ಬೀದಿ ವ್ಯಾಪಾರಿಗಳಿಗೆ ತರಬೇತಿ ನೀಡಲು ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಕೊಪ್ಪಳ ಮೇ.೦೪ ಗಂಗಾವತಿ ನಗರಸಭೆ ವತಿಯಿಂದ ನಗರದ ಬೀದಿ ವ್ಯಾಪಾರಿಗಳಿಗೆ ತರಬೇತಿ ಆಯೋಜಿಸಲು ಸಂಘ/ಸಂಸ್ಥೆ ಹಾಗೂ ಸರ್ಕಾರೇತರ ಸಂಸ್ಥೆ/ ಸರ್ಕಾರಿ ಅಂಗ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ೨೦೧೫-೧೬ ನೇ ಸಾಲಿಗೆ ನಗರಸಭೆ ವ್ಯಾಪ್ತಿಯ ಬೀದಿ ವ್ಯಾಪಾರಿಗಳ ಸಮೀಕ್ಷೆ, ತರಬೇತಿ, ಗುರುತಿನ ಚೀಟಿ ಒದಗಿಸಿ ಮೂಲಸೌಕರ್ಯದೊಂದಿಗೆ ಬೀದಿ ವ್ಯಾಪಾರಿಗಳ ಮಾರಾಟ ವಲಯ ಸ್ಥಾಪಿಸಿ ನಿಯಮಾನುಸಾರ ಸೂಕ್ತ ವ್ಯವಸ್ಥೆ ಕಲ್ಪಸುವ ಉದ್ದೇಶದಿಂದ, ಬೀದಿ ವ್ಯಾಪಾರಿಗಳಿಗೆ ತರಬೇತಿ ನೀಡಲು ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯ ಮೂಲಕ ಬೀದಿ ವ್ಯಾಪಾರಿಗಳ ಸಮೀಕ್ಷೆ ಕೈಗೊಳ್ಳಲು, ಈಗಾಗCITY2ಲೇ ನಲ್ಮ್ ಯೋಜನೆಯಡಿ ರಚಿಸಲಾಗಿರುವ ಸ್ವ ಸಹಾಯ ಸಂಘ/ ಪ್ರದೇಶಮಟ್ಟದ ಒಕ್ಕೂಟ/ ನಗರ ಮಟ್ಟದ ಒಕ್ಕೂಟಗಳಿಗೆ, ಗುಂಪುಗಳಿಗೆ ಸಮೀಕ್ಷೆ ಕೈಗೊಳ್ಳಲು ಆದ್ಯತೆ ನೀಡುವ ಕುರಿತು ಸೂಚನೆ ನೀಡಲಾಗಿದೆ. ನಿಗದಿಪಡಿಸಿದ ಅನುದಾನಕ್ಕೆ ಅನುಗುಣವಾಗಿ ಸಮೀಕ್ಷೆ ಕೈಗೊಳ್ಳುವ, ಈಗಾಗಲೇ ಗುರುತಿಸಿರುವ ಮತ್ತು ಗುರುತಿಸಲ್ಪಡುವ ನಗರ ಬೀದಿ ವ್ಯಾಪಾರಸ್ಥರಿಗೆ ಗುಣ ಮಟ್ಟದ ಗುರುತಿನ ಚೀಟಿ ಮುದ್ರಿಸಿ, ನಗರ ಸ್ಥಳೀಯ ಸಂಸ್ಥೆಗಳು ನಿರ್ದೇಶನಾಲಯದಿಂದ ತಿಳಿಸಿರುವಂತೆ ಮುದ್ರಿಸಿ ವಿತರಿಸಲು ಕರ್ನಾಟಕ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ಪಡೆದಿರುವ ಅರ್ಹ ಸಂಘ/ಸಂಸ್ಥೆ ಹಾಗೂ ಸರ್ಕಾರೇತರ ಸಂಸ್ಥೆ/ ಸರ್ಕಾರಿ ಅಂಗ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಸಂಸ್ಥೆಗಳು ಒಂದು ವಾರದೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ನಗರಸಭೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವಿಭಾಗವನ್ನು ಸಂಪರ್ಕಿಸಬಹುದು.

Leave a Reply