ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದರೆ ಕ್ರಮ – ಬಸವರಾಜ್ ರಾಯರಡ್ಡಿ

burkha_student_dress_code

ವಿದ್ಯಾರ್ಥಿರ್ನಿಯರು ಬುರ್ಖಾ ಹಾಕಿಕೊಂಡು ಬಂದರೆ ಅವರಿಗೆ ಕಿರುಕುಳ ನೀಡುವದು, ಅವರ ವಿರುದ್ದ ಮಾತನಾಡುವದರ ಬಗ್ಗೆ ದೂರು ಬಂದಿದೆ. ಅದು ತಪ್ಪು ಮತ್ತು ಕಾನೂನು ಬಾಹಿರ. ಯಾವ ವ್ಯಕ್ತಿ ಬೇಕಾದರೂ ಮೈ ಮುಚ್ಚುವ ಬಟ್ಟೆ ಧರಿಸಬಹುದು.ಡಿಸೆಂಟ್ ಡ್ರೆಸ್ ಧರಿಸಬೇಕು ಎನ್ನುವುದು ನಿಯಮ. ಕೇಸರಿ ಬಣ್ಣ ಎಂದ ತಕ್ಷಣ ಬಿಜೆಪಿಯವರಿಗೇನೂ ಪೇಟೆಂಟ್ ಕೊಟ್ಟಿಲ್ಲ  ಸ್ವಾಮಿಗಳೆಲ್ಲಾ ಕೇಸರಿ ಬಟ್ಟೆ ಧರಿಸುತ್ತಾರೆ ಅವರೇನು ಬಿಜೆಪಿ ಸದಸ್ಯರಾ?  ಕಾಲೇಜುಗಳಲ್ಲಿ ಈ  ರೀತಿ ಪ್ರಕರಣ ನಡೆದರೆ ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು  ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ರಾಯರಡ್ಡಿ ಕೊಪ್ಪಳದಲ್ಲಿ ಹೇಳಿದ್ದಾರೆ.

Leave a Reply