ಬಸವಣ್ಣನವರ ಆದರ್ಶಗಳನ್ನು ನಮ್ಮ ಬದಕಿನಲ್ಲಿ ಅಳವಡಿಸಿಕೊಳ್ಳಬೇಕು : ಕೆಂಪಳ್ಳಿ

law-collage-koppal
ಕೊಪ್ಪಳ : ೧೨ ನೇ ಶತಮಾನದಲ್ಲಿ ಸಮಾಜದಲ್ಲಿರುವ ಮೌಡ್ಯತೆಯನ್ನು ಹೊಗಲಾಡಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹಗಲಿರಳು ಶ್ರಮಿಸಿದ ವಿಶ್ವ ಚೇತನ ಬಸವಣ್ಣನವರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಬದಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನ್ಯಾಯವಾದಿ ಹನಮಂತರಾವ್ ಕೆಂಪಳ್ಳಿ ಹೇಳಿದರು.
ಅವರು ಸ್ಥಳಿಯ ದಕ್ಷಿಣ ಭಾರತ ಹಿಂದಿ ಪ್ರಚಾರ ಕಾನೂನು ಮಹಾವಿದ್ಯಾಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಕೊಪ್ಪಳದ ವತಿಯಿಂದ ನೆಡದ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತಿನ ನಮ್ಮ ಕಾನೂನುಗಳು ಬಸವಣ್ಣನವರ ವಚನ ತತ್ವದ ಮೇಲೆ ರೂಪಗೊಂಡಿವೆ. ಬಸವಣ್ಣನವರು ಕೇವಲ ಭಾರತ ದೇಶಕ್ಕೆ ಮಾತ್ರವಲ್ಲದೆ ಇಡಿ ಜಗತ್ತಿಗೆ ವಿಶ್ವಗುರುವಾಗಿದ್ದಾರೆ ಎಂದರು.
ನಂತರ ಕಾಲೇಜಿನ ಹಿರಿಯ ಉಪನ್ಯಾಸಕ ಕೆ.ನಾಗಬಸಯ್ಯ ಮಾತನಾಡಿ ಭಾರತದ ಸಂವಿಧನಾದ ಭಾಗ ೩ ಬಸವಣ್ಣನವರ ವಚನ ಸಿದ್ದಾಂತದ ಅಡಿಯಲ್ಲಿಯೆ ನಿರೂಪಿಸಲಾಗಿ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ದೊರಬೇಕು ಎಂಬುದು ಬಸವಣ್ಣನವರ ಕನಸ್ಸು ಆಗಿತ್ತು ಎಂದರು
ಕಾಲೇಜಿನ ಪ್ರಾಚಾರ್ಯರಾದ ಡಾ: ಬಿ.ಎಸ್. ಹನಸಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಬಸವಣ್ಣನವರು ಒಂದು ಜಾತಿಗೆ ಸೀಮಿತವಾಗಿಲ್ಲ ಇಡಿ ಮಾನವ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ನಮ್ಮ ಸಮಾಜದಲ್ಲಿ ಈಗಲೂ ಕೂಡ ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಆದ್ದರಿಂದ ಜಾತಿ ವ್ಯವಸ್ಥೆ ಹೋಗಲಾಡಿಸುವದು ನಮ್ಮ ನಿಮ್ಮಲ್ಲೆರ ಕರ್ತವ್ಯವಾಗಿದ ಎಂದರು. ಇದಕ್ಕಾಗಿ ಡಾ : ಬಿ.ಆರ್.ಅಂಬೇಡ್ಕರವರು ಎಷ್ಟೇ ಪ್ರಯತ್ನಿಸಿದರು ಜಾತಿ ಪದ್ಧತಿ ನಿರ್ಮೂಲನೆಯಾಗದಿರುವದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಉಪನ್ಯಾಸಕಿ ಶ್ರೀಮತಿ ಉಷಾದೇವಿ ಹಿರೇಮಠ ವಹಿಸಿದ್ದರು ಕಾರ್ಯಕ್ರಮದಕಲ್ಲಿ ಉಪನ್ಯಾಸಕರಾದ ಬಸವರಾಜ ಎಸ್.ಎಂ, ಸೈಯದ ಕುಸ್ರದ್ ಶ್ವೇತಾ ಚಲವಾದಿ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ,ರಾಕೇಶ ಪಾನಘಂಟಿ,ಮಲ್ಲಿಕಾರ್ಜುನ ಬನ್ನಿಕೊಪ್ಪ,ರಾಜೇಂದ್ರಪ್ರಸಾದ ಗಂಗನಗೌಡ ಭರಮಗೌಡ್ರ ಸೇರಿದಂತೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೂರಹ್ಮದ ಸ್ವಾಗತಿಸಿದರು,ಪರಸಪ್ಪ ಆಡಿನ ಪ್ರಾರ್ಥಿಸಿದರು ,ಪುಷ್ಪಾರ್ಣೆಯನ್ನು ಮಹಾಂತೇಶ ಭೀಮನಗೌಡ್ರ ನೆರವೆರಿಸಿದರು,ಕುಮಾರಿ ಮಹಾಲಕ್ಷ್ಮೀ ನಿರೂಪಿಸಿದರು,ಮಂಜುನಾಥ ಅರಕೇರಿ ವಂದಿಸಿದರು.

Leave a Reply