ಬಿಪಿಎಲ್ ಕಾರ್ಡ್‌ ದಾರರ ಖಾತೆಗೆ 2.50 ಲಕ್ಷ ರೂ.ಜಮೆ ಆದ್ರೆ ಕಾರ್ಡ್‌ ರದ್ದು: ಸಚಿವ ಖಾದರ್ ಎಚ್ಚರಿಕೆ

ut-khaderಬೆಂಗಳೂರು, ನ.17: ಬಿಪಿಎಲ್‌ ಕಾರ್ಡ್‌ ದಾರರೇ  ಎಚ್ಚರ ವಹಿಸಿ. ನಿಮ್ಮ ಖಾತೆಗೆ2.50 ಲಕ್ಷ ರೂ. ಹಣ ಜಮಾ ಆದ್ರೆ ಟ್ಯಾಕ್ಸ್‌ ಬೀಳುತ್ತೆ. ನೀವು ಟಾಕ್ಸ್‌ ಪಾವತಿದಾರರಾದರೆ ನಿಮ್ಮ ಬಿಪಿಎಲ್ ಕಾರ್ಡ್‌ ರದ್ದಾಗುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ  ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಪಿಎಲ್ ಕಾರ್ಡ್ ದಾರರು ತೆರಿಗೆ ಪಾವತಿದಾರರಾಗಬಾರದು ಎಂದು ಅವರು ಹೇಳಿದರು.
ಸಾವಿರ ರೂ. ಹಾಗೂ ಐನೂರು ನೋಟು ನಿಷೇಧದ ಹಿನ್ನೆಲೆಯಲ್ಲಿ ನವೆಂಬರ್‌ ತಿಂಗಳ ಅಕ್ಕಿ, ಗೋದಿ, ಎಣ್ಣೆ ಮತ್ತಿತರ ಪಡಿತರ ಸಾಮಗ್ರಿಗಳನ್ನು ಸಾಲದ ರೂಪದಲ್ಲಿ ನೀಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ. ಸಮಸ್ಯೆ ಬಗೆ ಹರಿಯದಿದ್ದರೆ ಡಿಸೆಂಬರ‍್ ನಲ್ಲೂ  ಸಾಲ ನೀಡಲಾಗುವುದು. ಇದರಿಂದ ಸರಕಾರಕ್ಕೆ 40 ಕೋಟಿ ರೂ ಹೆಚ್ಚುವರಿ ಹೊರೆ ಬೀಳಲಿದೆ. ಎಂದು ಖಾದರ‍್ ಅಭಿಪ್ರಾಯಪಟ್ಟರು.

Please follow and like us:
error