ಬಿಜೆಪಿ ಯುವ ಮೊರ್ಚಾ ಕಾರ್ಯಕಾರಣಿ

cv-chandrashekar-koppal
ಕೊಪ್ಪಳ : ೨೧.೧೨.೨೦೧೬ ರಂದು ಪಕ್ಷದ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟೀಯ ಕೊಪ್ಪಳ ಗ್ರಾಮೀಣ ಯುವ ಮೊರ್ಚಾ ಕಾರ್ಯಕಾರಿಣಿ ನಡೆಯಿತು.
ಸಂಸದರಾದ ಸಂಗಣ್ಣ ಕರಡಿ ಮಾತನಾಡಿ ಪ್ರಧಾನಮಂತ್ರಿ ನರೇಂದ್ರಮೋದಿ ಕೈಗೊಂಡಿರುವ ಅಪನಗದಿಕರಣ (೫೦೦, ೧೦೦೦ ನೋಟು ರದ್ದತಿ) ಬಗ್ಗೆ ವಿಶೇಷವಾಗಿ ಯುವಕರು ನಾಗರಿಕರಲ್ಲಿ ತಪ್ಪು ಭಾವನೆಯನ್ನು ಹೊಗಲಾಡಿಸಿ ಈ ಕ್ರಮದಿಂದ ದೇಶಕ್ಕಾಗುವ ಉಪಯೋಗ ನಗದು ರಹಿತ ವರ್ಗಾವಣೆಯ ಮಾರ್ಗೊಪಾಯಗಳು ಸ್ಮಾರ್ಟ್‌ಪೋನ್‌ಗಳ ಮೂಲಕ ವ್ಯವಹರಿಸಬಹುದಾದ ಅಪ್ಲೀಕೇಶನ್‌ಗಳ ಬಗ್ಗೆ ಸಾರ್ವಜನಿಕರಲ್ಲಿ ಮನವರಿಕೆ ಮಾಡುವಂತೆ ಯುವಕರಿಗೆ ಸಲಹೆ ನಿಡಿದರು.
ಇದೇ ಸಂದಂರ್ಭದಲ್ಲಿ ಹಾಲವರ್ತಿ ಗ್ರಾಮದ ಬಿಜೆಪಿ ಗ್ರಾಮೀಣ ಮಂಡಲದ ಭೂತ್ ಮಟ್ಟದ ಸಮಿತಿಯ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಯುವಮೊರ್ಚಾ ಗ್ರಾಮೀಣ ಮಂಡಲ ಅಧ್ಯಕ್ಷರಾದ ಶಿವಯ್ಯ ಎನ್ ಹಿರೇಮಠ, ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾದ ಸಿವಿ ಚಂದ್ರಶೇಖರ, ಪಕ್ಷದ ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಸಿಂಗನಾಳ, ಜಿಲ್ಲಾ ಯುವಮೊರ್ಚಾ ಅಧ್ಯಕ್ಷರಾದ ಶರಣು ತಳ್ಳಿಕೇರಿ,ಜಿಲ್ಲಾ ಉಪಾಧ್ಯಕ್ಷರಾದ ರಾಜು ಬಾಕಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕವಲೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ತೋಟಪ್ಪ ಕಾಮನೂರ್, ನಗರ ಮಂಡಲ ಅಧ್ಯಕ್ಷರಾದ ಶಿವು ಅಕ್ಕಪಕ್ಕಿ, ಜಿಲ್ಲಾ ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಪ್ರವೀಣ ಇಟಗಿ, ತಾಲೂಕು ಪಂಚಾಯತ್ ಸದಸ್ಯರಾದ ಚಂದ್ರನಾಯಕ್ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Comment