ಬೆಂಗಳೂರಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಬೃಹತ್ ಪ್ರತಿಭಟನೆ

ದಿನಾಂಕ ೨೫-೦೫-೨೦೧೬ ಬುಧವಾರ ಬೆಂಗಳೂರಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರ ಬೃಹತ್ ಪ್ರತಿಭಟನೆ
ಕೊಪ್ಪಳ : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳು ಸೇವಾ ಖಾಯಾಂತಿ , ಸೇವಾಭದ್ರತೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಅನೇಕ ವಿನೂತನ ರೀತಿಯಲ್ಲಿ ರಾಜ್ಯಾಧ್ಯಾಂತ ಪ್ರತಿಭಟನೆ ನಡೆಸುತ್ತಿದ್ದರೂ ಅಂದಿನ ಉನ್ನತ ಶಿಕ್ಷಣ ಸಚಿವ ಆರ್. ವಿ ದೇಶಪಾಂಡೆ ಹಾಗೂ ಇಂದಿನ ಉನ್ನತ ಶಿಕ್ಷಣ ಮತ್ತು ಕಾನೂನು ಸಚಿವರಾದ ಟಿ.ಬಿ.ಜಯಚಂದ್ರ ಅವರುಗಳು ಕಿಂಚಿತ್ತಾದರೂ ಸ್ಪಂದಿಸಿರುವದಿಲ್ಲ.
ಪ್ರಸಕ್ತ ೨೦೧೬-೧೭ ರ ಸಾಲಿನಲ್ಲಿ ಶೈಕ್ಷಣಿಕ ಅರ್ಹತೆ ಹಾಗೂ ಸೇವಾ ಅನುಭವಗಳನ್ನು ಪರಿಗಣಿಸದೇ ಹೊಸದಾಗಿ ಆನ್ ಲೈನ ಮೂಲಕ ಅರ್ಜಿ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳುತ್ತಾರೆ ಎಂಬ ವದಂತಿಗಳು ಹಬ್ಬಿವೆ. ಒಂದು ವೇಳೆ ಇದೇ ವದಂತಿ ನಿಜವಾದಲ್ಲಿ ಸಹಸ್ರಾರು ಸಂಖ್ಯೆಯ ಅತಿಥಿ ಉಪನ್ಯಾಸಕರುಗಳು ಅವಕಾಶ ವಂಚಿತರಾಗುತ್ತಾರೆ.
ಆದ್ದರಿಂದ ಈ ಆನ್ಲೈನ್ ಮೂಲಕ ನೇಮಕಾತಿ ಮಾಡುತ್ತಾರೆ ಎನ್ನುವ ವದಂತಿಯನ್ನು ತಡೆಗಟ್ಟಲು ಹಾಗೂ ಅತಿಥಿ ಉಪನ್ಯಾಸಕರುಗಳನ್ನು ಸೇವೆಯಲ್ಲಿ ಮುಂದುವರೆಸುವ ಕುರಿತು ಸರಕಾರದ ಗಮನ ಸೆಳೆಯಲು ದಿನಾಂಕ ೨೫-೦೫-೨೦೧೬ ಬುಧವಾರದಂದು ಬೆಂಗಳೂರಿನಲ್ಲಿ ರಾಜ್ಯ ಅತಿಥಿ ಉಪನ್ಯಾಸಕರುಗಳ ಸಂಘವು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಆದ್ದರಿಂದ ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರುಗಳು ಈ ಹೋರಾಟದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಕೊಪ್ಪಳ ಜಿಲ್ಲಾ ಆತಿಥಿ/ಅರೆಕಾಲಿಕ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಸಂಚಾಲಕರಾದ  ವೀರಣ್ಣ ಸಜ್ಜನರ ತಿಳಿಸಿದ್ದಾರೆ.

Leave a Reply