ಬಿಇಡಿ ದಾಖಲಾತಿಗಾಗಿ ಅಭ್ಯರ್ಥಿಗಳ ಮೂಲ ದಾಖಲೆ ಪರಿಶೀಲನೆ

: ಕೊಪ್ಪಳ ತಾಲೂಕು ಮುನಿರಾಬಾದ್‌ನಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಪ್ರಸಕ್ತ ಸಾಲಿನ ಎರಡು ವರ್ಷದ ಬಿ.ಇಡಿ ದಾಖಲಾತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಪ್ರಾರಂಭವಾಗಿದ್ದು ಫೆ. ೦೪ ರವರೆಗೆ ಡಯಟ್ ಮುನಿರಾಬಾದಿನಲ್ಲಿ ನಡೆಯಲಿದೆ.
ಪ್ರಸಕ್ತ ಸಾಲಿನ ಬಿಇಡಿ ದಾಖಲಾತಿಗಾಗಿ ಈಗಾಗಲೆ ಆಯ್ಕೆ ಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ www.schooleducation.kar.nic.inನಲ್ಲಿ ಪ್ರಕಟಿಸಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಮುನಿರಾಬಾದ್ ಡಯಟ್‌ನಲ್ಲಿ ಕಳೆದ ಜ. ೩೦ ರಿಂದ ಪ್ರಾರಂಭವಾಗಿದ್ದು, ಫೆ. ೦೪ ರವರೆಗೂ ನಡೆಯಲಿದೆ. ಅರ್ಹರು ತಮ್ಮ ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗುವಂತೆ ಮುನಿರಾಬಾದ್ ಡಯಟ್ ಪ್ರಾಚಾರ್ಯರು ತಿಳಿಸಿದ್ದಾರೆ.

Leave a Reply