ್ಥವಾಗದಂತೆ ಕ್ರಮ ವಹಿಸುವ ಸಲುವಾಗಿ ಆಯಾ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಡುಗೆ ಕೇಂದ್ರಗಳ ಶಾಲೆಯನ್ನು ಗುರುತಿಸಿದ ನಂತರ ಆಯಾ ಅಡುಗೆ ಕೇಂದ್ರಗಳ ಮುಖ್ಯ ಶಿಕ್ಷಕರು ಮಕ್ಕಳ ಪಟ್ಟಿಯನ್ನು ದೃಡೀಕರಿಸಿ ಸಿ.ಆರ್.ಸಿ ಅಥವಾ ಶಿಕ್ಷಣ ಸಂಯೋಜಕರ ಮೂಲಕ ತಾಲೂಕ ಅಕ್ಷರ ದಾಸೋಹ ಕಛೇರಿಗೆ ತಲುಪಿಸಬೇಕು. ನಂತರ ನಿಗದಿತ ನಮೂನೆಗಳಲ್ಲಿ ಬಿಸಿಯೂಟ ಪಡೆಯುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರ ಒಪ್ಪಗೆ ಪತ್ರ ಪಡೆಯುವುದ ಸಹ ಕಡ್ಡಾಯವಾಗಿರುತ್ತದೆ. ಅದರನ್ವಯ ಹಾಜರಾತಿಗೆ ತಕ್ಕಂತೆ ಬಿಸಿಯೂಟ ನೀಡುವುದು ಶಿಕ್ಷಕರ ಕರ್ತವ್ಯವಾಗಿರುತ್ತದೆ.
ಕರ್ತವ್ಯ ನಿರ್ವಹಣೆ : ಮಧ್ಯಾಹ್ನ ಬಿಸಿಯೂಟಕ್ಕಾಗಿ ಗುರುತಿಸ್ಪಟ್ಟ ಅಡುಗೆ ಕೇಂದ್ರಗಳು/ಶಾಲೆಗಳಲ್ಲಿ ಕಾರ್ಯಕ್ರಮದ ಉಸ್ತುವಾರಿಗಾಗಿ ಮುಖ್ಯ ಶಿಕ್ಷಕರು ಅಥವಾ ಒಬ್ಬರು ಶಿಕ್ಷಕರನ್ನು ಗೊತ್ತುಪಡಿಸಲಾಗಿದ್ದು, ಪ್ರಸ್ತುತ ಸಾಲಿನಲ್ಲಿ ಈ ಅವಧಿಯಲ್ಲಿ ಕಾರ್ಯ ನಿರ್ವಹಿಸಲು ಅಡುಗೆ ಕೇಂದ್ರವಾರು ಶಾಲೆಯ ಮುಖ್ಯ ಶಿಕ್ಷಕರು ಅಥವಾ ಒಬ್ಬರು ಶಿಕ್ಷಕರನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯೋಜಿಸಬೇಕು. ಗುರುತಿಲ್ಪಟ್ಟ ಶಾಲೆಯಲ್ಲಿ ೨೫೦ ಕ್ಕಿಂತ ಹೆಚ್ಚು ಮಕ್ಕಳು ನಿರಂತರಗಾಗಿ ಬಿಸಿಯೂಟಕ್ಕೆ ಬರುತ್ತಿದ್ದಲ್ಲಿ ಅಂತಹ ಶಾಲೆಯಲ್ಲಿ ಮಾತ್ರ ಹೆಚ್ಚುವರಿಯಾಗಿ ಒಬ್ಬ ಶಿಕ್ಷಕರನ್ನು ನೇಮಿಸಲಾಗುವುದು. ಬೇಸಿಗೆಯ ರಜಾ ಅವಧಿಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯ ದೊರಕಲಿದೆ. ಪ್ರತಿ ದಿನದ ಹಾಜರಾತಿಯನ್ನು ಆಯಾ ಶಿಕ್ಷಕರಿಂದ ಎಸ್‌ಎಂಎಸ್ ಸಂದೇಶ ಮೂಲಕ ಪಡೆಯಲು ಸೂಚನೆ ನೀಡಲಾಗಿದೆ.
ಕುಡಿಯುವ ನೀರು : ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಬಹುದಾಗಿದ್ದು ಕುಡಿಯುವ ನೀರು ಮತ್ತು ಅಡುಗೆ ಮಾಡಲು ನೀರಿನ ತಂದರೆ ಉಂಟಾಗುವ ಸಂಭವವಿರುತ್ತದೆ. ಆಯಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳ ಜೊತೆ ಚರ್ಚಿಸಿ ಬೇಸಿಗೆಯಲ್ಲಿ ನಡೆಯುವ ಮಧ್ಯಾಹ್ನ ಉಪಹಾರ ಯೋಜನೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿವುದು ಮತ್ತು ಅಡುಗೆ ತಯಾರಿಸಲು ನೀರಿನ ತೊಂದರೆ ಉಂಟಾದರೆ ಆಯಾ ಗ್ರಾಮ ಪಂಚಾಯತ ಪಿ.ಡಿ.ಓ ಮುಖಾಂತರ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು.
೧೯೮೭ ಅಡುಗೆ ಸಿಬ್ಬಂದಿ ನೇಮಕ : ಅಡುಗೆ ಸಿಬ್ಬಂದಿಯನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಂದರೆ ಮಕ್ಕಳ ಸಂಖ್ಯೆ ೨೫ ಕ್ಕೆ ಒಬ್ಬರು, ೧೦೦ ಮಕ್ಕಳಿಗೆ ಇಬ್ಬರು ಅಡುಗೆಯವರನ್ನು ಮತ್ತು ನಂತರದಲ್ಲಿ ಪ್ರತಿ ೧೦೦ ಮಕ್ಕಳಿಗೆ ಒಬ್ಬರಂತೆ ಅಡುಗೆಯವರನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಹೊಂದಿರುವ ಶಾಲಾ ಮುಖ್ಯ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಆಹಾರ ಧಾನ್ಯ ಬೇಡಿಕೆಯನ್ನು ಪ್ರತಿ ತಿಂಗಳಂತೆ ಸಿ.ಆರ್.ಸಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ರವರ ಮೂಲಕ ಅಕ್ಷರ ದಾಸೋಹ ವಿಭಾಗಕ್ಕೆ ಸಲ್ಲಿಸಬೇಕು. ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಧಿಕಾರಿಗಳು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರ ಧಾನ್ಯಗಳನ್ನು ಶಾಲಾವಾರು ಸರಬರಾಜು ಆಗುವಂತೆ ನೋಡಿಕೊಳ್ಳಲಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ೬೭೫ ಅಡುಗೆ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಕೊಪ್ಪಳ-೩೮೧, ಕುಷ್ಟಗಿ-೫೭೯ ಮತ್ತು ಯಲಬುರ್ಗಾ-೩೫೨ ಸೇರಿದಂತೆ ಜಿಲ್ಲೆಯಲ್ಲಿಬೇಸಿಗೆ ಬಿಸಿಯೂಟ ಕಾರ್ಯಕ್ಕೆ ನೇಮಿಸಿದ ಅಡುಗೆ ಸಿಬ್ಬಂದಿ ಸಂಖ್ಯೆ ೧,೯೮೭.

Please follow and like us:
error