You are here
Home > Koppal News-1 > ಬಾಕಿ ಹಣ ಕೇಳಿದ್ದಕ್ಕೆ ಗೆಳೆಯನ್ನೆ ಕೊಂದ!

ಬಾಕಿ ಹಣ ಕೇಳಿದ್ದಕ್ಕೆ ಗೆಳೆಯನ್ನೆ ಕೊಂದ!

image

ಬಾಕಿ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಲೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೀರಣ್ಣ ರಡ್ಡೇರ್ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ವೀರಣ್ಣ ರಡ್ಡೇರ್ ಗ್ರಾಮದಲ್ಲಿ ಕಿರಾಣಿ ಸಂಗಡಿ ಇಟ್ಟುಕೊಂಡಿದ್ದನ್ನು. ವೀರಣ್ಣ ಸ್ನೇಹಿತನಾದ ಹಣಮಂತ್ ತಳವಾರ ಅಂಗಡಿಯಲ್ಲಿ ಉದ್ರಿಯಲ್ಲಿ ಮನೆ ಸಾಮಾನು ದಿನಸಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಅಂಗಡಿಯಲ್ಲಿ ೧೦ ಸಾವಿರ ಬಾಕಿಯಾಗಿದ್ದು, ಇದನ್ನು ಕಳೆದ ದಿನ ವೀರಣ್ಣ ಬಾಕಿ ಹಣ ಕೊಡು ಹನುಮಂತ್ ತಳವಾರನನ್ನು ಕೇಳಿದ್ದಾನೆ. ಹಣದ ವಿಷಯವಾಗಿ ಇಬ್ಬರ ನಡುವೇ ವಾಗ್ವಾದ ನಡೆದಿದೆ. ಇದರಿಂದ ರೊಚ್ಚಿಗೆದ್ದ ಹಣಮಂತ್ ತಳವಾರ ಕಳೆದ ರಾತ್ರಿ ವೀರಣ್ಣ ಮನೆಹೊಕ್ಕು, ಕಟ್ಟಿಗೆಯಿಂದ ಮನಬಂದಂತೆ ಹೊಡೆದಿದ್ದಾನೆ. ನಂತರ ಗಂಭೀರವಾಗಿ ಗಾಯಗೊಂಡಿದ್ದ ವೀರಣ್ಣನನ್ನು ಸ್ಥಳೀಯರು ಬೆಟಗೇರಿ ಸರ್ಕಾರಿ ಆಸ್ಪತ್ರೆಗೆ ಸಾಗಿದ್ದಾರೆ. ಚಿಕಿತ್ಸೇ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನೊಪ್ಪಿದ್ದಾನೆ. ವಿಷಯ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆ ಮಾಡಿದ ಹಣಮಂತನ್ನು ತಮ್ಮ ವಶಕ್ಕೆ ಪಡೆದಿದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Top