ಬಿಜೆ.ಪಿ. ತಾಲೂಕು ಮಹಿಳಾ ಮಂಡಲ ಕಾರ್ಯಕಾರಿಣಿ ಸಭೆ

bjp_mahila_morcha_koppal_cv_chandrashekarಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಛೇರಿಯಲ್ಲಿ ತಾಲೂಕು ಮಹಿಳಾ ಮಂಡಲ ಕಾರ್ಯಕಾರಿಣಿ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ತಾಲೂಕು ಮಹಿಳಾ ಮಂಡಲದ ಅಧ್ಯಕ್ಷರಾದ ಶಾಂತಮ್ಮ ಶೇಖರಗೌಡ ಮಾಲಿಪಾಟೀಲ್ ಕೋಳೂರು ವಹಿಸಿದ್ದರು. ಇದರಲ್ಲಿ ಮಹಿಳಾ ಜಿಲ್ಲಾ ಅಧ್ಯಕ್ಷರಾದ ಮಧುರಾ ಕರಣಂ ಇವರು ಪ್ರಾಸ್ತವಿಕವಾಗಿ ಮಾತನಾಡಿ ಮಹಿಳೆಯರು ಸಂಘಟನೆಯಲ್ಲಿ ತೊಡಗಬೇಕು, ಬಿ.ಜೆ.ಪಿ. ಪಕ್ಷವನ್ನು ಬಲಪಡಿಸಬೇಕು, ಮತ್ತು ೬೦ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಮಾಡಲಾಗದಂತ ಕೆಲಸವನ್ನು ನಮ್ಮ ಪ್ರಧಾನಮಂತ್ರಿಯವರು ಮಾಡಿದ್ದಾರೆ ಎಂದು ಮಾತನಾಡಿದರು. ಮತ್ತು ಜಿಲ್ಲಾ ಕಾರ್ಯದರ್ಶಿ ಹೇಮಲತಾ ನಾಯಕ ಮಾತನಾಡಿ ಮಹಿಳೆಯರು ಪಕ್ಷದಲ್ಲಿ ತೊಡಗಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಟ್ಟ ಸೌಲಭ್ಯಗಳನ್ನು ಪಡೆಯಬೇಕು, ಸುಕನ್ಯಾ ಭಾಗ್ಯ ಮತ್ತು ಜನ್‌ಧನ್ ಯೋಜನೆ ಮತ್ತು ಭೀಮಾ ಯೋಜನೆ, ಗ್ಯಾಸ್ ಸೌಲಭ್ಯ ಮತ್ತು ಎಲ್ಲಾ ಮಹಿಳೆಯರು ಬ್ಯಾಂಕ್ ಖಾತೆಗಳನ್ನು ಹೊಂದಿ ಬರುವಂತ ಸೌಲಭ್ಯಗಳನ್ನು ಪಡೆಯಬೇಕು. ಮತ್ತು ಒಬ್ಬ ಮಹಿಳೆ ಹತ್ತು ಮಹಿಳೆಯರಿಗೆ ಸೌಲಭ್ಯವನ್ನು ಕೊಡಿಸುವಂತ ಸಂಘಟನೆಯಲ್ಲಿ ತೊಡಗಬೇಕು ಎಂದು ಮಾತನಾಡಿದರು. ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ.ಚಂದ್ರಶೇಖರವರು ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಪಕ್ಷದಲ್ಲಿ ಸಂಘಟನೆ ಕಡಿಮೆಯಾಗಿದ್ದು, ಇನ್ನೂಮುಂದೆ ಸಂಘಟನೆಗೆ ಹೆಚ್ಚು ಒತ್ತುಕೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಕ್ಷವನ್ನು ಬಲಪಡಿಸಬೇಕು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಟ್ಟಂತ ಯೋಜನೆಗಳನ್ನು ಪಡೆದುಕೊಳ್ಳಬೇಕೆಂದು ಮಾತನಾಡಿದರು. ಕಾರ್ಯಕಾರಿಣಿ ಸಭೆಯ ವರದಿಯನ್ನು ಜಿಲ್ಲಾ ಉಪಾಧ್ಯಕ್ಷರಾದ ರಾಜೂ ಬಾಕಳೆಯವರು ತೆಗೆದುಕೊಂಡರು. ತಾಲೂಕು ಮಹಿಳಾ ಮಂಡಲ ಕಾರ್ಯದರ್ಶಿಯಾದ ಫಕ್ರುಮಾ ಬೇಗಂ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶಶಿಕಲಾ ಇವರು ವಂದನಾರ್ಪಣೆ ಮಾಡಿದರು.
ಈ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡ ಪಕ್ಷದ ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ನಗರಿ, ತಾಲೂಕ ಮಂಡಲದ ಮಹಿಳಾ ಪ್ರಧಾನ ಕಾರ್ಯದರ್ಶಿ ಶಶಿಕಲಾ ಶೆಲೂಡಿ, ವಾಣಿಶ್ರೀ ಮಠದ, ದೇವಮ್ಮ ಕಲ್ಲಪ್ಪ ಹೂಗಾರ, ರುದ್ರಮ್ಮ ಪೋಲಿಸ್ ಪಾಟೀಲ್, ಶೇಖಮ್ಮ ಉಳ್ಳಿಮುದ್ದಿ, ರೇಖಾ ಬಹದ್ದೂರಬಂಡಿ, ನಗರಸಭಾ ಸದಸ್ಯರಾದ ಸುವರ್ಣ ನೀರಲಗಿ, ಶಾಮಲಾ ಕೋನಾಪೂರ, ಗ್ರಾಮೀಣ ಮಂಡಲದ ಅಧ್ಯಕ್ಷರಾದ ತೋಟಪ್ಪ ಕಾಮನೂರ, ನಗರ ಮಂಡಲದ ಕಾರ್ಯದರ್ಶಿ ದೇವರಾಜ ಹಾಲಸಮುದ್ರ, ಇನ್ನೂ ಮುಂತಾದ ಪಕ್ಷ

Please follow and like us:
error