fbpx

ಬಸಾಪುರ ಕೆರೆ ಹೂಳೆತ್ತುವ ಕಾರ್ಯ : ೨ ಎತ್ತುಗಳ ಮಾಲಿಕರಿಗೆ ಚೆಕ್ಕ್ ವಿತರಣೆ

ಶುದ್ಧ ಕುಡಿವ ನೀರು ಒದಗಿಸಲು ಪಪಂ ಕಚೇರಿ ಮುಂದೆ ಪ್ರತಿಭಟನೆ

basavaraj_rayaraddy_yelburga_mla (1)

ಜೂಲಕಟ್ಟಿಯಲ್ಲಿ ಸಿಡಿಲು ಬಡಿದ ಸಾವನ್ನಪ್ಪಿದ ೨ ಎತ್ತುಗಳ ಮಾಲಿಕರಿಗೆ ಚೆಕ್ಕ್ ವಿತರಣೆ
ಯಲಬುರ್ಗಾ: ರಾಜ್ಯದಲ್ಲಿ ಬಡ ರೈತ ವರ್ಗಕ್ಕೆ ಅನೇಕ ಸೌಲಭ್ಯ ಯೋಜನೆಯನ್ನು ಜಾರಿಗೆ ತರುವದರ ಮೂಲಕ ರೈತರ ಪರವಾಗಿ ರಾಜ್ಯ ಸರಕಾರ ಸ್ಪಂದಿಸಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಜೂಲಕಟ್ಟಿ ಗ್ರಾಮದಲ್ಲಿ ಮಂಗಳವಾರ ಇತ್ತೀಚಿಗೆ ಸಿಡಿಲು ಬಡಿದು ಗ್ರಾಮದ ಈರಯ್ಯ ಪುರಾಣಿಕಮಠ ಎನ್ನುವವರ ಜೋಡೆತ್ತುಗಳು ಸಾವನ್ನಪ್ಪಿದ್ದು ತಾಲೂಕ ಆಡಳಿತ ವತಿಯಿಂದ ಪ್ರಕೃತಿ ವಿಕೋಪ ನಿಧಿಯಿಂದ ಮೃತ ಎತ್ತಿನ ಮಾಲಿಕರಿಗೆ ೫೦ ಸಾವಿರ ಮೊತ್ತದ ಚೆಕ್ಕ್ ವಿತರಸಿ ಮಾತನಾಡಿದರು.
ಗ್ರಾಮದಲ್ಲಿ ಇತ್ತೀಚಿಗೆ ೨ ಎತ್ತುಗಳು ಸಾವನ್ನಪ್ಪಿದ್ದು ದುರದುಷ್ಟಕರವಾಗಿದೆ ತ್ವರಿತ ಗತಿಯಲ್ಲಿ ಮೃತ ಮಾಲಿಕರಿಗೆ ಸರ್ಕಾರದಿಂದ ೫೦ ಸಾವಿರ ಸಹಾಯಧನ ನೀಡಲಾಗಿದೆ ಈ ಕುಟುಂಬಕ್ಕೆ ಕೃಷಿ ಹೊಂಡ ನಿರ್ಮಾಣ, ೧ ಆಕಳು ನೀಡಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕೃಷಿ ಸಚಿವ ಕೃಷ್ಣ ಭೈರೆಗೌಡ ಅವರು ಯಲಬುರ್ಗಾ ತಾಲೂಕಿಗೆ ೧ ಸಾವಿರ ಕೃಷಿ ಹೊಂಡ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದಾರೆ.ಈಗಾಗಲೆ ಕೃಷಿ ಹೊಂಡ ನಿರ್ಮಾಣದ ಫಲಾನುಭವಿಗಳ ಆಯ್ಕೆಪ್ರಕ್ರೀಯೆ ಶುರುವಾಗಿದೆ. ಕೃಷಿ ಹೊಂಡ ನಿರ್ಮಾಣದಿಂದ ರೈತರಿಗೆ ಉತ್ತಮ ಬೆಳೆ ಬೆಳೆಯಲು ಸಾಧ್ಯ ಜೊತೆಗೆ ಸರಕಾರದಿಂದ ೧ ಲಕ್ಷ ಸಹಾಯಧನ ದೊರೆಯಲಿದೆ ಎಂದು ಹೇಳಿದರು. ತಾಲೂಕಿಗೆ ೨೫ ಸಾವಿರ ವಸತಿ ಮನೆಗಳನ್ನ ನಿರ್ಮಾಣಕ್ಕೆ ರಾಜ್ಯ ಸರಕಾರ ಮಂಜೂರ ಮಾಡಿದೆ. ಮುಂದಿನ ಜೂನ್ ನಲ್ಲಿ ೪ ಸಾವಿರ ಕೋಟಿ ವೆಚ್ಚದಲ್ಲಿ ಕೃಷ್ಣ ಬಿ ಸ್ಕಿಂ ಯೋಜನೆಯ ೩ನೇ ಹಂತದ ಕಾಮಗಾರಿಗೆ ಚಾಲನೆ ಕೊಡಲಾಗುವುದು ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳ ಜೊತೆಗೆ ಜನತೆಯ ಕಲ್ಯಾಣಕ್ಕಾಗಿ ನಾನು ಶಾಸಕನಾಗಿ ದುಡಿಯುತ್ತೆನೆ ಎಂದು ಹೇಳಿದರು.
sತಾಲೂಕಿನಲ್ಲಿ ಶಾಶ್ವತ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಆಲಮಟ್ಟಿ ಮುಖಾಂತರ ಕುಷ್ಟಗಿ- ಯಲಬುರ್ಗಾಕ್ಕೆ ಸುಮಾರ ೮೦೦ ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯ ಟೆಂಡರ್ ಪ್ರಕ್ರೀಯೆ ಮುಕ್ತಾಯ ಹಂತದಲ್ಲಿದೆ ಜೂನ್ ತಿಂಗಳ ಮೊದಲೆ ವಾರದಲ್ಲಿ ಈ ಕಾಮಗಾರಿ ಪ್ರಾರಂಭವಾಗಲಿದೆ.
ತಾಲೂಕಿನ ವಿವಿಧ ಗ್ರಾಮದಲ್ಲ ಕುಡಿಯುವ ನೀರು ತೊಂದರೆ ಬರದಂತೆ ನೋಡಿಕೊಳ್ಳುವ ಉದ್ದೇಶದಿಂದ ನೂತನ ೧೦೯ ಆರ್‌ಓ ಫೀಟರ್(ಶುದ್ದ ಕುಡಿಯುವ ನೀರು ಘಟಕ ನಿರ್ಮಾಣ ಸ್ಥಾಪನೆ ) ಮಾಡಲಾಗುವುದು. ಈ ಯೋಜನೆಯು ಜೂನ ೧೦ಕ್ಕೆ ಪ್ರಾರಂಭಿಸಲಾಗುವುದು. ಈ ಕಾರ್ಯಕ್ರಮ ಉದ್ಘಾಟನೆಕ್ಕೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯಿತಿ ರಾಜ್ಯ ಸಚಿವ ಎಚ್.ಕೆ.ಪಾಟೀಲ್ ಭಾಗವಹಿಸಲಿದ್ದಾರೆ.
ತಹಶೀಲ್ದಾರ ಪುಟ್ಟರಾಮಯ್ಯ, ಹಾಗೂಪಶು ಅಧಿಕಾರಿ ಡಾ.ತಿಪ್ಪಣ್ಣ ತಳಕಲ್ಲ್ ಮಾತನಾಡಿದರು. ಕೆಪಿಸಿಸಿ ಸದಸ್ಯ ಬಸವರಾಜ ಉಳ್ಳಾಗಡ್ಡಿ, ತಾಪಂ ಮಾಜಿ ಅಧ್ಯಕ್ಷ ವೀರನಗೌಡ ಪೋ,ಪಾಟೀಲ್, ಕೃಷಿ ಸಹಾಯಕ ನಿದೇರ್ಶಕ ಯಂಕಪ್ಪ ಅತ್ತಾರ, ಮುಖಂಡ ಡಾ. ಶಿವನಗೌಡ ದಾನರಡ್ಡಿ, ಅಪ್ಪಣ್ಣ ಜೋಶಿ, ಸತ್ಯನಾರಾಯಣಪ್ಪ ಹರಪನಹಳ್ಳಿ, ಹೇಮರಡ್ಡಿ ರಡ್ಡೇರ್, ಶ್ರೀಧರ ಆಚಾರ್ಯ, ಪ್ರಕಾಶ ಸವಡಿ ಇದ್ದರು.

basavaraj_rayaraddy_yelburga_mla (2) basavaraj_rayaraddy_yelburga_mla (3) basavaraj_rayaraddy_yelburga_mla (4) koppal_exams

ಯಲಬುರ್ಗಾ: ಪಟ್ಟಣದ ೧೦ನೇ ವಾರ್ಡಿನ ಶ್ರೀಗುರು ಬಸವಲಿಂಗೇಶ್ವರ ಕಾಲನಿಯಲ್ಲಿ ಸರಬರಾಜಾಗುವು ಕಲುಷಿತ ನೀರಿನೊಂದಿಗೆ ಅಲ್ಲಿನ ನಿವಾಸಿಗಳು ಪಪ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟಿಸಿದರು.
ಕಾಲನಿಯಲ್ಲಿರುವ ಕೊಳವೆ ಬಾವಿಗಳ ಸುತ್ತಲು ಇರುವೆ ಹಾಗೂ ಇನ್ನಿತರ ಕೀಟಗಳ ವಾಸವಾಗಿವೆ. ಇದೇ ಕೊಳವೆ ಬಾವಿಯಿಂದ ಸರಬರಾಜಾಗುವ ನೀರಿನಲ್ಲಿ ಸತ್ತ ಇರುವೆಗಳ ತುಂಡು ಮತ್ತು ಇನ್ನಿತರ ಕಸಕಡ್ಡಿಗಳು ಬರತೊಡಗಿವೆ. ಪ್ರತಿ ನಿತ್ಯವೂ ಇದೇ ತರಹದ ನೀರು ಸರಬರಾಜಾಗುತ್ತಿದ್ದು, ಇಲ್ಲಿನ ನಿವಾಸಿಗಳು ನರಕಯಾತನೇ ಅನುಭವಿಸುವಂತಾಗಿದೆ. ಕಲುಷಿತ ಮತ್ತು ದುರ್ನಾತ ಬಿರುವ ನೀರು ಸರಬರಾಜಾಗುತ್ತಿರುವ ಬಗ್ಗೆ ಪಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡಿಗೆ ಸರಬರಾಜಾಗುವ ಕಲುಷಿತ ಹಾಗೂ ದುರ್ನಾತ ಬಿರುವ ನೀರನ್ನು ತಡೆದು ಶುದ್ಧ ಹಾಗೂ ಸ್ವಚ್ಛ ನೀರು ಒದಗಿಸಬೇಕು. ಅಲ್ಲದೆ ಕಾಲನಿಯಲ್ಲಿನ ಜನಸಂಖ್ಯೆಗನುಗುಣವಾಗಿ ನೀರು ಸಾಕಾಗುತ್ತಿಲ್ಲ. ಕೂಡಲೇ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು ಎಂದು ನಿವಾಸಿಗಳು ಎಚ್ಚರಿಸಿದರು.
ಬಳಿಕ ಪಪಂ ಸಿಬ್ಬಂದಿ ಚನ್ನಪ್ಪ ಅಂಗಡಿಗೆ ಮನವಿ ಸಲ್ಲಿಸಿದರು. ಕಾಲನಿಯ ನಿವಾಸಿಗಳಾದ ಖಾಜಾವಲಿ ಕನಕಗಿರಿ, ಶಾಂತಮ್ಮ ಗುರಿಕಾರ, ದ್ರಾಕ್ಷಾಣೆಮ್ಮ ಹಡಪದ, ರಾಮವ್ವ ತಳವಾರ, ಕುಷ್ಮಾ ಕಮ್ಮಾರ, ರೇಣುಕಾ ಹಡಪದ, ಶರಣಪ್ಪ ಮೇಳಿ, ಅಬ್ದುಲ್‌ಸಾಬ, ಮಂಜುನಾಥ, ಶರಣಪ್ಪ ಹಗೇದಾಳ ಸೇರಿ ಇತರರಿದ್ದರು.

ಮಕ್ಕಳಿಗೆ ಸಂಸ್ಕೃತಿ ,ಸಂಸ್ಕಾರ ಮನೋಭಾವನೆ ಬೆಳೆಸಲು ಶ್ರಮಿಸಿ : ಸಿ.ಎಚ್.ಪಾಟೀಲ್

ಯಲಬುರ್ಗಾ: ಪ್ರತಿಯೊಬ್ಬ ಮಹಿಳೆಯರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರ ವಿಚಾರಗಳನ್ನು ಬೆಳೆಸಲು ತಾಯಂದಿರು ಹೆಚ್ಚು ಶ್ರಮ ವಹಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಸಿ.ಎಚ್.ಪೋ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ಮೋಗ್ಗಿ ಬಸವೇಶ್ವರ ಜಾತ್ರ ನಿಮಿತ್ಯ ದೇವಸ್ಥಾನ ಆವರಣದಲ್ಲಿ ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಚೊಚ್ಚಲ ಗರ್ಭಿಣಿಯರಿಗೆ ಸಿಮಂತ ಕಾರ್ಯ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ನಾಡಿನಲ್ಲಿ ಹಲವಾರು ಶರಣರು ಸಂತರು ನೆಲೆಸಿದ್ದಾರೆ ಅವರ ಧಾರ್ಮಿಕ ಮನೋಭಾವನೆ ತತ್ವಗಳನ್ನ ಎಲ್ಲರೂ ಪಾಲಿಸುವುದು ಅಗತ್ಯವಿದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾರ್ವಜನಿಕರು ಸಹಕಾರ ನೀಡಬೇಕಾಗಿದೆ ಪ್ರತಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಮಿಸಲಾತಿ ನೀಡಿದೆ ಇದನ್ನು ಹೆಣ್ಣು ಮಕ್ಕಳು ಸದುಪಯೋಗ ಪಡಿಸಿಕೋಳ್ಳಬೇಕು ಎಂದರು.
ಪಟ್ಟಣದ ಉಭಯ ಮಠದ ಶ್ರೀಗಳಾದ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಬಸಲಿಂಗೇಶ್ವರ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಾತ್ರ ಸಮಿತಿಯಿಂದ ಮುತ್ತೈದಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಚೊಚ್ಚಲ ಗರ್ಭಿಣಿಯರಿಗೆ ಸಿಮಂತ ಕಾರ್ಯ ನೆರವೇರಿತು.
ಪಪಂ ಸದಸ್ಯ ವಿಜಯಕುಮಾರ ಕರಂಡಿ, ವಕೀಲರ ಸಂಘದ ಅಧ್ಯಕ್ಷ ಎಸ್.ಎನ್.ಶ್ಯಾಗೋಟಿ, ಹಿರಿಯ ಪತ್ರಕರ್ತ ಕೋಟ್ರಪ್ಪ ತೋಟದ, ಸಂಗಣ್ಣ ಟೆಂಗಿನಕಾಯಿ ಇನ್ನಿತರರು ಇದ್ದರು.

ಪದವಿ ಪರೀಕ್ಷೆ ಆರಂಭ : ೧೯೨ ವಿದ್ಯಾರ್ಥಿಗಳು ಹಾಜರು , ೧೦ ವಿದ್ಯಾರ್ಥಿಗಳು ಗೈರು
ಯಲಬುರ್ಗಾ: ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಬುಧುವಾರ ಬಿ.ಎ, ಬಿಎಸ್ಸಿಯ ೨, ೪, ೬ನೇ ಸೆಮಿಸ್ಟರ ಪದವಿ ಪರೀಕ್ಷೆಯನ್ನ ವಿದ್ಯಾರ್ಥಿಗಳು ಶಾಂತಿಯುತವಾಗಿ ಬರೆದರು.
ಒಟ್ಟು ೨೦೨ ವಿದ್ಯಾರ್ಥಿಗಳ ಪೈಕಿ ಪರೀಕ್ಷೆಗೆ ೧೯೨ ವಿದ್ಯಾರ್ಥಿಗಳು ಹಾಜರು ೧೦ ಜನ ಗೈರು ಹಾಜರಿಯಾಗಿದ್ದಾರೆ. ೮ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಮಾತನಾಡಿ ಮೇ ೧೧ ರಿಂದ ಜೂನ್ ೬ ರವರೆಗೆ ಬಿ.ಎ, ಬಿಎಸ್ಸಿ, ಬಿಕಾಂ,೨, ೪, ೬, ಸೆಮಿಸ್ಟರ ಪದವಿಯ ವಿವಿಧ ವಿಷಯ ಪರೀಕ್ಷೆ ನಡೆಯಲಿದ್ದು ಪರಿಕ್ಷೆಯಲ್ಲಿ ಕಾಫಿ ನಡೆಯದಂತೆ ಹೆಚ್ಚು ಜಾಗೃತಿ ವಹಿಸಲಾಗಿದೆ ಪ್ರತಿಕೊಠಡಿಯಲ್ಲಿ ಕಾರ್ಯ ನಿರ್ವಹಿಸುವ ಮೇಲ್ವಿಚಾರಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶುದ್ದ ಕುಡಿಯುವ ನೀರು, ಸ್ವಚ್ಚತೆ ಆದ್ಯತೆ ಕೊಡಲಾಗಿದೆ ಪರೀಕ್ಷೆ ಕೇಂದ್ರದ ಸುತ್ತ ಮುತ್ತಲು ನಿಷೇಧಾ ಜಾರಿಗೆಗೊಳಿಸಲಾಗಿದೆ ಎಂದು ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ತಿಳಿಸಿದರು.
ಬಾಹ್ಯ ಪರೀಕ್ಷೆ ಮೇಲ್ವಿಚಾರಕ ಪ್ರೋ. ಬಿ.ಡಿ.ಕೆಶವನ್, ಉಪನ್ಯಾಸಕರಾದ ಎ.ಬಿ.ಕೆಂಚರಡ್ಡಿ, ನಾಗರತ್ನ ತಮ್ಮಿನಾಳ, ರಾಜಶೇಖರ ಪಾಟೀಲ್, ದೀಪಾ ಪತ್ತಾರ, ರಮೇಶ್ ಗುಜ್ಜಲ್ ಇದ್ದರು.
ಬಸಾಪುರ ಕೆರೆ ಹೂಳೆತ್ತುವ ಕಾರ್ಯಕ್ಕೆ ಗ್ರಾಪಂ ಅಧ್ಯಕ್ಷೆ ನಿರ್ಮಲಾ ಚಾಲನೆ

ಯಲಬುರ್ಗಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬಸಾಪುರದ ಕೆರೆ ಹೂಳೆತ್ತುವ ಕಾಮಗಾರಿಗೆ ಬಂಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಿರ್ಮಲಾ ಕೊತಬಾಳ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬರಗಾಲ ಹಿನ್ನಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮಸ್ಥರ ಗೂಳೆ ಹೋಗುವದನ್ನು ತಡೆಗಟ್ಟಲು ಸರ್ಕಾರ ಮಹತ್ತರವಾದ ಯೋಜನೆ ಜಾರಿ ಮಾಡಿದ್ದು ಎಲ್ಲರು ಈ ಯೋಜನೆ ಸದುಪಯೋಗ ಮಾಡಿಕೊಳ್ಳಿ ಎಂದರು. ಪಿಡಿಒ ರವಿಕುಮಾರ ಲಿಂಗಣ್ಣವರ ಮಾತನಾಡಿ, ಗ್ರಾಮದ ಪ್ರತಿಯೊಬ್ಬ ಬಡಕುಟುಂಬ ಸದಸ್ಯರಿಗೆ ಜಾಬ್ ಕಾರ್ಡ್ ನೀಡಿ ಅವರಿಗೆ ಪ್ರತಿ ನಿತ್ಯ ಸುಮಾರು ೨೩೪ರೂ. ಕೂಲಿಯನ್ನು ಮೂರು ದಿನಕ್ಕೊಮ್ಮೆ ಬರಿಸುವಂತೆ ಸೂಚನೆ ನೀಡಲಾಗಿದ್ದು ಪ್ರಾರಂಭವಾದ ಕೆರೆ ಹೂಳೆತ್ತುವ ಕಾರ್ಯದಲ್ಲಿ ಪ್ರತಿ ಬಡ ಕುಟುಂಬ ಸದಸ್ಯರು ಭಾಗವಹಿಸಿ ಕೆಲಸ ನಿರ್ವಹಿಸಬೇಕು ಎಂದರು.  ಈ ಕಾಮಗಾರಿ ಚಾಲನೆಯಲ್ಲಿ ಗ್ರಾಪಂ ಸದಸ್ಯರಾದ ,ಸುಬ್ಬನಗೌಡ ಪೋಲಿಸ್ ಪಾಟೀಲ, ಶಾಂತಗೌಡ ಪಾಟೀಲ, ಹನಮಪ್ಪ ಕಲೇರ, ಮಹಮದಸಾಬ ತಾಳಿಕೋಟಿ, ತಾಪಂ ನಿರ್ದೇಶಕ ಬಿಎಸ್ ಸತೀಶ್, ಸಂಯೋಜಕ ಲಕ್ಷ್ಮಣ ಕರಳ್ಳಿ , ವೀರಣ್ಣ ಸಾಲಮನಿ ಸೇರಿ ಇತರರಿದ್ದರು.

Please follow and like us:
error

Leave a Reply

error: Content is protected !!