ಬಿರು ಬಿಸಿಲಿನ ನಡುವೆಯೂ ತುರುಸಿನ ಮತದಾನ

koppal-election-kukanoor-kanakagiri-tavaragera-karatagi-elections (1) koppal-election-kukanoor-kanakagiri-tavaragera-karatagi-elections (2) koppal-election-kukanoor-kanakagiri-tavaragera-karatagi-elections (3) koppal-election-kukanoor-kanakagiri-tavaragera-karatagi-elections (4) koppal-election-kukanoor-kanakagiri-tavaragera-karatagi-elections (5) koppal-election-kukanoor-kanakagiri-tavaragera-karatagi-elections (6) koppal-election-kukanoor-kanakagiri-tavaragera-karatagi-elections (7) koppal-election-kukanoor-kanakagiri-tavaragera-karatagi-elections (8) koppal-election-kukanoor-kanakagiri-tavaragera-karatagi-elections (9): ಬಿರು ಬಿಸಿಲಿನ ನಡುವೆಯೂ ಕುಕನೂರು ಪಟ್ಟಣ ಪಂಚಾಯತಿಯ ವಿವಿಧ ವಾರ್ಡುಗಳಲ್ಲಿ ತುರುಸಿನ ಮತದಾನ ನಡೆಯುವುದು ಕಂಡುಬಂದಿತು.
ಗ್ರಾಮ ಪಂಚಾಯತಿಯಾಗಿದ್ದ ಕುಕನೂರಿಗೆ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರುವ ಅವಕಾಶ ಬಂದಿದ್ದರಿಂದ, ಇದೇ ಮೊದಲ ಬಾರಿಗೆ ಕುಕನೂರು ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರದಂದು ನಡೆಯಿತು. ನೂತನವಾಗಿ ಮೇಲ್ದರ್ಜೆಗೇರಿರುವ ಕುಕನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು ೧೯ ವಾರ್ಡ್‌ಗಳಿದ್ದು, ಪಟ್ಟಣ ಪಂಚಾಯತಿಗೆ ನೂತನ ಸದಸ್ಯರನ್ನು ಮೊದಲ ಬಾರಿಗೆ ಆಯ್ಕೆ ಮಾಡುವ ಅವಕಾಶ ಮತದಾರರಿಗೆ ಲಭಿಸಿದೆ. ಪಟ್ಟಣದ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೂ ಉತ್ತಮ ಮತದಾನ ಪ್ರಮಾಣ ದಾಖಲಾಯಿತು. ಮಧ್ಯಾಹ್ನದ ನಂತರ ತೀವ್ರ ಬಿಸಿಲು ಇರುವುದನ್ನು ಗಮನದಲ್ಲಿರಿಸಿಕೊಂಡ, ಮತದಾರರು, ಮತದಾನ ಪ್ರಾರಂಭವಾದ ಬೆಳಿಗ್ಗೆ ೦೭ ಗಂಟೆಯಿಂದಲೇ ಮತದಾನ ನಡೆಸಲು ಮುಂದಾಗಿದ್ದು ಕಂಡುಬಂತು. ವಾರ್ಡ್ ಸಂಖ್ಯೆ ೦೪, ೦೬, ೧೦, ೧೪, ೧೫, ಮತ್ತು ೧೬ ರಲ್ಲಿ ಬೆಳಿಗ್ಗೆಯೇ ಉತ್ತಮ ಮತದಾನ ಕಂಡುಬಂದಿತು. ಬೆಳಿಗ್ಗೆ ೧೦ ಗಂಟೆಯ ಹೊತ್ತಿಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೂ, ಬಿರು ಬಿಸಿಲಿನ ನಡುವೆಯೂ ಮತದಾರರು ತುರುಸಿನ ಮತದಾನ ನಡೆಸಿದ್ದು, ಕಂಡುಬಂದಿತು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಯಲಬುರ್ಗಾ ತಾಲೂಕು ಚುನಾವಣಾಧಿಕಾರಿಯೂ ಆಗಿರುವ ತಹಸಿಲ್ದಾರ್ ಪಟ್ಟದಕಲ್ ಹಾಗೂ ಕುಕನೂರು ಪಟ್ಟಣ ಪಂಚಾಯತಿಯ ಚುನಾವಣಾಧಿಕಾರಿಯಾಗಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಶಾರದಾ ನಿಂಬರಗಿ ಅವರು, ಪಟ್ಟಣದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಸುಗಮ ಮತದಾನ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು. ಮತಗಳ ಎಣಿಕೆ ಕಾರ್ಯ ಏ. ೨೭ ರಂದು ಯಲಬುರ್ಗಾ ತಾಲೂಕು ತಹಸಿಲ್ದಾರರ ಕಾರ್ಯಾಲಯದಲ್ಲಿ ನಡೆಯಲಿದೆ.

Please follow and like us:
error