You are here
Home > Koppal News-1 > ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ

ಬಾಯಾರಿದವನಿಗೆ ನೀರು ಕೊಡುವುದು ಪುಣ್ಯದ ಕೆಲಸ-ವಿಠ್ಠಪ್ಪ ಗೋರಂಟ್ಲಿ

neerina-arawatagi (2)

ಕೊಪ್ಪಳ -09- ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಅಲ್ಲಲ್ಲಿ ಯಾತ್ರಿಗಳಿಗೆ ನೆರವಾಗಲು ಯಾತ್ರಿ ನಿವಾಸಗಳನ್ನು, ನೀರಿನ ಅರವಟಿಗೆಗಳನ್ನು, ರಸ್ತೆ ಬದಿ ಗಿಡಮರಗಳನ್ನು ನೆಡುತ್ತಿದ್ದರು. ಕಾಲಮಾನ ಬದಲಾದರೂ ಅಂದಿನ ಪರಿಸ್ಥಿತಿ ಇಂದೂ ಮುಂದುವರೆದಿದೆ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಹೀಗಾಗಿ ನೀರಿನ ಅರವಟಿಗೆಗಳನ್ನು ಸ್ಥಾಪಿಸಿ ನೀರು ನೀಡುವುದು ಪುಣ್ಯದ ಕೆಲಸ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಬಹಾದ್ದೂರಬಂಡಿ ರಸ್ತೆಯ ನೇತಾಜಿ ಸುಭಾಸಚಂದ್ರಭೋಸ್ ಸರ್ಕಲ್ ನಲ್ಲಿ ಸರಸ್ವತಿ ವಿದ್ಯಾಮಂದಿರದ ವತಿಯಿಂದ ಸ್ಥಾಪಿಸಲಾದ ನೀರಿನ ಅರವಟಿಗೆಯನ್ನು ಉದ್ಘಾಟಿಸಿ ಮಾತನಾಡಿದರು. ಕುಡಿಯುವ ನೀರು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಇಂತಹ ಸ್ಥಳಗಳಲ್ಲಿ ಜನರಿಗೆ ನೆರವಾಗಲು ನೀರಿನ ಅರವಟಿಗೆ ಸ್ಥಾಪಿಸಿರುವದು ಒಳ್ಳೆಯ ಕೆಲಸ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಹಾದ್ದೂರ ಬಂಡಿಯ ಚಾಂದಪಾಷಾ ಕಿಲ್ಲೇದಾರ್, ಶಿವಯ್ಯ ಹಿರೇಮಠ,ಶಿಕ್ಷಕ ಬಿ.ಎಮ್.ಸವದತ್ತಿ ,ಗ್ರಾ,ಪಂ.ಸದಸ್ಯ ಬಾಬುಸಾಬ ಹಾದರಮಗ್ಗಿ, ಸಂಸ್ಥೆಯ ಕಾರ್‍ಯದರ್ಶಿ ಆರ್.ಎಚ್.ಅತ್ತನೂರ, ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Top