ಕೊಪ್ಪಳ-26- ಯಲಬುರ್ಗಾ ತಾಲೂಕಿನಲ್ಲಿ ಬಿರುಬಿಸಲಿಗೆ ಬಾಳೆಬೆಳೆ ಒಣಗಿ ಹಾಳಾಗಿರುವ ಬೆಣಕಲ್ ಗ್ರಾಮದ ತೋಟಕ್ಕೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಸಲಿನ ತಾಪಕ್ಕೆ ಬೆಳೆ ನೆಲಕ್ಕೆ ಕುಸಿದಿರುವುದು ಆತಂಕಕಾರಿ ವಿಷಯ ಬಾಳೆಬೆಳೆ ಬಿಸಿಲಿಗೆ ತಾಳುತ್ತಿಲ್ಲ ಬಾಡುತ್ತಿರುವ ಬೆಳೆ ರಕ್ಷಿಸಿಕೊಳ್ಳಲು ರೈತರು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಗಿಡದಲ್ಲಿಯೇ ಕಪ್ಪಾಗುತ್ತಿರುವ ಬಾಳೆಕಾಯಿಗಳನ್ನು ಮಾರುಕಟ್ಟೆಗೂ ಸಹ ಸಾಗಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ೧೬೭೦ ಹೆಕ್ಟರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಅಧಿಕಾರಿಗಳು ರೈತರ ತೋಟಗಳಿಗೆ ಬೇಟಿ ನೀಡಿ ಸೂಕ್ತ ಸಲಹೆ ನೀಡದೆ ರೈತರ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಗೆ ತಂದಿದ್ದಾರೆ. ನೇಗಿಲ ಯೋಗಿಗೆ ಸೂಕ್ತ ಮಾರ್ಗದರ್ಶನ ಹಾಗೂ ಬೆಳೆ ನಷ್ಟ ಪರಿಹಾರವನ್ನ ಸರಕಾರ ಒದಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಡರಾದ ನವೀನ ಗುಳಗಣ್ಣವರ, ಅಂದಪ್ಪ ಜವಳಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಶಿಕಾಂತ, ರೈತರಾದ ಗವಿಸಿದ್ದಪ್ಪ ಬಳಗೇರ ಮೊದಲಾವರು ಉಪಸ್ಥಿತರಿದ್ದರು.
ಬಾಳೆತೋಟಕ್ಕೆ ಸಂಸದರ ಬೇಟಿ.
Please follow and like us: