ಬಿಜೆಪಿ ಮುಖಂಡರ ಮೇಲೆ ವಾಮಾಚಾರ ? ನಿವಾರಣೆಗೆ ಬಿಜೆಪಿ ಮುಖಂಡ ಮಾಡಿದ್ದೇನು ?

12345

ಬಿಜೆಪಿ ನಾಯಕರ ಮೇಲೆ ಸಚಿವ ಶಿವರಾಜ್ ತಂಗಡಗಿ ವಾಮಾಚಾರ ಮಾಡಿಸಿದ್ದಾರೆ ಅದು ನಿವಾರಣೆ ಮಾಡಬೇಕು ಎಂದು ಆರೋಪಿಸಿ ಬಿಜೆಪಿಯ ನಾಯಕ ಮುಕುಂದರಾವ್ ಭವಾನಿಮಠ ವಾಮಾಚಾರ ನಿವಾರಣೆಗಾಗಿ ಕನಕಗಿರಿಯ ತೊಂಡಿ ತೆವರಪ್ಪ ದೇವಾಲಯದಲ್ಲಿ ಪೂಜೆ ನಡೆಸಿದರು. ಕನಕಗಿರಿಯ ತೊಂಡಿ ತೆವರಪ್ಪ ದೇವಾಲಯ ವಾಮಾಚರಣೆ ನಿವಾರಣೆಗೆ ಹೆಸರು ವಾಸಿಯಾಗಿದೆ.

ಬಿಜೆಪಿಯ ಮುಖಂಡರ ಮೇಲೆ ನಡೆದಿರುವ ವಾಮಾಚಾರ ನಿವಾರಣೆಗಾಗಿ ಪೂಜೆ, ಹವನ ಮಾಡಿಸಿದರು..  ಸಣ್ಣ ನೀರಾವರಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿಗಳ ಹಗರಣ ನಡೆದು ಅಧಿಕಾರಿಗಳು ಅಮಾನತ್ತಾಗಿದ್ದರೂ ಸಹ ಸಚಿವ ಶಿವರಾಜ್ ತಂಗಡಗಿ ವಿರುದ್ದ ಬಿಜೆಪಿಯ ಯಾವ ಮುಖಂಡರೂ ಮಾತನಾಡುತ್ತಿಲ್ಲ. ಜಿಲ್ಲೆಯ ನಾಯಕರಷ್ಟೇ ಅಲ್ಲ ರಾಜ್ಯ ಮಟ್ಟದ ಯಾವುದೇ ನಾಯಕರು ಹೇಳಿಕೆ ಸಹ ಕೊಡುತ್ತಿಲ್ಲ. ನಮ್ಮ ನಮ್ಮ ಜಿಲ್ಲೆಯ ಯಾವೊಬ್ಬ ಬಿಜೆಪಿ ನಾಯಕರು ಧ್ವನಿ ಎತ್ತುತ್ತಿಲ್ಲ. ಅಲ್ಲದೇ ರಾಜ್ಯ ನಾಯಕರೂ ಸಹ ಮೌನವಾಗಿದ್ದಾರೆ.  2013ರ ಚುನಾವಣೆ ಸಂದರ್ಭದಲ್ಲಿ ಸಹ ಕೇರಳಕ್ಕೆ ಹೋಗಿ ವಾಮಾಚಾರ ಮಾಡಿಸಿಕೊಂಡು ಬಂದಿದ್ದರೂ. ನಂತರವೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಸಚಿವರ ತವರು ಜಿಲ್ಲೆ ಕೊಪ್ಪಳದಲ್ಲಿಯೇ ಸಣ್ಣ ನೀರಾವರಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರವಾದರೂ ಸಹ ಇದುವರೆಗೆ ಯಾರೂ ಬಾಯಿಬಿಡುತ್ತಿಲ್ಲ. ಹಿರಿಯರು ದೈವಿಕ ಪುರುಷರು ಇದು ವಾಮಾಚಾರದ ಪ್ರಯೋಗವಾಗಿದೆ ಎಂದು ಹೇಳಿದ್ದರಿಂದ ಅದರ ನಿವಾರಣೆಗಾಗಿ ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದರಿಂದ ಇಲ್ಲಿ ಪೂಜೆ ಮಾಡಲಾಗಿದೆ. ಇಷ್ಟಕ್ಕೂ ವಾಮಾಚಾರ ನಿವಾರಣೆಯಾಗದಿದ್ದರೆ ಮಲ್ಲಿಗೆವಾಡ ದುರ್ಗಮ್ಮ ದೇವಿಗೆ ಪ್ರಾಣಿ ಬಲಿ ನೀಡುವುದಾಗಿ  ಮುಕುಂದರಾವ್ ಹೇಳಿದ್ದಾರೆ

Leave a Reply