ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್ ನಾಶಪಡಿಸುವ ಯಂತ್ರ ಬಳಕೆ ಕಡ್ಡಾಯ – ಎನ್.ಕೆ. ತೊರವಿ.

ಕೊಪ್ಪಳ, ಏ-19- ಸ್ವಚ್ಛತೆ ಹಾಗೂ ಆರೋಗ್ಯ ದೃಷ್ಟಿಯಿಂದ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆಯಾಗುತ್ತಿದ್ದು, ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್ ಅನ್ನು ಸುಟ್ಟು ನಾಶಪಡಿಸುವ ಯಂತ್ರಗಳನ್ನು ಸ್ವಚ್ಛ ಭಾರತ ಮಿಷನ್ ಯೊಜನೆಯಡಿ ಜಿಲ್ಲೆಯ ಆಯ್ದ ೭೪ ಪ್ರೌಢಶಾಲೆಗಳಿಗೆ ವಿತರಿಸಲಾಗಿದ್ದು, ಕಡ್ಡಾಯವಾಗಿ ಯಂತ್ರಗಳನ್ನು ಬಳಸುವಂತೆ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ಮುಖ್ಯ ಶಿಕ್ಷಕರುಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆಗಳಿಗೆ, ಬಳಸಿದ ಸ್ಯಾನಿಟರಿ ನ್ಯಾಪಕೀನ್ ನಾಶಪಡಿಸುವ ಯಂತ್ರಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಯಂತ್ರಗಳ ಬಳಕೆ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪ್ರಾತ್ಯಕ್ಷಿಕೆ ಕಾರ್ಯಗಾರದಲ್ಲಿ ಭಾಗವಹಿಸಿ DSC_0095ಅವರು ಮಾತನಾಡಿದರು. ಸ್ವಚ್ಛತೆ ಮತ್ತು ಶುಚಿತ್ವವೇ ಸ್ವಚ್ಛ ಭಾರತ ಮಿಷನ್‌ನ ಉದ್ದೇಶವಾಗಿದೆ. ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿನಿಯರ ಆರೋಗ್ಯ ದೃಷ್ಟಿಯಿಂದ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ ಕಾರ್ಯಕ್ರಮ ಈಗಾಗಲೆ ಜಾರಿಯಲ್ಲಿದ್ದು, ಬಳಸಿದ ನ್ಯಾಪ್‌ಕಿನ್ ನಾಶಪಡಿಸುವ ಯಂತ್ರವನ್ನು ಈ ಹಿಂದೆ ಜಿಲ್ಲೆಯ ಆಯ್ದ ೨೪ ಪ್ರೌಢಶಾಲೆಗಳಿಗೆ ವಿತರಿಸಲಾಗಿದೆ. ಬಳಸಿದ ನ್ಯಾಪ್‌ಕಿನ್ ನಾಶಪಡಿಸುವ ಯಂತ್ರದ ಪ್ರತಿಯೊಂದು ಘಟಕದ ವೆಚ್ಚ ೧೧೫೦೦ ರೂ. ಗಳಾಗಿದ್ದು, ಇದೀಗ ಮತ್ತೆ ೫೦ ಪ್ರೌಢಶಾಲೆಗಳಿಗೆ ವಿತರಿಸಲಾಗುತ್ತಿದೆ. ಯಂತ್ರಗಳನ್ನು ಪಡೆದುಕೊಳ್ಳುತ್ತಿರುವ ಶಾಲೆಗಳು, ಯಂತ್ರಗಳನ್ನು ಬಳಸುವುದು ಕಡ್ಡಾಯವಾಗಿದೆ. ಯಂತ್ರಗಳನ್ನು ಶಾಲೆಯ ಶೌಚಾಲಯದ ಬಳಿ, ಮರೆ ಮಾಡಿರುವಂತಹ ಸ್ಥಳದಲ್ಲಿ ಇರಿಸಿ, ಅದನ್ನು ಕಡ್ಡಾಯವಾಗಿ ಬಳಸಬೇಕು. ಅಲ್ಲದೆ ವಿದ್ಯಾರ್ಥಿನಿಯರಿಗೆ ಈ ಕುರಿತು ಅರಿವು ಮೂಡಿಸಬೇಕು ಎಮದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ಅವರು ಶಿಕ್ಷಕರಿಗೆ ಸೂಚನೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಮಾತನಾಡಿ, ಸ್ವಚ್ಛತೆ ಹಾಗೂ ಶುಚಿತ್ವ ಇರುವೆಡೆ ಉತ್ತಮ ಆರೋಗ್ಯ ಇರುತ್ತದೆ. ಆರೋಗ್ಯ ಉತ್ತಮವಾಗಿದ್ದರೆ, ಮಕ್ಕಳ ಕಲಿಕಾ ಸಾಮರ್ಥ್ಯವೂ ಚೆನ್ನಾಗಿರುತ್ತದೆ. ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್ ಗಳನ್ನು ನಾಡಪಡಿಸುವ ಯಂತ್ರಗಳನ್ನು ಈಗಾಗಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಬಳಸುತ್ತಿದ್ದಾರೆ. ಈ ಹಿಂದೆ ಜಿಲ್ಲೆಯ ೨೪ ಶಾಲೆಗಳಿಗೆ ಯಂತ್ರಗಳನ್ನು ವಿತರಿಸಲಾಗಿತ್ತು. ಆದರೆ ಸಮರ್ಪಕವಾಗಿ ಬಳಕೆಯಾಗುತ್ತಿರಲಿಲ್ಲ. ಶಿಕ್ಷಕರು ಇಂತಹ ಉತ್ತಮ ಯೋಜನೆಗಳ ಬಗ್ಗೆ ಈ ರೀತಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದರು.
ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್, ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಸೇರಿದಂತೆ ಸಿ.ಆರ್.ಪಿ. ಗಳು, ಯಂತ್ರಗಳನ್ನು ಪಡೆಯುತ್ತಿರುವ ಶಾಲೆಗಳ ಮುಖ್ಯ ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸುಟ್ಟು ನಾಶಪಡಿಸುವ ಯಂತ್ರ ಉಪಯೋಸುವುದರ ಕುರಿತು ಶಿಕ್ಷಕರಿಗೆ, ಜಿಲ್ಲಾ ಪಂಚಾಯತಿ ಕಚೇರಿಯ ಹೊರಾಂಗಣದಲ್ಲಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು.

Please follow and like us:
error